ಬಳ್ಳಾರಿ ಒಂದರಲ್ಲೇ 3ನೇ ಅಲೆ 15 ಸಾವಿರಕ್ಕೂ ಹೆಚ್ಚು ಮಕ್ಕಳನ್ನ ಕಾಡುವ ಎಚ್ಚರಿಕೆ

ಬಳ್ಳಾರಿ ಒಂದರಲ್ಲೇ 3ನೇ ಅಲೆ 15 ಸಾವಿರಕ್ಕೂ ಹೆಚ್ಚು ಮಕ್ಕಳನ್ನ ಕಾಡುವ ಎಚ್ಚರಿಕೆ

ಬಳ್ಳಾರಿ: ಕೊರೊನಾ ಮೂರನೇ ಅಲೆ ಎದುರಿಸಲು ಬಳ್ಳಾರಿ ಜಿಲ್ಲಾಡಳಿತ ಸಜ್ಜಾಗಿದ್ದು ಮುಂಜಾಗ್ರತಾ ಕ್ರಮವಾಗಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ತರಬೇತಿ ಆರಂಭಿಸಿದೆ.

ಗಣಿನಾಡಿನ 15 ಸಾವಿರ ಮಕ್ಕಳಿಗೆ ವೈರಸ್ ತಗಲುವ ಭೀತಿಯಿದೆ ಎಂಬ ತಜ್ಞರ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಮೂರನೇ ಅಲೆ ಎದುರಿಸಲು ಸನ್ನದ್ಧರಾಗಲು ವೈದ್ಯರಿಗೆ, ನರ್ಸ್‌ಗಳಿಗೆ ನಗರದ ಟ್ರಾಮಾ ಕೇರ್​ನಲ್ಲಿ ತರಬೇತಿ ಆರಂಭಿಸಿದೆ ಎಂದು ಬಳ್ಳಾರಿ ವಿಮ್ಸ್ ನಿರ್ದೇಶಕ ಡಾ. ಗಂಗಾಧರಗೌಡ ನ್ಯೂಸ್ ಫಸ್ಟ್​ಗೆ ಮಾಹಿತಿ ನೀಡಿದ್ದಾರೆ.

ನಿರ್ದೇಶಕ ಡಾ.ಗಂಗಾಧರಗೌಡ ನೇತೃತ್ವದಲ್ಲಿ ವಿಮ್ಸ್​ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ತಾಲೂಕಾ ಆಸ್ಪತ್ರೆಯ ವೈದ್ಯರು, ಮತ್ತು ಸಿಬ್ಬಂದಿಗೆ ಚಿಕಿತ್ಸೆ, ಔಷಧ, ಐಸಿಯು ನಿರ್ವಹಣೆ, ಮಕ್ಕಳ ಸಾವು ತಡೆಯುವ ಕುರಿತು ತರಬೇತಿಯನ್ನು ನೀಡಲಾಗ್ತಿದೆ ಎಂದು ತಿಳಿಸಿದ್ದಾರೆ. ಈ ತರಬೇತಿಯನ್ನು ಮುಂದಿನ ಮೂರು ತಿಂಗಳುಗಳವರೆಗೆ ನೀಡಲಾಗುವುದು ಎಂದಿದ್ದಾರೆ.

40 ಐಸಿಯು ಬೆಡ್‌ಗಳ ಸಿದ್ಧತೆ
ಇನ್ನು ವಿಶೇಷವಾಗಿ ಮಕ್ಕಳ ತಜ್ಞರ ಕೊರತೆ ನೀಗಿಸಲು 50ಕ್ಕೂ ಹೆಚ್ಚು ವೈದ್ಯರು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ 10 ದಿನಗಳ ಕಾಲ ತರಬೇತಿಯನ್ನು ನೀಡಲಾಗುವುದು ಎಂದಿದ್ದಾರೆ. ಜಿಲ್ಲಾ ಆಸ್ಪತ್ರೆ, ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಆಕ್ಸಿಜನ್, ವೆಂಟಿಲೇಟರ್ ಬೆಡ್‌ಗಳ ಸಿದ್ಧತೆ ಮಾಡಿದ್ದು ವಿಮ್ಸ್ ಆಸ್ಪತ್ರೆಯಲ್ಲಿ ಈಗಾಗಲೇ 180 ಆಕ್ಸಿಜನ್ ಬೆಡ್, 40 ಐಸಿಯು ಬೆಡ್‌ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜೊತೆಗೆ ಮಕ್ಕಳಿಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ಬೆಡ್​ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 2ನೇ ಅಲೆಯಲ್ಲಿ ಬಳ್ಳಾರಿ, ವಿಜಯನಗರ ಜಿಲ್ಲೆಯ 4500 ಮಕ್ಕಳಿಗೆ ವೈರಸ್​ ತಗುಲಿದ್ದು, ಈ ನಿಟ್ಟಿನಲ್ಲಿ 3ನೇ ಅಲೆಯಲ್ಲಿ ಕೊರೊನಾ ಮಣಿಸಲು ಜಿಲ್ಲಾಡಳಿತ ಸಂಪೂರ್ಣವಾಗಿ ಸನ್ನದ್ಧವಾಗಿದೆ ನಿಂತಿದೆ.

The post ಬಳ್ಳಾರಿ ಒಂದರಲ್ಲೇ 3ನೇ ಅಲೆ 15 ಸಾವಿರಕ್ಕೂ ಹೆಚ್ಚು ಮಕ್ಕಳನ್ನ ಕಾಡುವ ಎಚ್ಚರಿಕೆ appeared first on News First Kannada.

Source: newsfirstlive.com

Source link