ಕೊಟ್ಟ ಮಾತು ತಪ್ಪಲಿಲ್ಲ, ಸಮಂತಾ ಪತಿಗಾಗಿ ಒಂದಾದ್ರಾ ಅಮಿರ್​​-ಕಿರಣ್ ರಾವ್?

ಕೊಟ್ಟ ಮಾತು ತಪ್ಪಲಿಲ್ಲ, ಸಮಂತಾ ಪತಿಗಾಗಿ ಒಂದಾದ್ರಾ ಅಮಿರ್​​-ಕಿರಣ್ ರಾವ್?

ಬಾಲಿವುಡ್​ನ ಮಿಸ್ಟರ್ ಫರ್ಫೆಕ್ಷನಿಷ್ಟ್ ಅಮಿರ್ ಖಾನ್ ತನ್ನ ಎರಡನೇ ಪತ್ನಿಗೆ ವಿಚ್ಛೇದನ ಕೊಟ್ಟಿರೋ ವಿಚಾರ ಬಾಲಿವುಡ್ ತುಂಬಾ ಹಾರಿದಾಡಿ ಸ್ಯಾಂಡಲ್​ವುಡ್ ತನಕ ಬಂದಿದ್ದು ನಿಮಗೆಲ್ಲ ಗೊತ್ತೇ ಇದೆ. ಈಗ ಆಮಿರ್ ಖಾನ್ ಮತ್ತು ಕಿರಣ್ ರಾವ್ ದಂಪತಿ ಹೇಳಿದಂತೆ ನಡೆದುಕೊಂಡಿದ್ದಾರೆ. ದೂರವಾದ್ರು ಒಂದಾಗಿ ಕೆಲಸ ಮಾಡ್ತಿದ್ದಾರೆ.

ಅಮಿರ್ ಖಾನ್.. ಬಾಲಿವುಡ್ ನ ಮಿಸ್ಟರ್ ಫರ್ಫೆಕ್ಷನಿಸ್ಟ್. ಕೊಂಚ ತಡವಾದ್ರು ಅದ್ಭುತ ಸಿನಿಮಾಗಳನ್ನ ಬಾಲಿವುಡ್ ಲೋಕಕ್ಕೆ ಕೊಟ್ಟು ಎಲ್ಲಾ ಸಿನಿ ಪ್ರೇಕ್ಷಕರು ಇಷ್ಟ ಪಡುವಂತೆ ಮಾಡುವ ಸಿನಿಮಾ ಸ್ಟಾರ್​​​.

blank

ದಂಗಲ್ ಸಿನಿಮಾದ ಮೂಲಕ ಸೂಪರ್ ಸಕ್ಸಸ್ ಕಂಡರು ಥಗ್ಸ್ ಆಫ್ ಹಿಂದು ಸ್ಥಾನ್ ಸಿನಿಮಾವನ್ನ ಪ್ರೇಕ್ಷಕರು ಅಷ್ಟಾಗಿ ಮೆಚ್ಚಿಕೊಳ್ಳಲಿಲ್ಲ. ಈ ಕಾರಣಕ್ಕೆ ಆಮಿರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನ ಬಲು ಮುತುವರ್ಜಿ ವಹಿಸಿ ಮಾಡುತ್ತಿದ್ದಾರೆ. ಈಗ ವಿಷಯವೆನಪ್ಪ ಅಂದ್ರೆ ಆಮಿರ್ ಖಾನ್ ತಾವು ಮಾತು ಕೊಟ್ಟಂಗೆ ನಡೆದುಕೊಂಡಿದ್ದಾರೆ.

blank

ಅಮಿರ್ ಖಾನ್ ತನ್ನ ಎರಡನೇ ಹೆಂಡತಿ ಕಿರಣ್ ಅವರ್ ಅವರಿಗೆ ವಿಚ್ಛೇದನ ಕೊಟ್ಟಿದ್ದರು. 15 ವರ್ಷ ದಾಂಪತ್ಯ ಜೀವನ 20 ವರ್ಷ ಪ್ರೀತಿ ದಿ ಎಂಡ್ ಆಗಿತ್ತು. ಆದರೆ ಅಮಿರ್ ಮತ್ತು ಕಿರಣ್ ಒಂದು ಭರವಸೆಯ ವಾಗ್ದಾನವನ್ನ ಮಾಡಿದ್ರು. ನಾವಿಬ್ಬರು ಒಟ್ಟಿಗೆ ಸಂಸಾರ ಮಾಡೋದಿಲ್ಲ ನಿಜ. ಆದ್ರೆ ಒಟ್ಟಿಗೆ ಕೆಲಸ ಮಾಡ್ತೀವಿ. ನಮ್ಮ ಮಕ್ಕಳ ಏಳಿಗೆಗಾಗಿ ದುಡಿಯುತ್ತೇವೆ ಅನ್ನೊ ಮಾತು ಕೊಟ್ಟಿದ್ರು. ಅದರಂತೆ ಈಗ ಆಮಿರ್ ಖಾನ್ ಮತ್ತು ಕಿರಣ್ ರಾವ್ ನಡೆದು ಕೊಂಡಿದ್ದಾರೆ. ಲಾಲ್ ಸಿಂಗ್ ಚಡ್ಡ ಸಿನಿಮಾದ ನಿರ್ಮಾಪಕರಲ್ಲೊಬ್ಬರಾಗಿರೋ ಕಿರಣ್ ರಾವ್, ಅಮಿರ್ ಜೊತೆ ಒಟ್ಟಿಗೆ ಶೂಟಿಂಗ್​ನಲ್ಲಿ ಕೆಲಸ ಮಾಡ್ತಿದ್ದಾರೆ. ಅಮಿರ್ ಖಾನ್ – ಕಿರಣ್ ರಾವ್ ನುಡಿದಂತೆ ನಡೆದು ಕೆಲಸ ಮಾಡ್ತಿದ್ದಾರೆ ಅನ್ನೋದಕ್ಕೆ ಸಾಕ್ಷಿ ಟಾಲಿವುಡ್ ನಟ ನಾಗ ಚೈತನ್ಯ.

blank

ಹೌದು ಆಮಿರ್ ಖಾನ್ -ಕಿರಣ್ ರಾವ್ ನುಡಿದಂತೆ ನಡೆದು ಕೆಲಸ ಮಾಡ್ತಿದ್ದಾರೆ ಅನ್ನೋದಕ್ಕೆ ಸಾಕ್ಷಿ ನಾಗ ಚೈತನ್ಯ. ಆಮಿರ್ ಖಾನ್ ನಟನೆಯ ಆದ್ವೈತ್ ಚಂದನ್ ನಿರ್ದೇಶನದ ಕಿರಣ್ ರಾವ್ ನಿರ್ಮಾಣ ‘ಲಾಲ್ ಸಿಂಗ್ ಚಡ್ಡ’ ಸಿನಿಮಾದಲ್ಲಿ ವಿಶೇಷ ಪಾತ್ರವೊಂದರಲ್ಲಿ ಸಮಂತಾ ಅವರ ಪತಿ ಕಾಣಿಸಿಕೊಳ್ತಿದ್ದಾರೆ. ಕಾರ್ಗಿಲ್ ನಲ್ಲಿ ಸಿನಿಮಾದ ಶೂಟಿಂಗ್ ಪ್ರಾರಂಭವಾಗಿದೆ. ನುಡಿದಂತೆ ಆಮಿರ್ ಖಾನ್ ಮತ್ತು ಕಿರಣ್ ರಾವ್ ಒಟ್ಟಿಗೆ ಕೆಲಸ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳಿಗೆ ವೈರಲ್ ಆಗುತ್ತಾ ಮೆಚ್ಚುಗೆಯನ್ನ ಗಳಿಸುತ್ತಿವೆ. ಈ ಚಿತ್ರ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಆಗಿದ್ದು ಈ ವರ್ಷದ ಕೊನೆಯಲ್ಲಿ ಪ್ರೇಕ್ಷಕರ ಮುಂದೆ ಬರೋ ಸಾಧ್ಯತೆ ಇದೆ.

blank

The post ಕೊಟ್ಟ ಮಾತು ತಪ್ಪಲಿಲ್ಲ, ಸಮಂತಾ ಪತಿಗಾಗಿ ಒಂದಾದ್ರಾ ಅಮಿರ್​​-ಕಿರಣ್ ರಾವ್? appeared first on News First Kannada.

Source: newsfirstlive.com

Source link