ಆತ ನಮ್ಮನೆ ಹುಡುಗ.. ಸ್ವಲ್ಪ ಜೋರಾಗಿ ಹೊಡೆದಿದ್ದೀನಿ -ಡಿ.ಕೆ ಶಿವಕುಮಾರ್

ಆತ ನಮ್ಮನೆ ಹುಡುಗ.. ಸ್ವಲ್ಪ ಜೋರಾಗಿ ಹೊಡೆದಿದ್ದೀನಿ -ಡಿ.ಕೆ ಶಿವಕುಮಾರ್

ಬೆಂಗಳೂರು: ಹೆಗಲ ಮೇಲೆ ಕೈ ಹಾಕಲು ಮುಂದಾದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರ ತಲೆಗೆ ಬಾರಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆತ ನಮ್ಮ ಮನೆ ಹುಡುಗ, ಸ್ವಲ್ಪ ಜೋರಾಗಿಯೇ ಹೊಡೆದಿದ್ದೀನಿ ಬಿಡಿ ಎಂದು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಆ ಹುಡುಗ ನಮ್ಮ ಹುಡುಗ, ದೂರದ ಸಂಬಂಧಿ ಬೇರೆ. ಅವನು ಹೆಗಲ ಮೇಲೆ ಕೈ ಹಾಕಿಕೊಂಡು ಬರಲು ಮುಂದಾದ. ತುಂಬಾ ಜನ ಇದ್ದ ಕಾರಣ, ಎಲ್ಲರೂ ಏನೆಂದುಕೊಳ್ಳುತ್ತಾರೋ ಅಂತಾ ಹೊಡೆದಿದ್ದೀನಿ. ಆದರೆ ಆ ವೇಳೆ ಸ್ವಲ್ಪ ಜೋರಾಗಿಯೇ ಹೊಡೆದಿದ್ದೀನಿ.

ಇದನ್ನೂ ಓದಿ: ‘ಅವ್ರ ಅವನತಿಗೆ ಇವೆಲ್ಲಾ ದಿಕ್ಸೂಚಿ’ -ಡಿಕೆಎಸ್​​ರಿಂದ ಏಟು ತಿಂದ ಉಮೇಶ್‌​ ಗರಂ

ಆತ ನಮ್ಮನೇ ಹುಡುಗ. ಸ್ವಲ್ಪ ಜೋರಾಗಿ ಹೊಡೆದಿದ್ದೀನಿ. ಅವನು ನನ್ನ ಬೈದುಕೊಂಡರೆ, ನಾನು ಅವನನ್ನು ಬೈದುಕೊಳ್ಳುತ್ತೇನೆ, ಇದು ನಮ್ಮ ಅವನ ಸಂಬಂಧ. ಅವನು ಹೆಗಲ ಮೇಲೆ ಕೈ ಹಾಕಿಲ್ಲ ಎಂದರೇ ಕೈ ಏಕೆ ಬಂತು..? ಅವನನ್ನು ಸಿಟ್ಟಿಗೆಬ್ಬಿಸಿ ಮಾಧ್ಯಮಗಳು ಅವರ ಖುಷಿಗೆ ಪ್ರಸಾರ ಮಾಡುತ್ತಿದ್ದಾರೆ, ಮಾಡಿಕೊಳ್ಳಿ ಬಿಡಿ. ನಾವು ತಪ್ಪು ಮಾಡುತ್ತೀವಿ, ನಮ್ಮ ಹುಡುಗರು ತಪ್ಪು ಮಾಡುತ್ತಾರೆ ಎಂದರು.

ಇದನ್ನೂ ಓದಿ: ಕಾಂಗ್ರೆಸ್​ ಕಾರ್ಯಕರ್ತನ ತಲೆಗೆ ಬಾರಿಸಿದ ಡಿಕೆ ಶಿವಕುಮಾರ್

ಇದನ್ನೂ ಓದಿ: ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಉದಯ್ ಗಾಣಿಗ ಮನೆಗೆ ಡಿಕೆಎಸ್ ಭೇಟಿ; ಚೆಕ್ ವಿತರಣೆ

The post ಆತ ನಮ್ಮನೆ ಹುಡುಗ.. ಸ್ವಲ್ಪ ಜೋರಾಗಿ ಹೊಡೆದಿದ್ದೀನಿ -ಡಿ.ಕೆ ಶಿವಕುಮಾರ್ appeared first on News First Kannada.

Source: newsfirstlive.com

Source link