ನೀವು ಹೊಸ ಚಹಲ್​​ರನ್ನ ನೋಡ್ತಿರಾ ಅಂದಿದ್ಯಾಕೆ ಲೆಗ್​ಸ್ಪಿನ್ನರ್..?

ನೀವು ಹೊಸ ಚಹಲ್​​ರನ್ನ ನೋಡ್ತಿರಾ ಅಂದಿದ್ಯಾಕೆ ಲೆಗ್​ಸ್ಪಿನ್ನರ್..?

ಕಳೆದೆರಡು ವರ್ಷಗಳಿಂದ ಚಹಲ್​​, ವೈಫಲ್ಯ ಅನುಭವಿಸ್ತಿದ್ದಾರೆ​. ಫಾರ್ಮ್​ಗೆ ಮರಳಲು ಪರದಾಡ್ತಿದ್ದಾರೆ. ಸದ್ಯ ತಂಡದಲ್ಲಿ ಖಾಯಂ ಸ್ಥಾನ ಪಡೆಯಲು ಹೋರಾಟ ನಡೆಸ್ತಿರುವ ಚಹಲ್​ಗೆ, ಲಂಕಾ ಪ್ರವಾಸದಲ್ಲಿ ತಾನೇನು ಅಂತ ಪ್ರೂವ್​ ಮಾಡಬೇಕಿದೆ.

ಟೀಮ್​​ ಇಂಡಿಯಾಗೆ ಕಾಲಿಟ್ಟಾಗಿನಿಂದ ಹಿಂದಿರುಗಿ ನೋಡದ ಲೆಗ್​ ​​ಸ್ಪಿನ್ನರ್​ ಯುಜುವೇಂದ್ರ ಚಹಲ್​, ನೀಡ್ತಿದ್ದದ್ದು ಗೇಮ್​ ಚೇಂಜಿಂಗ್​ ಪರ್ಫಾಮೆನ್ಸ್​. ಆದರೆ 2019ರ ವಿಶ್ವಕಪ್​ ನಂತರ ಚಹಲ್​​ರ​​​ ಕೈಚಳಕ ನಡೆಯುತ್ತಿಲ್ಲ. ವಿಕೆಟ್​​ ಟೇಕರ್​​​ ಆಗಿ ತಂಡದಲ್ಲಿ ಗುರುತಿಸಿಕೊಂಡಿದ್ದ ಚಹಲ್​, ಸದ್ಯ ವಿಕೆಟ್​​​ ಪಡೆಯಲು ಹರಸಾಹಸ ಪರದಾಡ್ತಿದ್ದಾರೆ. ಪರಿಣಾಮ, ಚಹಲ್​ ಈಗ ಕೇವಲ ಬೆಂಚ್​ಗೆ ಮಾತ್ರ ಸೀಮಿತವಾಗಿದ್ದಾರೆ.

blank

ಕಳೆದೆರಡು ವರ್ಷಗಳ ವೈಫಲ್ಯ ಅಷ್ಟೇ ಅಲ್ಲ. ಸ್ಪಿನ್ನರ್​​ಗಳ ಕಾಂಪಿಟೇಷನ್​​ ಕೂಡ, ಚಹಲ್​​ರನ್ನೇ ಮುಳುಗಿಸುವ ಹಂತಕ್ಕೆ ಬಂದಿದೆ. ಆಸಿಸ್​-ಇಂಗ್ಲೆಂಡ್​ ಸರಣಿಗಳಲ್ಲಿ, ಏಕದಿನ ತಂಡಕ್ಕೆ ಚಾನ್ಸ್​ ಸಿಗದೆ ಪರದಾಡಿದ್ರು. IPL​​​ನಲ್ಲೂ ವಿಕೆಟ್​​​​ಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ರು. ಇದರಿಂದ ಚಹಲ್​​, ಆತ್ಮವಿಶ್ವಾಸವೇ ಕುಗ್ಗಿದೆ.

ಸದ್ಯ ಲಂಕಾ ಸರಣಿಯಲ್ಲಿ ಚಹಲ್, ರಾಷ್ಟ್ರೀಯ ತಂಡಕ್ಕೆ ಸ್ಟ್ರಾಂಗ್​ ಕಮ್​ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ. ಹಾಗೇ ವೈಟ್​ಬಾಲ್ ಫಾರ್ಮೆಟ್ ಜೊತೆಗೆ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ.​ ಅದಕ್ಕಾಗಿ ಚಹಲ್ ಭರ್ಜರಿ ಸಿದ್ಧತೆ ನಡೆಸಿಕೊಂಡಿದ್ದಾರೆ. ಬದಲಾವಣೆಯ ಅಸ್ತ್ರದೊಂದಿಗೆ ಕಣಕ್ಕಿಳಿಯಲು ಮುಂದಾಗಿದ್ದಾರೆ.

ನೀವು ಹೊಸ ಚಹಲ್​​ರನ್ನ ನೋಡ್ತಿರಾ ಎಂದ ಯುಜಿ!
ಈ ಹಿಂದಿನ ಸ್ಪಿನ್​​ಗಿಂತಲೂ ಪ್ರಸ್ತುತ ನಾನು ಬದಲಿಸಿರುವ ಸ್ಪಿನ್​ ಪ್ರಯೋಗ,​ ಸಖತ್​ ಎಫೆಕ್ಟೀವ್​​ ಆಗಿರಲಿದೆ. ಲಂಕನ್ನರ ಮೇಲೆ ಹೊಸ ಅಸ್ತ್ರ ಪ್ರಯೋಗಕ್ಕೆ ಕಾನ್ಫಿಡೆನ್ಸ್​​ ಲೆವೆಲ್​ ಕೂಡ ಹೆಚ್ಚಾಗಿದೆ ಎಂದು ಚಹಲ್ ಹೇಳಿದ್ದಾರೆ.

‘ನನ್ನ ಇನ್ನೊಂದು ಭಾಗ ನೋಡ್ತೀರಾ’
‘ಶ್ರೀಲಂಕಾ ಸರಣಿಯಲ್ಲಿ ನನ್ನ ಮತ್ತೊಂದು ಭಾಗವನ್ನ ನೋಡಲಿದ್ದೀರಿ. ಬೌಲಿಂಗ್​​ನಲ್ಲಿ ಡಿಫ್ರೆಂಟ್​​ ವೇರಿಯೇಷನ್​​​ಗಳನ್ನ ಕಂಡುಕೊಳ್ಳಲು ಯತ್ನಿಸಿದ್ದೇನೆ. ಬೌಲಿಂಗ್ ಆ್ಯಂಗಲ್​​​​ ಕೂಡ​​ ಬದಲಾಯಿಸ್ತೀನಿ. ನನ್ನ ವೀಕ್ನೆಸ್​​ ಮೇಲೆ ವರ್ಕ್​ಔಟ್ ಮಾಡ್ತೇನೆ. ನನ್ನ ಪಾಲಿಗಂತೂ ಲಂಕಾ ಸರಣಿ, ಅತ್ಯಂತ ಮಹತ್ವದ್ದಾಗಿದೆ.’

ಯುಜುವೇಂದ್ರ ಚಹಲ್, ಸ್ಪಿನ್ನರ್​

ಮತ್ತೊಂದೆಡೆ ಅಕ್ಟೋಬರ್-ನವೆಂಬರ್​ನಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ. ಅಲ್ಲೂ ಕೂಡ ಸ್ಪಿನ್​ ವಿಭಾಗದಲ್ಲಿ​ ಪೈಪೋಟಿ ನಡೆಯುತ್ತಿದೆ. ರಾಹುಲ್​ ಚಹರ್, ವರುಣ್​ ಚಕ್ರವರ್ತಿ, ಚಹಲ್​​​ರನ್ನ ಸೈಡ್​​ಲೈನ್​ ಮಾಡೋಕೆ ಸಿದ್ಧರಿದ್ದಾರೆ. ಹಾಗಾಗಿ ಚಹಲ್​​ ಲಂಕಾ ಸರಣಿಯಲ್ಲಿ,​ ದಿ ಬೆಸ್ಟ್​​ ಪರ್ಫಾಮೆನ್ಸ್​ ನೀಡೋದು ಅನಿವಾರ್ಯವಾಗಿದೆ.

The post ನೀವು ಹೊಸ ಚಹಲ್​​ರನ್ನ ನೋಡ್ತಿರಾ ಅಂದಿದ್ಯಾಕೆ ಲೆಗ್​ಸ್ಪಿನ್ನರ್..? appeared first on News First Kannada.

Source: newsfirstlive.com

Source link