ಫೇಸ್‍ಬುಕ್ ನಲ್ಲಿ ಪರಿಚಯ – 2.50 ಲಕ್ಷ ರೂ. ಯುವಕನಿಗೆ ಪಂಗನಾಮ

ಹಾವೇರಿ: ಫೇಸ್‍ಬುಕ್‍ನಲ್ಲಿ ಪರಿಚಯವಾದ ವ್ಯಕ್ತಿಗೆ 2,50,000 ರೂಪಾಯಿಯನ್ನು ಫೋನ್ ಪೇ ಮತ್ತು ಪೇಟಿಎಂ ಮೂಲಕ ಹಣ ಹಾಕಿ ಯುವಕನೋರ್ವ ಮೋಸ ಹೋಗಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ನಗರದಲ್ಲಿ ನಡೆದಿದೆ.

ಒಂದು ವರ್ಷದ ಹಿಂದೆ ಹಾನಗಲ್ ಯುವಕನೊಬ್ಬನಿಗೆ ಫೇಸ್‍ಬುಕ್‍ನಲ್ಲಿ ಪರಿಚಯವಾದ ಮಲ್ಲನಗೌಡ ಎಂಬ ವ್ಯಕ್ತಿ ದೂರವಾಣಿ ಮೂಲಕ ಸಂಪರ್ಕಕ್ಕೆ ಬಂದು, ತನ್ನ ಗೆಳತಿ ಪೂರ್ವಿ ಶೇಟ್ ಅವರ ತಾಯಿಗೆ ಬ್ರೇನ್ ಟ್ಯೂಮರ್ ಆಗಿದೆ. ಅವಳಿಗೆ ಆಸ್ಪತ್ರೆ ಖರ್ಚಿಗೆ ಹಣಬೇಕು. ಎರಡು ಲಕ್ಷದ ಐವತ್ತು ಸಾವಿರ ರೂ. ಹಣ ನೀಡಿದರೆ ಆಕೆ ಗುಣವಾದ ಬಳಿಕ ತಾಯಿ 5 ಲಕ್ಷ ಕೊಡುವುದಾಗಿ ನಂಬಿಸಿ, ಹಣ ಪಡೆದಿದ್ದಾನೆ.

ಒಂದು ವರ್ಷದಿಂದ ನಿರಂತರವಾಗಿ 2,50,000 ಸಾವಿರ ಹಣ ಹಾಕಿಸಿಕೊಂಡು ಈಗ ಹಣ ಕೊಡದೇ ನಾಪತ್ತೆಯಾಗಿದ್ದಾರೆಂದು ಮೋಸ ಹೋದ ಯುವಕ, ಮಲ್ಲನಗೌಡ ಮತ್ತು ಆತನ ಗೆಳತಿ ಆತ್ಮ ಜೋಯ್ಸ್, ಪೂರ್ವಿ ಶೇಟ್ ಸೇರಿದಂತೆ ಮೂವರ ಮೇಲೆ ಹಾವೇರಿ ಸಿ.ಇ.ಎನ್.ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: 19ನೇ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಸ್ವೀಕಾರ

The post ಫೇಸ್‍ಬುಕ್ ನಲ್ಲಿ ಪರಿಚಯ – 2.50 ಲಕ್ಷ ರೂ. ಯುವಕನಿಗೆ ಪಂಗನಾಮ appeared first on Public TV.

Source: publictv.in

Source link