‘ಸ್ವಾಭಿಮಾನಿ ಪಕ್ಷ ಕಟ್ಟಿ’ ಎಂದ ಅಭಿಮಾನಿಗಳು; ಸಂಸದೆ ಸುಮಲತಾ ರಿಯಾಕ್ಷನ್ ಹೇಗಿತ್ತು..?

‘ಸ್ವಾಭಿಮಾನಿ ಪಕ್ಷ ಕಟ್ಟಿ’ ಎಂದ ಅಭಿಮಾನಿಗಳು; ಸಂಸದೆ ಸುಮಲತಾ ರಿಯಾಕ್ಷನ್ ಹೇಗಿತ್ತು..?

ಬೆಂಗಳೂರು: ನಗರದ ಕಂಠೀರವ ಸ್ಟುಡಿಯೋದಲ್ಲಿರುವ ರೆಬೆಲ್​ ಸ್ಟಾರ್​​ ಅಂಬರೀಶ್ ಸಮಾಧಿಗೆ ಭೇಟಿ ನೀಡಿದ ವೇಳೆ ಇಲ್ಲಿ ನೆರೆದಿದ್ದ ಅಭಿಮಾನಿಗಳನ್ನು ನೋಡಿ ಸಂಸದೆ ಸುಮಲತಾ ಒಂದು ಕ್ಷಣ ಭಾವುಕರಾದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತಾಡಿದ ಸುಮಲತಾ ಅಂಬರೀಶ್..​, ಸಿಎಂ ಎಚ್​​.ಡಿ ಕುಮಾರಸ್ವಾಮಿ ವಿರುದ್ಧ ಮಾಡುತ್ತಿರುವ ಪ್ರತಿಭಟನೆಗೆ ನನ್ನ ಬೆಂಬಲವಿಲ್ಲ. ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅಂಬರೀಶ್​​​​ ಹೆಸರನ್ನು ಬಳಸಿಕೊಂಡಿದ್ದರಿಂದ ಅಭಿಮಾನಿಗಳಿಗೆ ನೋವಾಗಿದೆ ಎಂದರು. ಆಗ ಅಭಿಮಾನಿಗಳು ಅಂಬರೀಶ್​​ ಅಣ್ಣನಿಗೆ ಬೇಕಾದ್ರೆ ನಮ್ಮ ಪ್ರಾಣ ನೀಡಲು ಸಿದ್ಧ ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.

ಅಂಬರೀಶ್​​ ನಿಮ್ಮ ಅಭಿಮಾನದ ಪ್ರೀತಿಯಿಂದಲೇ ಬೆಳೆದವರು. ಅಂಬರೀಶ್ರ ದಾರಿಯಲ್ಲೇ ಹೋಗುತ್ತೇನೆ. ನನ್ನ ಗಂಡನ ಹೆಸರನ್ನು ಕಾಪಾಡುತ್ತೇನೆ. ನಿಮ್ಮ ಈ ಅಭಿಮಾನವೇ ನನಗೆ ಶಕ್ತಿ ಎಂದು ಸುಮಲತಾ ಈ ವೇಳೆ ಕೈ ಮುಗಿದರು.

ಇದನ್ನೂ ಓದಿ: ‘ಅಂಬರೀಶ್ ಅಭಿಮಾನಿಗಳು ಇತ್ತೀಚೆಗಿನ ಬೆಳವಣಿಗೆಗಳಿಂದ ನೊಂದಿದ್ದಾರೆ.. ಆದರೆ’

ಅಕ್ಕ ಸ್ವಾಭಿಮಾನಿ ಪಕ್ಷ ಕಟ್ಟಿ..

ಇನ್ನು, ನೀವು ಸ್ವಾಭಿಮಾನಿ ಪಕ್ಷವೊಂದು ಕಟ್ಟಿ ಅಕ್ಕ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಅಂಬರೀಶ್​​.. ಯಾರೂ ಕೆಟ್ಟ ದಾರಿಯಲ್ಲಿ ಹೋಗುವುದು ಬೇಡ. ನಿಮ್ಮ ಪರವಾಗಿ ನಾನು ಕೆಲಸ ಮಾಡುತ್ತೇನೆ. ಭಗವಂತ ಇದ್ದಾನೆ, ಅವನೇ ಎಲ್ಲವನ್ನೂ ನೋಡಿಕೊಳ್ಳುತ್ತೇನೆ ಎಂದರು. ಆಗ ಸುಮಲತಾ ಅವರ ಹೇಳಿಕೆಗೆ ಅಭಿಮಾನಿಗಳು ನಮ್ಮ ಪ್ರಾಣವೇ ನಿಮ್ಮದಕ್ಕ ಎಂದು ಅಭಿಮಾನ ತೋರಿದರು.

blank

ಕೆಆರ್​ಎಸ್​ ಡ್ಯಾಂಗೆ ಡ್ಯಾಮೇಜ್​ ಆಗುತ್ತಿರುವುದರ ವಿರುದ್ಧ ಮಾತಾಡುತ್ತಿದ್ದೇನೆ. ನನಗೀಗ ದಿನನಿತ್ಯ ನೂರಾರು ಫೋನ್​ಗಳು ಬರುತ್ತಿವೆ. ಎಲ್ಲರಿಗೂ ಅಕ್ರಮ ನಡೆಯುತ್ತಿರುವುದನ್ನು ನಿಲ್ಲಿಸಿ ಎಂದು ಕೇಳಿಕೊಂಡಿದ್ದೇನೆ. ಈಗ ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡುತ್ತಿದ್ದಾರೆ. ಇದುವರೆಗೂ ಅಕ್ರಮ ಗಣಿಗಾರಿಕೆ ಕುರಿತಾದ ಮಾಹಿತಿ ನನಗೆ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.

 

The post ‘ಸ್ವಾಭಿಮಾನಿ ಪಕ್ಷ ಕಟ್ಟಿ’ ಎಂದ ಅಭಿಮಾನಿಗಳು; ಸಂಸದೆ ಸುಮಲತಾ ರಿಯಾಕ್ಷನ್ ಹೇಗಿತ್ತು..? appeared first on News First Kannada.

Source: newsfirstlive.com

Source link