‘ಎಷ್ಟು ಸಲ ಬೀಪ್​ ಹಾಕೋದು..’-ಕಿಚ್ಚ ಸುದೀಪ್ ಕ್ಲಾಸ್​ಗೆ ಚಕ್ರವರ್ತಿ ಗಪ್​ಚುಪ್

‘ಎಷ್ಟು ಸಲ ಬೀಪ್​ ಹಾಕೋದು..’-ಕಿಚ್ಚ ಸುದೀಪ್ ಕ್ಲಾಸ್​ಗೆ ಚಕ್ರವರ್ತಿ ಗಪ್​ಚುಪ್

ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್​ ನಡುವೆ ನಡೆದ ಜಗಳವನ್ನು ಬೇಡ ಅಂದ್ರು ಚಕ್ರವರ್ತಿ ಕಿಚ್ಚನ ಮುಂದಿಟ್ರು. ಈ ಕುರಿತು ಕಿಚ್ಚ ತೆಗೆದುಕೊಂಡ ಕ್ಲಾಸ್​ಗೆ ಚಕ್ರವರ್ತಿ ಅವರು ಗಪ್​ಚುಪ್​ ಆದ್ರು.

ಕಿಚ್ಚ ಸುದೀಪ್​ ಮನೆಯ ಕಂಟೆಸ್ಟೆಂಟ್​ಗಳಿಗೇ ಒಂದು ಪ್ರಶ್ನೆಯನ್ನ ಕೇಳ್ತಾರೆ.. ಈ ವಾರ ಪ್ರಶಾಂತ್​ ಸಂಬರಗಿ ಜಗಳ ಮಾಡಿದ್ರು, ಎಷ್ಟೋ ಸಲ ಗಟ್ಟಿಯಾಗಿ ವಾದ ಕೂಡಾ ಮಾಡಿದ್ರು. ಇದರ ಅವಶ್ಯಕತೆ ಇತ್ತಾ ಇಲ್ವಾ ಅಂತ ಕಿಚ್ಚ ಕೇಳಿದಾಗ ಮನೆಯ ಸ್ಪರ್ಧಿಗಳು ಅವರವರ ಅಭಿಪ್ರಾಯವನ್ನು ತಿಳಿಸುತ್ತಾರೆ.

 

ಬಳಿಕ ಕಿಚ್ಚ ಇದೆ ಪ್ರಶ್ನೆಯನ್ನು ಚಕ್ರವರ್ತಿ ಚಂದ್ರಚೂಡ್​ ಅವರಿಗೇ ಕೇಳ್ತಾರೆ.. ಆಗಾ ಚಕ್ರವರ್ತಿ ಮನೆಯಲ್ಲಿ ನಡೆದ ಪ್ರಶಾಂತ್​ ಸಂಬರಗಿ ಹಾಗೂ ಚಕ್ರವರ್ತಿ ನಡುವೆ ನಡೆದ ಗಲಾಟೆಯ ಬಗ್ಗೆ ಮಾತಾಡ್ತಾರೆ. ಪ್ರಶಾಂತ್​ ಮಾಡಿದ್ದು ತಪ್ಪು, ನಾನು ಅವನ ಒಳಿತಿಗಾಗಿ ಹೇಳಿದ ಕೆಲವು ವಿಷಯಗಳನ್ನು ಅವನು ಅದಕ್ಕೆ ಬಣ್ಣ ಹಚ್ಚಿ ಬೇರೆ ರೀತಿಯಲ್ಲಿ ವೈಷ್ಣವಿಗೆ ಹೇಳಿದ. ಆಗ ನಾನು ಕೋಪಗೊಂಡು ಕೆಲವು ಕೆಟ್ಟ ಪದಗಳನ್ನು ಬಳಸಿದೆ ಅಂತಾರೆ.

blank

ಇದಕ್ಕೆ ಸುದೀಪ್​ ನಾವು ಕೆಲವು ಟಾಪಿಕ್​ಗಳನ್ನು ಯಾಕೆ ಟಚ್​​ ಮಾಡಿರಲ್ಲಾ ಅಂದ್ರೇ, ಅಸಹ್ಯ ಆಗುತ್ತೆ. ಟಾಪಿಕ್​ನ್ನ ಎಳಿಬಾರ್ದು ಅಂತಾ. ಆದರೇ ನೀವೇ ಈ ಟಾಪಿಕ್​ನ್ನು ತೆಗೆದಿದ್ದೀರಿ. ಹಾಗಾಗಿ ಕ್ಲ್ಯಾರಿಫಿಕೇಶನ್ ತಗೊಳ್ಳದೇ ಹೋದ್ರೆ ಹೇಗೆ, ಇಲ್ಲಿ ಒಂದು ಹುಡುಗಿಯ ಕ್ಯಾರಕ್ಟರ್​ ಬೀಳುತ್ತೆ ಅಂತಾರೆ. ಇದಕ್ಕೆ ಚಕ್ರವರ್ತಿ ಅವರು ತಮ್ಮದೇ ಶೈಲಿಯಲ್ಲಿ ಮತ್ತದೇ ಉತ್ತರಗಳನ್ನು ನೀಡುತ್ತಾರೆ.

ಸುಮ್ನೆ ಕೇಳಿಸಿಕೊಂಡ ಸುದೀಪ್​ ಒಂದು ಖಡಕ್​ ಲುಕ್​ ನೀಡ್ತಾರೆ. ನನ್ನ ಕಣ್ಣಲ್ಲಿ ಕಣ್ಣಿಟ್ಟು ಸುಳ್ಳು ಹೇಳಿದ್ರೆ ಅದನ್ನು ಕೇಳಿಸಿಕೊಂಡು ಸುಮ್ನೆ ಇದ್ರೆ ನನ್ನ ವ್ಯಕ್ತಿತ್ವ ಹಾಳಾಗತ್ತೆ ಅಂತಾರೆ.. ಪ್ರಶಾಂತ್​ ಅವರ ಹತ್ರ ಏನೂ ಹೇಳಿದ್ರಿ ಅದರ ಬಗ್ಗೆ ಕ್ಲಿಪಿಂಗ್​ ಇದೆ. ಹಾಕ್ಲಾ ಅಂತಾ ಚಮಕ್​ ಕೊಡ್ತಾರೆ ನೋಡಿ, ಚಕ್ರವರ್ತಿ ಅವರ ಬೆವರು ಇಳಿದು ಹೋಗುತ್ತೆ.

ಇದನ್ನೂ ಓದಿ: ದಿವ್ಯಾರ ತಪ್ಪುಗಳನ್ನ ಖಡಕ್​​ ಆಗಿ ತಿದ್ದಿ ಹೇಳಿದ ಕಿಚ್ಚ.. ಗಳಗಳನೆ ಅತ್ತ ಉರುಡುಗ

blank

ನಂತ್ರ ಇದೇ ವಿಚಾರವಾಗಿ ಸುದೀಪ್, ವೈಷ್ಣವಿ ಅವರಿಗೆ ನೀವು ಅವತ್ತು ಚಕ್ರವರ್ತಿ ಬಳಿ ಏನೂ ಹೇಳಿದ್ರಿ ಕ್ಲಿಯರ್​ ಆಗಿ ಹೇಳಿ ಅಂತರೆ. ಆಗ ವೈಷ್ಣವಿ ತಮಾಷೆ ನಾನು ಮಾಡ್ಲಿಲ್ಲ, ಅವರು ಮಾಡಿದ್ದು. ನನಗೆ ಪ್ರಶಾಂತ್ ಅವರು ಕೊಟ್ಟ ಸಲಹೆಯಿಂದ ಮೊಟ್ಟೆ ಒಡೆಯಲು ಆಗುವುದಿಲ್ಲ. ಹಾಗಾಗಿ ನಾನು ನನ್ನದೇ ತಂತ್ರ ಬಳಸಿ ಆಟ ಆಡಿದೆ. ಚಕ್ರವರ್ತಿ ಅವರು ಪ್ರಶಾಂತ್​ ಹೇಳಿದ ಹಾಗೇ ಆಡಿದಿಯಾ ಅಂತಾ ಕೇಳಿದ್ರು. ಅದಕ್ಕೆ ನಾನು ಇಲ್ಲ ಅಂತಾ ಹೇಳಿದೆ ಅಂತಾರೆ.

ನಂತರ ಸುದೀಪ್​ ಚಕ್ರವರ್ತಿ ಅವರಿಗೆ ನೀವು ಕಳೆದ ವಾರ ನನ್ನ ಕಣ್ಣಲ್ಲಿ ಬಿಳುವುದಿಲ್ಲ ಅಂದಿದ್ರೀ ಆದ್ರೇ ಅದನ್ನು ನೀವು ಉಳಿಸಿಕೊಳ್ಳಲಿಲ್ಲ. ಎಂದು ಸರಿಯಾಗಿ ಕ್ಲಾಸ್​ ತಗೋತಾರೆ.

blank

ಪ್ರಶಾಂತ್​ ಮತ್ತು ಚಕ್ರವರ್ತಿ ಅವರೇ ನಿಮ್ಮ ಮಾತುಗಳ ಮೇಲೆ ಹಿಡಿತ ಇರಲಿ. ಎಷ್ಟೂ ಸಾರಿ ಬೀಪ್​ ಹಾಕೋದು. ನಾವು ಫ್ಯಾಮಿಲಿ ಜೊತೆ ಕೂತು ಶೋ ನೋಡ್ತಿರ್ತಿವಿ. ಏನ್​ ಅದು ಬೀಪ್​ ಎನ್ನುತ್ತಾರೆ.

ಇದನ್ನೂ ಓದಿ: ‘ನಾನು ಎಲ್ಲರ ಕಣ್ಣಿಗೆ ಕೆಟ್ಟವನಾಗಿ ಕಾಣ್ತಿದ್ದೀನಿ’.. ಪ್ರಶಾಂತ್ ಸಂಬರಗಿ ಕಣ್ಣೀರಿಗೆ ಕಾರಣವೇನು..?

 

ಇನ್ನೊಂದು ವಿಷಯದ ಬಗ್ಗೆ ಸುದೀಪ್​ ಪ್ರಸ್ತಾಪಿಸುತ್ತಾರೆ. ವೈಯಕ್ತಿಕವಾಗಿ ಮಾತನಾಡಬೇಡಿ ಅಂತಾ ಹೇಳಿದ್ರು, ಪ್ರಶಾಂತ್​ ಅವರ ಬಗ್ಗೆ ಮಾತಾಡಿದ್ದು ಎಷ್ಟೂ ಸರಿ. ನೀವು ತಪ್ಪು ಮಾಡ್ತಿದ್ದಿರಾ. ತಿದ್ದೋದು ನನ್ನ ಜವಾಬ್ದಾರಿ ಎಂದು ಪಾಯಿಂಟ್​ ಟು ಪಾಯಿಂಟ್​ ಹೇಳ್ತಾರೆ. ಕಿಚ್ಚನ ಮಾತಿಗೆ ಚಕ್ರವರ್ತಿ ಗಪ್​ಚುಪ್ ಆಗ್ತಾರೆ.​

ಮತ್ತೆ ಮುಂದುವರಿದು ನಾನು ಎಲ್ಲರಿಗೂ ಒಂದು ಮಾತು ಹೇಳ್ತೀನಿ. ನನಗೆ ಇಲ್ಲಿ ಯಾರು ಹತ್ತಿರ ಯಾರೂ ದೂರನೂ ಅಲ್ಲಾ ಪ್ರತಿಯೊಬ್ಬರು ಕೂಡಾ ಈಕ್ವಲ್. ಆದ್ರೇ ಇಲ್ಲಿ ವ್ಯಕ್ತಿತ್ವಗಳು ಬೀಳುತ್ತೆ ಅಂದಾಗ ನನಗೂ ಹರ್ಟ್​ ಆಗುತ್ತೆ. ಅದನ್ನು ಸರಿ ಮಾಡಬೇಕಾದದ್ದು ನನ್ನ ಕರ್ತವ್ಯ ಅಂತಾರೆ. ಕಿಚ್ಚನ ಮಾತಿಗೆ ಮನೆಯಲ್ಲಾ ಒಂದು ಕ್ಷಣ ಸ್ತಬ್ಧವಾಗುತ್ತದೆ.

ಇದನ್ನೂ ಓದಿ: ‘ಬಿಗ್​​ಮನೆ’ಯಲ್ಲಿ ಹೆಚ್ಚಾಯ್ತು ವೈಯಕ್ತಿಕ ದಾಳಿಗಳು.. ನಗು-ಅಳುವಿನಲ್ಲೇ ಕಳೆದೊಯ್ತು ಈ ವಾರ..!

The post ‘ಎಷ್ಟು ಸಲ ಬೀಪ್​ ಹಾಕೋದು..’-ಕಿಚ್ಚ ಸುದೀಪ್ ಕ್ಲಾಸ್​ಗೆ ಚಕ್ರವರ್ತಿ ಗಪ್​ಚುಪ್ appeared first on News First Kannada.

Source: newsfirstlive.com

Source link