ಬೆಂಗಳೂರಿಗೆ ಬಂದೇ ಬಿಟ್ಟಳು ಲಂಕಾ ಚೆಲುವೆ -ಜಾಕ್ವೆಲಿನ್​​ಗೆ ವಿಕ್ರಾಂತ್ ರೋಣನ ಅದ್ಧೂರಿ ಸ್ವಾಗತ

ಬೆಂಗಳೂರಿಗೆ ಬಂದೇ ಬಿಟ್ಟಳು ಲಂಕಾ ಚೆಲುವೆ -ಜಾಕ್ವೆಲಿನ್​​ಗೆ ವಿಕ್ರಾಂತ್ ರೋಣನ ಅದ್ಧೂರಿ ಸ್ವಾಗತ

ಅಂತು ಇಂತು ನಾವು ಹೇಳಿದಂಗೆ ನೀವು ಕೇಳದಂಗೆ ಶ್ರೀಲಂಕನ್ ಚೆಲುವೆ ಚಾಕ್ವೆಲಿನ್ ಫರ್ನಾಂಡಿಸ್ ವಿಕ್ರಾಂತ್ ರೋಣ ಸಿನಿಮಾ ಸೆಟ್​​​​ಗೆ ಬಂದು ಇಳಿದೇ ಬಿಟ್ಟರು. ಬರ್ ಬರ್ತಾನೆ ತಮ್ಮ ವೈನಾತಿ ವೈಯಾರ ನಡೆಯಲ್ಲಿ ನಮ್ಮ ನುಡಿಯುಳ್ಳ ಹಾಡಿಗೆ ಪ್ರಾಕ್ಟಿಸ್ ಶುರು ಮಾಡೌವ್ರೆ. ಇಷ್ಟೆಲ್ಲ ಮಾಡಿದ್ದಾರೆ ಅಂದ್ಮೆಲೆ ನಾವು ನಿಮ್ಗೆ ತೋರಿಸದೇ ಇರ್ತಿವಾ ಹೇಳಿ. ವಿಕ್ರಾಂತ್ ರೋಣ ಸೆಟ್​​ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ನಿಮ್ಮ ಮುಂದೆ.

ವಿಕ್ರಾಂತ್ ರೋಣ, ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯ ಮೂವಿ. ನಿರ್ದೇಶಕ ಅನುಪ್ ಭಂಡಾರಿ ನಿರ್ಮಾಪಕ ಜಾಕ್ ಮಂಜು ಆಂಡ್​ ಟೀಮ್ ಅದ್ಧೂರಿ ಸಮಾಚಾರಗಳನ್ನ ಚಿತ್ರಪ್ರೇಮಿಗಳಿಗೆ ನೀಡ್ತಾನೆ ಇದ್ದಾರೆ. ಶ್ರೀಲಂಕನ್ ಚೆಲುವು ಬಾಲಿವುಡ್ ಒಲವು ವಿಕ್ರಾಂತ್ ರೋಣ ಸೆಟ್​​ನಲ್ಲಿ ಬಂದು ನಿಂತಿದೆ.

blank

ಡ್ಯಾನ್ಸ್ ಪ್ರಾಕ್ಟಿಸ್ ಶುರು ಮಾಡಿದ ಶ್ರೀಲಂಕನ್ ಬೊಂಬೆ
ಜಾಕ್ವೆಲಿನ್ ಫರ್ನಾಂಡಿಸ್, ಬಾಲಿವುಡ್ ಸಿನಿರಂಗ ಸಿರಿ ಸಿರಿ ಸಿಂಗಾರಿ, ಶ್ರೀಲಂಕನ್ ಮೂಲಕ ಬಂಗಾರಿ. ಕುಣಿಯೋದ್ರಲ್ಲಿ; ಅದರಲ್ಲೂ ಐಟಂ ಸಾಂಗ್​​​ಗಳಲ್ಲಿ ನಲಿ ನಲಿದಾಡೋದ್ರಲ್ಲಿ ಜಾಕ್ವೆಲಿನ್ ಬಿಟೌನ್​​​​​​ ಸಿನಿ ಸಿಟಿಗೆ ಎಮ್​ ಜಿ ರೋಡ್ ಇದಂಗೆ. ಜಾಕ್ವೆಲಿನ್ ಒಂದು ಐಟಂ ನಂಬರ್ ಸಾಂಗ್​​ನಲ್ಲಿ ಸೊಂಟ ಬಳುಕಿಸಲು ತೆಗೆದುಕೊಳ್ಳೋ ಹಣದಲ್ಲಿ, ಹೊಸ ಪಿಕ್ಚರೇ ಮಾಡಬಹುದು​​. ಪ್ಯಾನ್ ಇಂಡಿಯನ್ ಲೆವಲ್​​ನಲ್ಲಿ ಸಿನಿಮಾ ಮಾಡೋ ಕನಸಿನಿಂದ ಕೋಟಿ ಕೋಟಿ ಖರ್ಚು ಮಾಡಿ ವಿಕ್ರಾಂತ್ ರೋಣ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ ನಿರ್ಮಾಪಕ ಜಾಕ್ ಮಂಜು. ಒಂದು ಮಾಹಿತಿ ಪ್ರಕಾರ ಜಾಕ್ವೆಲಿನ್​​​​​​​​ಗೆ ವಿಕ್ರಾಂತ್ ರೋಣ ತಂಡದಿಂದ ಸಿಕ್ತಿರೋ ಸಂಭಾವನೆ ಬರೋಬ್ಬರಿ 3 ಕೋಟಿ! ಪಕ್ಕಾ ಈ ಸಿನಿಮಾ ಮಾಡುತ್ತೇ ಬಾಕ್ಸಾಫಿಸ್ ಲೂಟಿ. ಇಂದಿನಿಂದ ಶುರುವಾಗಿದೆ ಜಾಕ್ವೆಲಿನ್ ಕ್ಯಾಬರೆ ಕುಣಿತದ ಡ್ಯೂಟಿ.

blank

ಅನುಪ್ ಲಿರಿಕ್ಸ್, ಅಜನಿಶ್ ಮ್ಯೂಸಿಕ್, ಜಾನಿ ಕುಣಿತ
ಮೋಹನ್ ಬಿ.ಕೆರೆ ಸ್ಟುಡಿಯೊದಲ್ಲಿ ವಿಕ್ರಾಂತ್ ರೋಣ ಸಿನಿಮಾದ ಹಾಡಿಗಾಗಿ ಭರ್ಜರಿ ಸೆಟ್​​​​​ ಗಳನ್ನ ಸದ್ದಿಲ್ಲದೆ ಸಿದ್ದ ಮಾಡುತ್ತಿದೆ ವಿಕ್ರಾಂತ್ ರೋಣ ಫಿಲ್ಮ್ ಟೀಮ್​​.. ಟಾಲಿವುಡ್​​ನ ಹೆಸರಾಂತ ಡ್ಯಾನ್ಸ್ ಕೊರಿಯೋಗ್ರಫರ್ ಕನ್ನಡದ ಅಪ್ಪು ಡ್ಯಾನ್ಸ್ ಖ್ಯಾತಿಯ ಜಾನಿ ಮಾಸ್ಟರ್ ಕುಣಿತದ ಕಲ್ಪನೆಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ನಮ್ಮ ಕಿಚ್ಚನ ಜೊತೆ ಕುಣಿದು ಕುಪ್ಪಳಿಸಲಿದ್ದಾರೆ.. ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶಕ ಅನುಪ್ ಭಂಡಾರಿ ಸಾಹಿತ್ಯ ವಿರೋ ಹಾಡಿಗೆ ಜಾಕ್ವಿ ಈಗಾಗಲೇ ಪ್ರಾಕ್ಟಿಸ್ ಶುರು ಹಚ್ಚಿಕೊಂಡಿದ್ದಾರೆ.
ಒಟ್ಟು ಆರು ದಿನಗಳ ಕಾಲ ವಿಕ್ರಾಂತ್ ರೋಣ ಸಿನಿಮಾದ ಸಾಂಗ್ ಶೂಟಿಂಗ್ ಆಗಲಿದೆ. ಜುಲೈ 10ನೇ ತಾರೀಖ್ ವಿಕ್ರಾಂತ್ ರೋಣ ಸಿನಿಮಾದ ಸಾಂಗ್ ಶೂಟಿಂಗ್ ಅದ್ದೂರಿ ಸೆಟ್​​ನಲ್ಲಿ ಶೂಟ್ ಆಗಲಿದೆ. ವಿಕ್ರಾಂತ್ ರೋಣ ಸಿನಿಮಾದ ಈ ಐಟಂ ಸಾಂಗ್ ಶೂಟ್ ಆದ್ರೆ ವಿಕ್ರಾಂತ್ ರೋಣ ಚಿತ್ರಕ್ಕೆ ಕುಂಬಳ ಕಾಯಿ ಪ್ರಾಪ್ತಿಯಾಗಲಿದೆ.

blank

blank

The post ಬೆಂಗಳೂರಿಗೆ ಬಂದೇ ಬಿಟ್ಟಳು ಲಂಕಾ ಚೆಲುವೆ -ಜಾಕ್ವೆಲಿನ್​​ಗೆ ವಿಕ್ರಾಂತ್ ರೋಣನ ಅದ್ಧೂರಿ ಸ್ವಾಗತ appeared first on News First Kannada.

Source: newsfirstlive.com

Source link