‘ಅಂಬರೀಶ್ ಅಭಿಮಾನಿಗಳು ಇತ್ತೀಚೆಗಿನ ಬೆಳವಣಿಗೆಗಳಿಂದ ನೊಂದಿದ್ದಾರೆ.. ಆದರೆ’

‘ಅಂಬರೀಶ್ ಅಭಿಮಾನಿಗಳು ಇತ್ತೀಚೆಗಿನ ಬೆಳವಣಿಗೆಗಳಿಂದ ನೊಂದಿದ್ದಾರೆ.. ಆದರೆ’

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಜೊತೆಗಿನ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸುಮಲತಾ ಅಂಬರೀಶ್​.. ಅಂಬರೀಶ್ ಅಭಿಮಾನಿಗಳು ಇತ್ತೀಚೆಗಿನ ಬೆಳವಣಿಗೆಗಳಿಂದ ನೊಂದಿದ್ದಾರೆ. ನಾವು ಅವರ ಹಾದಿಯಲ್ಲಿ ಹೋಗೋದು ಬೇಡ, ನಾವು ಶಾಂತಿ ಸಮಾಧಾನದ ಹಾದಿಯಲ್ಲಿ ಹೋಗೋಣ ಎಂದು ಕರೆ ನೀಡಿದರು.

ರಾಜಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ಅಕ್ರಮ ಗಣಿಗಾರಿಕೆಯಂತಹ ವಿಚಾರದಲ್ಲಿ ಲಾಜಿಕಲ್ ಎಂಡ್ ಎನ್ನುವಂಥದ್ದು ಸುಲಭವಲ್ಲ. ಆದರೆ ನಾನು ಯಾವುದೇ ಸಮಸ್ಯೆ ಮಾಡಿಲ್ಲ, ಸಮಸ್ಯೆ ಮಾಡಿದವರು ಅರ್ಥ ಮಾಡಿಕೊಂಡರೆ ಒಳ್ಳೆಯದು. ಹೋರಾಟ ಮುಖ್ಯ ಆದರೆ, ನಾವು ಯಾವ ರೀತಿ ಹೋರಾಟ ಮಾಡ್ತೀವಿ ಅನ್ನೋದು ಬಹಳ ಮುಖ್ಯ ಎಂದಿದ್ದಾರೆ.

ಇದನ್ನೂ ಓದಿ: ಸಿನಿಮಾ ನಟನೆಗೂ.. ರಾಜಕೀಯಕ್ಕೂ ತುಂಬಾ ವ್ಯತ್ಯಾಸವಿದೆ -ಸಂಸದ ಪ್ರತಾಪ್​ ಸಿಂಹ

ಕುಮಾರಸ್ವಾಮಿ ವಿರುದ್ಧ ನನ್ನ ಹೋರಾಟ ಅಲ್ಲ
ನಾನು ಕುಮಾರಸ್ವಾಮಿ ವಿರುದ್ಧ ಹೋರಾಟ ಕೂಡ ಮಾಡಿಲ್ಲ, ನನ್ನ ಹೋರಾಟ ಏನಿದ್ದರೂ ಅಕ್ರಮ ಗಣಿಗಾರಿಕೆ ವಿರುದ್ಧ ಹೊರತು ಕುಮಾರಸ್ವಾಮಿ ವಿರುದ್ಧ ಅಲ್ಲ. ನಾನು ದ್ವೇಷದ ರಾಜಕಾರಣ ಮಾಡಿಲ್ಲ, ಯಾರನ್ನು ಟಾರ್ಗೆಟ್ ಕೂಡ ಮಾಡಿಲ್ಲ, ನನ್ನ ಹೋರಾಟ ಕೇವಲ ಮಂಡ್ಯದ ಅಕ್ರಮ ಗಣಿಗಾರಿಕೆ ವಿರುದ್ಧ ಮಾತ್ರ ಎಂದರು.

ಸಂಸದರು ಕ್ಷೇತ್ರದಿಂದ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸುವವರ ಕುರಿತು ಕಿಡಿಕಾರಿದ ಸುಮಲತಾ..ನಾನು ಅಧಿವೇಶನದಲ್ಲಿ ಭಾಗಿಯಾಗಲು ದೆಹಲಿಗೆ ಹೋದರೂ ಕಾಣಿಸ್ತಿಲ್ಲ ಎಂದು ಟ್ರಾಲ್ ಮಾಡ್ತಾರೆ. ನಾನು ಈ ಬಾರಿಯೂ ಅಧಿವೇಶನಕ್ಕೆ ಹೋದಾಗ ಸಂಸದೆ ಕಾಣಿಸ್ತಿಲ್ಲ ಅಂತ ಮತ್ತೆ ಟ್ರೋಲ್ ಮಾಡಿದರು. ನಾನು ಎಲ್ಲಿರ್ತೇನೆ, ಏನ್​ ಮಾಡ್ತೇನೆ ಎಂಬುದು ಗೊತ್ತಾಗಬೇಕಾದವರಿಗೆ ಗೊತ್ತಾಗುತ್ತೆ. ಎಲ್ಲರನ್ನೂ ಮೋಸ ಮಾಡಲು ಆಗಲ್ಲ ಎಂದರು.

ಇದನ್ನೂ ಓದಿ: ‘ಅಣ್ಣ ತಮ್ಮಂದಿರೆ, ಅಕ್ಕ ತಂಗಿಯರೇ..ಹೋರಾಟ ಮಾಡಬೇಕಾದ ವಿಚಾರ ಬಹಳಷ್ಟಿವೆ’ -ಹೆಚ್​​ಡಿಕೆ ಸಲಹೆ

The post ‘ಅಂಬರೀಶ್ ಅಭಿಮಾನಿಗಳು ಇತ್ತೀಚೆಗಿನ ಬೆಳವಣಿಗೆಗಳಿಂದ ನೊಂದಿದ್ದಾರೆ.. ಆದರೆ’ appeared first on News First Kannada.

Source: newsfirstlive.com

Source link