ಝೀಕಾ ವೈರಸ್​ ಭೀತಿ, ಕೇರಳ-ಕರ್ನಾಟಕ ಗಡಿ ಜಿಲ್ಲೆಯಲ್ಲಿ ಕಟ್ಟೆಚ್ಚರ

ಝೀಕಾ ವೈರಸ್​ ಭೀತಿ, ಕೇರಳ-ಕರ್ನಾಟಕ ಗಡಿ ಜಿಲ್ಲೆಯಲ್ಲಿ ಕಟ್ಟೆಚ್ಚರ

ಚಾಮರಾಜನಗರ: ಕೇರಳದಲ್ಲಿ ಕೋವಿಡ್ ನಡುವೆ ಝೀಕಾ ವೈರಸ್ ಪತ್ತೆಯಾಗಿದ್ದು ರಾಜ್ಯದ ಗಡಿ ಜೆಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಹೀಗಾಗಿ ಕೇರಳ-ಕರ್ನಾಟಕ‌ ಗಡಿಯ ಮೂಲೆಹೊಳೆ ಚೆಕ್ ಪೋಸ್ಟ್​ನಲ್ಲಿ ಕಟ್ಟೆಚ್ಚರ ವಹಿಸಿದ್ದು ವಾಹನಗಳ ತಪಾಸಣೆ ಮಾಡಲಾಗ್ತಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್​ನಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.

ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸುತ್ತಿರುವ ಸಿಬ್ಬಂದಿ ಗಡಿಯಲ್ಲಿ ಕೇರಳದಿಂದ ಬರುವವರಿಗೆ ಥರ್ಮಲ್ ಸ್ಕ್ರೀನಿಂಗ್, ಮಾಡಲಾಗ್ತಿದೆ. ಜೊತೆಗೆ RTPCR ನೆಗೆಟಿವ್ ವರದಿ ಬಗ್ಗೆ ಪರಿಶೀಲನೆ ಮಾಡಲಾಗ್ತಿದೆ. RTPCR ನೆಗೆಟಿವ್ ವರದಿ ಇಲ್ಲದಿದ್ದರೆ ಲಸಿಕೆ ಪಡೆದ ರಿಪೋರ್ಟ್ ಕಡ್ಡಾಯ ಎಂದು ಟಿಹೆಚ್ಓ ಡಾ.ರವಿಕುಮಾರ್​ ನ್ಯೂಸ್​ಫಸ್ಟ್​ಗೆ ಮಾಹಿತಿ ನೀಡಿದ್ದಾರೆ.

blank

ಝೀಕಾ ವೈರಸ್ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಝೀಕಾ ಗರ್ಭಿಣಿಯರು‌ ಹಾಗು ಗರ್ಭದಲ್ಲಿರುವ ಮಕ್ಕಳಿಗೆ ಹೆಚ್ಚಾಗಿ ಎಫೆಕ್ಟ್ ಆಗಲಿದೆ. ಝೀಕಾ ವೈರಸ್​ ಸೊಳ್ಳೆಯಿಂದ ಹರಡುತ್ತಿದ್ದು ಸೊಳ್ಳೆಗಳ ತಾಣವನ್ನ ನಾಶಪಡಿಸುವ ಕೆಲಸ ಭರದಿಂದ ಸಾಗ್ತಿದೆ ಎಂದಿದ್ದಾರೆ.

ಆದ್ದರಿಂದ ಗಡಿಯಂಚಿನ ಗ್ರಾಮಗಳಲ್ಲಿ ಯಾವುದೇ ರೋಗ ಲಕ್ಷಣ ಕಂಡು ಬಂದರೆ ತಕ್ಷಣವೆ ಟೆಸ್ಟ್​ಗೆ ಒಳಪಡಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಯಾರಲ್ಲೂ ಝೀಕಾ ರೋಗ ಲಕ್ಷಣ ಕಂಡು ಬಂದಿಲ್ಲವಾದರೂ ಗಡಿ ಭಾಗದಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಡಾ.ರವಿಕುಮಾರ್​ ಮಾಹಿತಿ ನೀಡಿದ್ದಾರೆ.

The post ಝೀಕಾ ವೈರಸ್​ ಭೀತಿ, ಕೇರಳ-ಕರ್ನಾಟಕ ಗಡಿ ಜಿಲ್ಲೆಯಲ್ಲಿ ಕಟ್ಟೆಚ್ಚರ appeared first on News First Kannada.

Source: newsfirstlive.com

Source link