ರಾಜ್ಯದ ಪ್ರವಾಸಿ ತಾಣಗಳಿಗೆ ಈಗ ಕಳೆ.. ಪ್ರವಾಸಿಗರೇ ಕೊರೊನಾ ಬಗ್ಗೆ ಇರಲಿ ಎಚ್ಚರ

ರಾಜ್ಯದ ಪ್ರವಾಸಿ ತಾಣಗಳಿಗೆ ಈಗ ಕಳೆ.. ಪ್ರವಾಸಿಗರೇ ಕೊರೊನಾ ಬಗ್ಗೆ ಇರಲಿ ಎಚ್ಚರ

ಬೆಂಗಳೂರು: ಕೊರೊನಾ ಲಾಕ್​ಡೌನ್ ಸಡಿಲಿಕೆ ಮತ್ತು ವೀಕೆಂಡ್ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳತ್ತ ಪ್ರವಾಸಿಗರು ದೌಡಾಯಿಸುತ್ತಿದ್ದಾರೆ. ಕೋವಿಡ್ ಕಾರಣದಿಂದ ಸ್ತಬ್ಧವಾಗಿದ್ದ, ಪ್ರವಾಸಿ ಸ್ಥಳಗಳು ಕಳಗಟ್ಟುತ್ತಿವೆ. ಅದರಂತೆ ರಾಜ್ಯದ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಜನ ಲಗ್ಗೆ ಇಟ್ಟಿದ್ದಾರೆ.

ಐತಿಹಾಸಿಕ ತಾಣ ಹಂಪಿಯಲ್ಲಿ ಪ್ರವಾಸಿಗರ ದಂಡು

blank
ವಿಜಯನಗರ ಜಿಲ್ಲೆಯ ವಿಶ್ವವಿಖ್ಯಾತ ಹಂಪಿ ನೋಡಲು ಪ್ರವಾಸಿಗರ ದಂಡು ಬೆಳಗ್ಗೆಯೇ ಜಮಾಯಿಸಿತ್ತು. ಹಂಪಿಯ ಶ್ರೀ ವಿರೂಪಾಕ್ಷ ದೇಗುಲ, ಉಗ್ರನರಸಿಂಹ, ಸಾಸಿವೆ ಕಾಳು ಗಣಪ, ಕಲ್ಲಿನ ತೇರು ನೋಡಲು ಜನ ಬರುತ್ತಿದ್ದಾರೆ. ಪ್ರತಿಬಾರಿ ಹೊಲಿಸಿದ್ರೆ ಈ ಬಾರಿ ಹಂಪಿಗೆ ಆಗಮಿಸಿರೋ ಪ್ರವಾಸಿಗರ ಸಂಖ್ಯೆ ತುಂಬಾ ಕಡಿಮೆ ಇದೆ.

blank

 

ಮುಳ್ಳಯ್ಯನಗಿರಿಯಲ್ಲಿ ಫುಲ್​ ಟ್ರಾಫಿಕ್ ಜಾಮ್

blank
ಚಿಕ್ಕಮಗಳೂರಿನ ಗಿರಿಸಾಲನ್ನ ನೋಡಲು ಪ್ರವಾಸಿಗರು ಮುಗಿಬಿದ್ದಿದ್ದಾರೆ. ಅನ್​​ಲಾಕ್​ನ ಮೊದಲ ವೀಕ್​ಎಂಡ್​​ನಲ್ಲಿ ಬೆಳ್ಳಂಬೆಳಗ್ಗೆಯೇ 400 ಕ್ಕೂ ಹೆಚ್ಚು ವಾಹನಗಳು ಆಗಮಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮುಳ್ಳಯ್ಯನಗಿರಿಗೆ ಜನ ಬರುತ್ತಿರುವ ಹಿನ್ನೆಲೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಕೂಡ ಆಗಿತ್ತು. ಮಂಜಿನ ಹನಿಗಳ ನಡುವೆ, ಕೊರೊನಾ ಭಯವನ್ನ ಮರೆತು ಮೋಜು ಮಸ್ತಿಯಲ್ಲಿ ತಡಗಿರೋದು ಕಂಡು ಬಂದಿದೆ.

ನಂದಿ ಬೆಟ್ಟಕ್ಕೆ ಕಳೆ

blank
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟಕ್ಕೆ ಪ್ರವಾಸಿಗರು ಲಗ್ಗೆಯಿಟ್ಟಿದ್ದಾರೆ. ಚಿಕ್ಕಬಳ್ಳಾಪುರ- ಅನ್ ಲಾಕ್ ಆಗಿದ್ದೇ ತಡ ಮನೆಯಲ್ಲಿದ್ದು ಬೇಜಾರಲ್ಲಿದ್ದ ಜನ ಮುಂಜಾನೆ 4-5 ಗಂಟೆಯಿಂದಲೇ ಆಗಮಿಸಿದ್ದರು. ಬೆಳಗ್ಗೆ 6 ಗಂಟೆ ನಂತರ ಚೆಕ್‌ ಪೋಸ್ಟ್ ಗೇಟ್ ಓಪನ್ ಮಾಡಿದ್ದೇ ತಡ ನಾ ಮುಂದು ತಾ ಮುಂದು ಅಂತ ನಂದಿಬೆಟ್ಟ ಏರಿದ್ದಾರೆ.

ಜೋಗದ ಗುಂಡಿಯಲ್ಲೂ ಪ್ರವಾಸಿಗರು!

blank
ಮುಂಗಾರು ಆರಂಭದಲ್ಲಿ ಈ ಹಿಂದೆ ಶಿವಮೊಗ್ಗ ಜಿಲ್ಲೆಯ ಜೋಗಜಲಪಾತ ಭೋರ್ಗರೆದು ಧುಮ್ಮುಕ್ಕುತ್ತಿತ್ತು. ಆದರೆ ಈ ಬಾರಿ ಜೋಗದಲ್ಲಿ ನೀರಿನ ಪ್ರಮಾಣ ತುಂಬಾನೆ ಕಡಿಮೆ ಇದೆ. ಬೇಸಿಗೆಯಲ್ಲಿ ಬೀಳುವಂತೆ ಸಣ್ಣ ಪ್ರಮಾಣದ ನೀರು ಬೀಳುತ್ತಿದೆ. ಹೀಗಿದ್ದರೂ ಜೋಗಕ್ಕೆ ಪ್ರವಾಸಿಗರು ಮಾತ್ರ ಕಮ್ಮಿಯಾಗಿಲ್ಲ. ಕೊರೊನಾ ಇದ್ದರೂ ನಿರೀಕ್ಷೆ ಮೀರಿ ಬರುತ್ತಿದ್ದಾರೆ.

blank

ಬಾದಾಮಿಯಲ್ಲಿ ಪ್ರವಾಸಿಗರ ಕೊರತೆ
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಬನಶಂಕರಿ ದೇಗುಲಕ್ಕೆ ಭಕ್ತರು ನಿರೀಕ್ಷೆಗಿಂತ ಮೀರಿ ಆಗಮಿಸಿದ್ದರು. ಅನ್​ಲಾಕ್ ಬಳಿಕ ದೇಗುಲಕ್ಕೆ ಬರುವವರ ಸಂಖ್ಯೆ ಕಳೆದ ಮೂರು ದಿನಗಳಿಂದ ಏರಿಕೆಯಾಗುತ್ತಿದೆ. ನಾಡಿನ ಶಕ್ತಿ ಪೀಠಗಳಲ್ಲಿ ಬಾದಾಮಿ ಬನಶಂಕರಿ ದೇಗುಲ ಕೂಡ ಒಂದಾಗಿದೆ.

ಆದರೆ ಇಲ್ಲಿರುವ ಐತಿಹಾಸಿಕ ಪ್ರವಾಸಿ ಸ್ಥಳಗಳತ್ತ ಪ್ರವಾಸಿಗರು ನಿರಾಸಕ್ತಿ ವಹಿಸಿದ್ದಾರೆ. ಐತಿಹಾಸಿಕ ಬಾದಾಮಿ ಗುಹಾಲಯಗಳಲ್ಲಿ ಪ್ರವಾಸಿಗರ ಕೊರತೆ ಎದ್ದು ಕಂಡು ಬಂತು. ಲಾಕ್​ಡೌನ್​ಗಿಂತ ಮೊದಲು ಇಲ್ಲಿನ ಐತಿಹಾಸಿಕ ತಾಣಗಳು ಫುಲ್ ರಶ್​ ಆಗಿರುತ್ತಿದ್ದವು.

blank

ಪ್ರವಾಸಿಗರೇ ಇರಲಿ ಎಚ್ಚರ!
ಲಾಕ್​ಡೌನ್ ಸಡಿಲಿಕೆ ಬಳಿಕ ಪ್ರವಾಸಿಗರು ತುಂಬಾ ಖುಷಿಯೇನೋ ಆಗಿದ್ದಾರೆ. ಆದರೆ ಕೊರೊನಾ ಮಾರಿ ನಮ್ಮ ಎದುರು ಇರುವಾಗ ಎಷ್ಟೇ ಜಾಗೃತಿವಹಿಸಿದ್ದರೂ ಸಾಲದು. ಈಗಾಗಲೇ ವೀಕ್ಷಣೆಗೆ ಮುಕ್ತವಾಗಿರುವ ಎಲ್ಲಾ ಪ್ರವಾಸಿ ತಾಣಗಳಲ್ಲಿ ಜನರು ಕೊರೊನಾ ನಿಯಮ ಉಲ್ಲಂಘನೆ ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ. ಹೀಗಾಗಿ ಪ್ರವಾಸಿಗರು ಖುಷಿ ಪಡುವ ಸಂದರ್ಭದಲ್ಲಿ ಜಾಗೃತೆಯನ್ನ ಮರೆಯದಿದ್ದರೆ ಒಳ್ಳೆಯದು.

The post ರಾಜ್ಯದ ಪ್ರವಾಸಿ ತಾಣಗಳಿಗೆ ಈಗ ಕಳೆ.. ಪ್ರವಾಸಿಗರೇ ಕೊರೊನಾ ಬಗ್ಗೆ ಇರಲಿ ಎಚ್ಚರ appeared first on News First Kannada.

Source: newsfirstlive.com

Source link