ವ್ಯಕ್ತಿಯೊಬ್ಬರ ತಲೆಗೆ ಡಿಕೆಎಸ್ ಬಾರಿಸಿದ ಬೆನ್ನಲ್ಲೇ ವೈರಲ್​ ಆಯ್ತು ಸಿದ್ದರಾಮಯ್ಯ ಫೋಟೋ

ವ್ಯಕ್ತಿಯೊಬ್ಬರ ತಲೆಗೆ ಡಿಕೆಎಸ್ ಬಾರಿಸಿದ ಬೆನ್ನಲ್ಲೇ ವೈರಲ್​ ಆಯ್ತು ಸಿದ್ದರಾಮಯ್ಯ ಫೋಟೋ

​ಬೆಂಗಳೂರು: ಕಳೆದ ಎರಡು ದಿನಗಳಿಂದ ಸೋಶಿಯಲ್ ಮಿಡಿಯಾದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರು ವ್ಯಕ್ತಿಯೊಬ್ಬರ ತಲೆಗೆ ಹೊಡೆಯುವ ದೃಶ್ಯವೊಂದು ವೈರಲ್ ಆಗುತ್ತಿದೆ.

ಡಿ.ಕೆ ಶಿವಕುಮಾರ್ ಕೈ ಮಾಡಿರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್​ ಕಾರ್ಯಕರ್ತನೊಬ್ಬ ಸಿದ್ದರಾಮಯ್ಯಯ ಹೆಗಲ ಮೇಲ ಕೈಹಾಕಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೋಟೋ ಒಂದು ಸಖತ್ ವೈರಲ್ ಆಗಿದೆ.

blank

ಇದನ್ನೂ ಓದಿ: ಕಾಂಗ್ರೆಸ್​ ಕಾರ್ಯಕರ್ತನ ತಲೆಗೆ ಬಾರಿಸಿದ ಡಿಕೆ ಶಿವಕುಮಾರ್

‘ಮುಂದಿನ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​’ ಅನ್ನೋ ಚರ್ಚೆ ಮುನ್ನೆಲೆಯಲ್ಲಿರುವಾಗಲೇ ಈ ಫೋಟೋ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನು ಸಿದ್ದರಾಮಯ್ಯರ ಹೆಗಲ ಮೇಲೆ ಕಾರ್ಯಕರ್ತ ಕೈಹಾಕಿರುವ ಫೋಟೋದಲ್ಲಿ ಸಿದ್ದರಾಮಯ್ಯ ಮತ್ತು ಕಾರ್ಯಕರ್ತರು ಅಂತಾ ಬರೆಯಲಾಗಿದೆ. ವೈರಲ್ ಆಗಿರುವ ಈ ಫೋಟೋ, ಸದ್ಯದ ಪರಿಸ್ಥಿತಿಯಲ್ಲಿ ಡಿಕೆಎಸ್​ಗೆ ಇರಿಸುಮುರಿಸು ಮಾಡೋದ್ರಲ್ಲಿ ಯಾವುದೇ ಡೌಟ್​ ಇಲ್ಲ.

ಇದನ್ನೂ ಓದಿ: ‘ಅವ್ರ ಅವನತಿಗೆ ಇವೆಲ್ಲಾ ದಿಕ್ಸೂಚಿ’ -ಡಿಕೆಎಸ್​​ರಿಂದ ಏಟು ತಿಂದ ಉಮೇಶ್‌​ ಗರಂ

The post ವ್ಯಕ್ತಿಯೊಬ್ಬರ ತಲೆಗೆ ಡಿಕೆಎಸ್ ಬಾರಿಸಿದ ಬೆನ್ನಲ್ಲೇ ವೈರಲ್​ ಆಯ್ತು ಸಿದ್ದರಾಮಯ್ಯ ಫೋಟೋ appeared first on News First Kannada.

Source: newsfirstlive.com

Source link