ಸ್ಲಾಟ್​​ ಒಂದು.. ಪೈಪೋಟಿ ಇಬ್ಬರ ನಡುವೆ.. ಇಬ್ಬರು ಶಿಷ್ಯರಲ್ಲಿ ದ್ರಾವಿಡ್​ ಕೃಪಟಾಕ್ಷ ಯಾರಿಗೆ?

ಸ್ಲಾಟ್​​ ಒಂದು.. ಪೈಪೋಟಿ ಇಬ್ಬರ ನಡುವೆ.. ಇಬ್ಬರು ಶಿಷ್ಯರಲ್ಲಿ ದ್ರಾವಿಡ್​ ಕೃಪಟಾಕ್ಷ ಯಾರಿಗೆ?

ಸ್ಲಾಟ್​​ ಒಂದು.. ಪೈಪೋಟಿ ಇಬ್ಬರ ನಡುವೆ..! ಒಂದು ಸ್ಥಾನಕ್ಕಾಗಿ ಫೈಟ್​​ ನಡೆಸ್ತಾ ಇರೋ ಇಬ್ಬರೂ, ದ್ರಾವಿಡ್​​ ಶಿಷ್ಯರು…! ಲಂಕಾ ಪ್ರವಾಸದಲ್ಲಿ ಸ್ಥಾನಕ್ಕಾಗಿ ಫೈಟ್​​ ನಡೆಸ್ತಾ ಇರೋ ಆಟಗಾರರು ಯಾರು..? ಯಾರಿಗೆ ಅವಕಾಶ ಸಿಗೋ ಸಾಧ್ಯತೆ ಹೆಚ್ಚಿದೆ..? ಅನ್ನೋದ್ರ ವಿವರ ಇಲ್ಲಿದೆ.

ಲಂಕಾ ಸರಣಿ ಆರಂಭಕ್ಕೆ ಕೌಂಟ್​​ಡೌನ್​ ಆರಂಭವಾಗುತ್ತಿದ್ದಂತೆ, ಸ್ಥಾನಕ್ಕಾಗಿ ಪೈಪೋಟಿಯೂ ತೀವ್ರವಾಗ್ತಿದೆ. ತಂಡದಲ್ಲಿರುವ ಪ್ರತಿಯೊಂದು ಸ್ಲಾಟ್​​ಗೂ, ಫೈಟ್.​! ಇರೋ 20 ಜನರಲ್ಲಿ 11 ಆಟಗಾರರನ್ನ ಆಯ್ಕೆ ಮಾಡಿಕೊಳ್ಳೋದು, ಮ್ಯಾನೇಜ್​ಮೆಂಟ್​​ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ವಿಕೆಟ್​​ ಕೀಪರ್​ ಕೋಟಾದಲ್ಲಿ ಸ್ಥಾನಕ್ಕಾಗಿ ಲಾಭಿ ನಡೆಸ್ತಾ ಇರೋ ಇಶಾನ್​ ಕಿಶನ್​, ಸಂಜು ಸ್ಯಾಮ್ಸನ್​ ಆಯ್ಕೆ, ಕೋಚ್​​ – ಕ್ಯಾಪ್ಟನ್​ ತಲೆ ಬಿಸಿ ಹೆಚ್ಚಿಸಿದೆ.

blank

ಇದನ್ನೂ ಓದಿ: ಲಂಕಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ರೂ ಈ ಐವರಿಗೆ ಮತ್ತೆ ಅವಕಾಶ ಸಿಗಲ್ವಾ?

ಡ್ರೀಮ್​ ಡೆಬ್ಯೂ ಮಾಡೋ ಉತ್ಸಾಹದಲ್ಲಿ ಇಶಾನ್ ಕಿಶನ್..?
ಕಳೆದ ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಡ್ರೀಮ್​ ಡೆಬ್ಯೂ ಮಾಡಿರುವ ಇಶಾನ್​ ಕಿಶನ್, ಒಂಡೇ ಕ್ರಿಕೆಟ್​​ ಎಂಟ್ರಿಗೆ ಸಿದ್ಧರಾಗಿದ್ದಾರೆ. ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಭರವಸೆ ಮೂಡಿಸಿರುವ ಇಶಾನ್​, ಐಪಿಎಲ್​ ಟ್ರ್ಯಾಕ್​ ರೆಕಾರ್ಡ್ ಕೂಡ ಉತ್ತಮವಾಗೇ ಇದೆ. ಓಪನರ್​​ ಆಗಿ ಮಾತ್ರವಲ್ಲ. ಮಿಡಲ್​ ಆರ್ಡರ್​​​ನಲ್ಲೂ ಮೋಡಿ ಮಾಡಬಲ್ಲ ಸಾಮರ್ಥ್ಯ ಕಿಶನ್​ಗಿದೆ. ಆದ್ರೆ ಅರ್ಧಕ್ಕೆ ನಿಂತಿರುವ 14ನೇ ಆವೃತ್ತಿಯ ಐಪಿಎಲ್​ನಲ್ಲಿ, ಕಳಪೆ ಸಾಧನೆ ಆಯ್ಕೆಗೆ ಮುಳುವಾಗೋ ಸಾಧ್ಯತೆಯಿದೆ.

ಈಡೇರುತ್ತಾ ಬಹುಕಾಲದ ಸಂಜು ಸ್ಯಾಮ್ಸನ್​ ಕನಸು..?
2014ರಲ್ಲೇ ಏಕದಿನ ತಂಡಕ್ಕೆ ಆಯ್ಕೆಯಾದ್ರೂ, ಇನ್ನೂ ಪದಾರ್ಪಣೆ ಮಾಡದಿರೋ ಸಂಜು ಸ್ಯಾಮ್ಸನ್. ವಿಕೆಟ್​ ಕೀಪರ್​​ ಹಾಗೂ ಮಿಡಲ್​ ಆರ್ಡರ್​ ಬ್ಯಾಟ್ಸ್​ಮನ್​ ಆಗಿ ತಂಡಕ್ಕೆ ನೆರವಾಗೋ ಸಾಮರ್ಥ್ಯ, ಸಂಜುಗಿದೆ. ಐಪಿಎಲ್​, ಡೊಮೆಸ್ಟಿಕ್ ಕ್ರಿಕೆಟ್ ಹೊರತಾಗಿ, 7 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನಾಡಿದ ಅನುಭವೂ, ಸ್ಯಾಮ್ಸನ್​ಗಿದೆ. ಆದ್ರೆ ರಾಷ್ಟ್ರೀಯ ತಂಡದ ಪರ ಸಿಕ್ಕ 7 ಅವಕಾಶಗಳಲ್ಲೂ, ಸಂಜು ಎಡವಿದ್ದಾರೆ. ಇದೇ ಸಂಜು ಸೆಲೆಕ್ಷನ್​ ಆಗ್ತಾರಾ ಇಲ್ವಾ ಅನ್ನೋ ಅನುಮಾನ ಮೂಡಿಸಿದೆ.

ಇದನ್ನೂ ಓದಿ: ಇಶಾಂತ್​​-ಬುಮ್ರಾರನ್ನ ಸೈಡ್​ಲೈನ್​ ಮಾಡ್ತಾರಾ ಸಿರಾಜ್? ಮ್ಯಾನೇಜ್​ಮೆಂಟ್​ ಒಲವು ಯಾರ ಕಡೆ?

blank

ಇಶಾನ್​ ಕಿಶನ್​ಗಿಂತ ಸಂಜು ಸ್ಯಾಮ್ಸನ್​ 5 ಪಂದ್ಯಗಳನ್ನ ಹೆಚ್ಚಾಗಿ ಆಡಿದ್ರೂ, ಅನುಭವಿ ಎಂದು ಪರಿಗಣಿಸೋದು ಅಸಾಧ್ಯ. ಈಗಾಗಲೇ ಮಾಜಿ ಕ್ರಿಕೆಟಿಗ ಸಂಜಯ್​ ಮಂಜ್ರೇಕರ್​​ ಸೇರಿದಂತೆ ಹಲವರು, ಸಂಜುಗಿಂತ ಕಿಶನ್​ ಬೆಸ್ಟ್​ ಎಂಬ ಅಭಿಪ್ರಾಯ ತಿಳಿದಿದ್ದಾರೆ. ವಿಪರ್ಯಾಸ ಅಂದ್ರೆ, ಈ ಇಬ್ಬರು ಪಳಗಿರೋದು ದ್ರಾವಿಡ್​​​ ಗರಡಿಯಲ್ಲೇ. ಹೀಗಾಗಿ ಕೋಚ್ ರಾಹುಲ್​ ಕೃಪಾಕಟಾಕ್ಷ ಯಾರಿಗಿದೆ ಅನ್ನೋದು, ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ಕೊರೊನಾ ಎಫೆಕ್ಟ್; ಭಾರತ- ಶ್ರೀಲಂಕಾ ಕ್ರಿಕೆಟ್ ಸರಣಿ 5 ದಿನ ಮುಂದೂಡಿದ ಬಿಸಿಸಿಐ

The post ಸ್ಲಾಟ್​​ ಒಂದು.. ಪೈಪೋಟಿ ಇಬ್ಬರ ನಡುವೆ.. ಇಬ್ಬರು ಶಿಷ್ಯರಲ್ಲಿ ದ್ರಾವಿಡ್​ ಕೃಪಟಾಕ್ಷ ಯಾರಿಗೆ? appeared first on News First Kannada.

Source: newsfirstlive.com

Source link