ರಾಜ್ಯದ ಮೊದಲ ವಿಸ್ಟಾಡೋಮ್ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್​

ರಾಜ್ಯದ ಮೊದಲ ವಿಸ್ಟಾಡೋಮ್ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್​

ಮಂಗಳೂರು: ರಾಜ್ಯದ ಮೊದಲ ವಿಸ್ಟಾಡೋಮ್ ರೈಲು ಸಂಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಇಂದು ಚಾಲನೆ ನೀಡಿದರು.

blank

ವಿಸ್ಟಾಡೋಮ್ ಕೋಚ್ ಹೊಂದಿರುವ ರೈಲು ಮಂಗಳೂರು ಹಾಗೂ ಬೆಂಗಳೂರಿನ ನಡುವೆ ಪಶ್ಚಿಮ ಘಟ್ಟಗಳ ಮೂಲಕ ರೈಲು ಸಂಚರಿಸಲಿದ್ದು, ಪ್ರಯಾಣದ ಸಂದರ್ಭದಲ್ಲಿ ಪ್ರಕೃತಿಯ ರಮಣೀಯ ದೃಶ್ಯಗಳನ್ನು ವೀಕ್ಷಿಸಲು ಅನುಕೂಲವಾಗಲಿದೆ. ಸದ್ಯ ಚಾಲನೆ ನೀಡಲಾಗಿರುವ ರೈಲಿನಲ್ಲಿ ಎರಡು ವಿಸ್ಟಾಡೋಮ್ ಬೋಗಿಗಳಿದ್ದು, ಪ್ರತಿ ಬೋಗಿಯಲ್ಲಿ 44 ಆಸನ ಸಾಮರ್ಥ್ಯ ಹೊಂದಿದೆ. ಅಲ್ಲದೇ ಕೋಚ್‌ನಲ್ಲಿ ಸಿಸಿಟಿವಿ, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆ ಅಳವಡಿಸಲಾಗಿದೆ.

blank

ಇನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ್​​​​ ಕಾಮತ್, ಮೇಯರ್​​ ಪ್ರೇಮಾನಂದ ಶೆಟ್ಟಿ ಹಾಗೂ ರೈಲ್ವೆ ಅಧಿಕಾರಿಗಳು ಭಾಗಿಯಾಗಿದ್ದರು. ಇನ್ನು ವಿಸ್ಟಾಡೋಮ್ ರೈಲು ವಾರಕ್ಕೆ ಮೂರು ಬಾರಿ ಯಶವಂತಪುರ-ಮಂಗಳೂರು ಚಲಿಸಲಿದೆ. ವಿಸ್ಟಾಡೋಮ್​​ ಬೋಗಿಗಳನ್ನು ಚೆನ್ನೈನ ಇಂಟಿಗ್ರಲ್​​ ಕೋಚ್​ ಫ್ಯಾಕ್ಟರಿಯಲ್ಲಿ ತಯಾರಿಸಲಾಗಿದೆ.

blank

ಇನ್ನು ಮೊದಲ ಬಾರಿಗೆ ವಿಸ್ಟಾಡೋಮ್ ರೈಲಿನಲ್ಲಿ ಪ್ರಯಾಣಿಸುತ್ತಿರುವ ಕುರಿತು ಖುಷಿ ಹಂಚಿಕೊಂಡ ಅರ್ಚನಾ ಪ್ರಭು ಎಂಬವವರು, ವಿದೇಶಗಳಲ್ಲಿ ನಾವು ಇಂತಹ ವ್ಯವಸ್ಥೆ ನೋಡಿದ್ದೆ. ಆದರೆ ಆಗ ನಮ್ಮಲ್ಲಿ ಇಂತಹ ವ್ಯವಸ್ಥೆ ಯಾಕಿಲ್ಲ ಅನ್ನಿಸಿತ್ತು. ಆದರೆ ಈ ಸದ್ಯ ಕರ್ನಾಟಕದಲ್ಲೇ ವಿಸ್ಟಾಡೋಮ್ ರೈಲಿಗೆ ಚಾಲನೆ ನೀಡಿದ್ದು ಖುಷಿಯಾಗಿದೆ. ಇದರ ಮೊದಲ ಅನುಭವ ಪಡೆಯಲು ಮೊದಲ ದಿನವೇ ಟಿಕೆಟ್​ ಬುಕ್​ ಮಾಡಿದ್ದೇವೆ ಎಂದರು.

blank

blank

blank

blank

The post ರಾಜ್ಯದ ಮೊದಲ ವಿಸ್ಟಾಡೋಮ್ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್​ appeared first on News First Kannada.

Source: newsfirstlive.com

Source link