ಉ.ಪ್ರದೇಶದಲ್ಲಿ ಬಾಂಬ್ ಸ್ಫೋಟಕ್ಕೆ ಸ್ಕೆಚ್; ಇಬ್ಬರು ಶಂಕಿತ ಉಗ್ರರು ಅರೆಸ್ಟ್

ಉ.ಪ್ರದೇಶದಲ್ಲಿ ಬಾಂಬ್ ಸ್ಫೋಟಕ್ಕೆ ಸ್ಕೆಚ್; ಇಬ್ಬರು ಶಂಕಿತ ಉಗ್ರರು ಅರೆಸ್ಟ್

ಉತ್ತರ ಪ್ರದೇಶದ ಲಖನೌನಲ್ಲಿ ಭಯೋತ್ಪಾದಕ ನಿಗ್ರಹ ದಳ(ATS) ಬರೋಬ್ಬರಿ 8 ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದು ಭಾರೀ ದುರಂತವೊಂದನ್ನ ತಡೆದಿದ್ದಾರೆ. ಭಯೋತ್ಪಾದಕರ ಗುಂಪೊಂದು ಬಾಂಬ್ ಸ್ಫೋಟಿಸಲು ತಯಾರಿ ನಡೆಸಿತ್ತು ಎನ್ನಲಾಗಿದ್ದು.. ಭಯೋತ್ಪಾದಕರ ಬೆನ್ನುಬಿದ್ದ ಎಟಿಎಸ್​ ಟೀಮ್ ಇಬ್ಬರು ಶಂಕಿತ ಉಗ್ರರನ್ನ ಸೆರೆಹಿಡಿದಿದೆ.

ಲಖನೌನ ಕಕೋರಿ ಬಳಿ ಇಬ್ಬರು ಶಂಕಿತರನ್ನ ಬಂಧಿಸಲಾಗಿದ್ದು ಎರಡು ಕುಕ್​ವೇರ್​ ಬಾಂಬ್​​ಗಳನ್ನ ವಶಪಡಿಸಿಕೊಂಡಿದ್ದಾರೆ. ಜಮ್ಮು ಕಾಶ್ಮೀರದಿಂದ ಕೃತ್ಯದ ಬಗ್ಗೆ ಗಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರ ಹಿನ್ನೆಲೆ ಯುಪಿ ಎಟಿಎಸ್​​ ಅಧಿಕಾರಿಗಳಿಗೆ ಪ್ರಕರಣ ಭೇದಿಸಲು ಸಾಧ್ಯವಾಗಿದ್ದು.. ಶಂಕಿತರು ರಾಜಕಾರಣಿಗಳನ್ನ ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟಿಸಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.

blank

ಬಂಧನಕ್ಕೊಳಗಾಗಿರುವ ಉಗ್ರರು ಬಾರ್ಡರ್​ನ ಕೆಲವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ. ಶಂಕಿತ ಉಗ್ರರು ಅಡಗಿದ್ದರು ಎನ್ನಲಾದ ಸ್ಥಳಕ್ಕೆ ಎಟಿಎಸ್​ ಕಮಾಂಡೋಗಳು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

The post ಉ.ಪ್ರದೇಶದಲ್ಲಿ ಬಾಂಬ್ ಸ್ಫೋಟಕ್ಕೆ ಸ್ಕೆಚ್; ಇಬ್ಬರು ಶಂಕಿತ ಉಗ್ರರು ಅರೆಸ್ಟ್ appeared first on News First Kannada.

Source: newsfirstlive.com

Source link