ದಿವ್ಯಾರ ತಪ್ಪುಗಳನ್ನ ಖಡಕ್​​ ಆಗಿ ತಿದ್ದಿ ಹೇಳಿದ ಕಿಚ್ಚ.. ಗಳಗಳನೆ ಅತ್ತ ಉರುಡುಗ 

ದಿವ್ಯಾರ ತಪ್ಪುಗಳನ್ನ ಖಡಕ್​​ ಆಗಿ ತಿದ್ದಿ ಹೇಳಿದ ಕಿಚ್ಚ.. ಗಳಗಳನೆ ಅತ್ತ ಉರುಡುಗ 

ಬಿಗ್​ ಬಾಸ್​ ಮನೆಯ ಇಡೀ ವಾರದ ವಾದ-ಪ್ರತಿವಾದಗಳ ಬಗ್ಗೆ ಕಿಚ್ಚ ಸುದೀಪ್​ ಅವರು ಯಾವ ರೀತಿ ಪಂಚಾಯ್ತಿ ಮಾಡ್ತಾರೆ. ಯಾವೆಲ್ಲಾ ವಿಷಯಗಳು ಹೊರ ಬರುತ್ತವೆ ಎಂಬುವುದನ್ನು ನೋಡುವುದಕ್ಕೆ ವೀಕ್ಷಕರು ಕುತೂಹಲದಿಂದ ವಾರದ ಕತೆ ಕಿಚ್ಚನ ಜೊತೆ ನೋಡಲು ಕಾತರದಿಂದ ಕಾಯ್ತಿರ್ತಾರೆ. ಅದರಂತೆ ಈ ವಾರವೂ ಕೂಡ ಸಾಕಷ್ಟು ತಪ್ಪುಗಳಿಗೆ ಸುದೀಪ್​ ಖಡಕ್​ ಆಗಿ ವಾರ್ನ್​ ಮಾಡಿದ್ದಾರೆ.

ಕಳೆದ ವಾರ ದಿವ್ಯಾ ಉರುಡುಗ ಅವರ ಕ್ಯಾಪ್ಟನ್​​ಶಿಪ್ ಕುರಿತು ಒಂದಿಷ್ಟು ಬಿಸಿ ಬಿಸಿ ಚರ್ಚೆಯಾಯಿತು. ಅಷ್ಟೇ ಅಲ್ಲ ದಿವ್ಯಾ ಅವರು ಯಾವೆಲ್ಲಾ ತಪ್ಪು ಮಾಡಿದ್ದಾರೆ ಎಂಬುವುದನ್ನು ಸುದೀಪ್​ ಎಳೆ ಎಳೆಯಾಗಿ ಬಿಚ್ಚಿಟ್ಟರು.

blank

ಸದಸ್ಯರಿಗೆ ದಿವ್ಯಾ ಅವರು ಕ್ಯಾಪ್ಟನ್​​ಶಿಪ್​​ನಲ್ಲಿ ಪಾರ್ಷಾಲಿಟಿ ಮಾಡಿದ್ರಾ ಎಂದು ಸುದೀಪ್​ ಅವರು ಪ್ರಶ್ನೆ ಕೇಳಿದ್ರು…ಇದಕ್ಕೆ ಪ್ರಶಾಂತ್​ ಅವರನ್ನು ಹೊರತುಪಡೆಸಿ ಉಳಿದ ಸದಸ್ಯರು ಇಲ್ಲ ಎಂದು ಉತ್ತರಿಸ್ತಾರೆ. ನಂತರ ಸುದೀಪ್​ ದಿವ್ಯಾ ಅವರ ಕ್ಯಾಪ್ಟನ್​​ಶಿಪ್ ಬಗ್ಗೆ ಮೆಚ್ಚುಗೆನೂ ವ್ಯಕ್ತಪಡಿಸ್ತಾರೆ. ಆದಾದ ಮೇಲೆ ನೋಡಿ ಅಸಲಿ ಕಹಾನಿ ಶುರುವಾಗಿದ್ದು.

ಮೊದಲಿಗೆ ಕ್ಯಾಪ್ಟ್​ನ್​ಶಿಪ್​ ಆಯ್ಕೆ ಟಾಸ್ಕ್​ನಲ್ಲಿ ಅರವಿಂದ್​ ಅವರು ಕೀ ಟ್ರೈ ಮಾಡಿ ಅಲ್ಲೇ ಇಡ್ತಾರೆ. ಇದು ಫೌಲ್​ ಎಂದು ಪ್ರಶಾಂತ್​ ಹೇಳಿದ್ರು, ದಿವ್ಯಾ ಅವರು ಅರವಿಂದ್​ ಅವರಿಗೆ ವಾರ್ನ್​ ಮಾಡ್ಲಿಲ್ಲ. ಅದೇ ಶಮಂತ್​ ಅವರು ರೂಲ್ಸ್​ ಬ್ರೇಕ್​ ಮಾಡಿ ಎರಡು ಕೀ ತೊಗೊಂಡು ಹೋಗಲು ಪ್ರಯತ್ನಿಸಿದಾಗ ಖಡಕ್​ ಆಗಿ ಎಚ್ಚರಿಕೆ ನೀಡ್ತೀರಿ. ಈ ವಾರ್ನಿಂಗ್​ ಅರವಿಂದ್​ ಅವರ ವಿಚಾರದಲ್ಲಿ ಯಾಕೆ ಬರಲಿಲ್ಲ ಎಂದು ಕೇಳ್ತಾರೆ.

blank

ನಂತರ ಮೊಟ್ಟೆ ಒಡೆಯುವ ಟಾಸ್ಕ್​​ನಲ್ಲಿ ಬಾತ್​ ರೂಂನಲ್ಲಿ ಬಚ್ಚಿಟ್ಕೋತ್ತಾರೆ. ಆ ಸಮಯದಲ್ಲಿ ಬಜರ್​ ಆಗುತ್ತೆ. ಅಲ್ಲಿಂದಲ್ಲೆ ಎಲ್ಲರೂ ಏಪ್ರಾನ್​ ಎತ್ಕೋತ್ತಾರೆ. ಆವಾಗ ರೂಲ್ಸ್​ ಮಾಡಿದ್ರಿ ಓಕೆ. ಶಮಂತ್​ ಅವರು ಬಂದಾಗ ಯಾಕೆ ನೀವು ಅದನ್ನು ಕನ್ಸಿಡರ್​ ಮಾಡ್ಲಿಲ್ಲ. ರೂಲ್ಸ್​ ಮಾಡ್ಕೊಂಡ್ರಿ, ಕೆಲವು ಬದಲಾದವು. ಓಕೆ ಸಮಸ್ಯೆ ಇಲ್ಲ. ಆದರೆ ರೂಲ್ಸ್​ ಬದಲಾಗಿರುವುದನ್ನು ಎಲ್ಲರಿಗೂ ಹೇಳಿದ್ರಾ ಎಂದು ಕೇಳ್ತಾರೆ. ಇದಕ್ಕೆ ದಿವ್ಯಾ ಕಕ್ಕಾಬಿಕ್ಕಿಯಾಗ್ತಾರೆ.

ಇನ್ನೂ ಶಂಮತ್​ ಅವರಿಗೆ ಕ್ಲಾಸ್​ ತೆಗೆದುಕೊಂಡ ಸುದೀಪ್​, ನೀವು ಬಾತ್​ ರೂಂಗೆ ಹೋಗಿರಲಿಲ್ಲ. ಬಜರ್​ಗೆ ವೇಟ್​ ಮಾಡ್ತಿದ್ರಿ. ಅದನ್ನು ಜನ ನೋಡಿದ್ದಾರೆ ಎನ್ನುತ್ತಾರೆ.

blank

ಮಂಜು ಹಾಗೂ ಪ್ರಶಾಂತ್​ ಅವರ ಏಪ್ರಾನ್​ ಕಿತ್ತಾಟದ ಕುರಿತು ವಿಷಯ ತೆಗೆದುಕೊಂಡ ಸುದೀಪ್​, ಇಲ್ಲಿ ಕ್ಲಾರಿಟಿ ಇರಲಿಲ್ಲ. ಆದರೆ ದಿವ್ಯಾ ನೀವು ತೆಗೆದುಕೊಂಡ ನಿರ್ಧಾರ ಸರಿಯಿತ್ತಾ? ಇಲ್ಲಿ ಮೂವರದು ತಪ್ಪಿತ್ತು. ಕೆಲ ಪಾಯಿಂಟ್​ಗಳು ಕೂಡ ಸರಿ ಇತ್ತು. ಆದರೆ ನೀವು ಸ್ಪಾಂಟ್ಯಾನಿಟಿ ಬಳಸಿ ಪರಿಹಾರ ನೀಡಿ, ಕ್ಯಾಪ್ಟನ್​ ಇದ್ರೆ ಹೀಗೆ ಇರ್ಬೇಕು ಅಂತಾ ಒಂದು ಮಾದರಿ ಸೆಟ್​ ಮಾಡ್ಬಹುದಿತ್ತು. ಇದಕ್ಕೆ ದಿವ್ಯಾ, ನಾನು ಫೇರ್​ ಆಗಿ ಇರಬೇಕು ಎಂದು ಆ ರೀತಿ ಮಾಡಿದೆ ಎಂದು ಕಣ್ಣೀರು ಇಡುತ್ತಾರೆ.

ಕೆಲವು ತಪ್ಪುಗಳು ಆಗಿದ್ದು ನಿಮಗೆ ಗೊತ್ತಾಗಿಲ್ಲ ಅನ್ನುವ ಕಾರಣಕ್ಕೆ ಈ ವಿಚಾರಗಳನ್ನು ಹೇಳಿದೆ. ನಿಮ್ಮ ತಪ್ಪುಗಳನ್ನು ತೋರಿಸಬೇಕು ಎಂಬ ಉದ್ದೇಶ ಅಲ್ಲ. ನಿಮ್ಮ ಬಗ್ಗೆ ನಮಗೆ ಗೌರವ ಇದೆ. ಸ್ಪರ್ಧಿಗಳ ಒಪಿನಿಯನ್​ನ್ನು ಕನ್ಸಿಡರ್​ ಮಾಡಿ ಮುಂದುವರೆದಿದ್ರೆ ಚೆನ್ನಾಗಿ ಇರುತಿತ್ತು ಎಂಬುವುದು ಅಷ್ಟೇ ಎನ್ನುತ್ತಾರೆ ಕಿಚ್ಚಾ.​​

The post ದಿವ್ಯಾರ ತಪ್ಪುಗಳನ್ನ ಖಡಕ್​​ ಆಗಿ ತಿದ್ದಿ ಹೇಳಿದ ಕಿಚ್ಚ.. ಗಳಗಳನೆ ಅತ್ತ ಉರುಡುಗ  appeared first on News First Kannada.

Source: newsfirstlive.com

Source link