ಕೊರೊನಾ ಹೆಸರಲ್ಲೇ ಸಿನಿಮಾ ಮಾಡಿದ ಚೀನಾ; ಮೂರೇ ದಿನಕ್ಕೆ 300 ಕೋಟಿ ಗಳಿಕೆ

ಕೊರೊನಾ ಹೆಸರಲ್ಲೇ ಸಿನಿಮಾ ಮಾಡಿದ ಚೀನಾ; ಮೂರೇ ದಿನಕ್ಕೆ 300 ಕೋಟಿ ಗಳಿಕೆ

ಜಗತ್ತಿಗೇ ಕೊರೊನಾ ಹರಡಲು ಕಾರಣವಾದ ಚೀನಾ ಬಗ್ಗೆ ಅಮೆರಿಕಾ ಸೇರಿದಂತೆ ಅದೆಷ್ಟೋ ದೇಶಗಳು ಇಂದಿಗೂ ಛೀಮಾರಿ ಹಾಕುತ್ತಿವೆ. ಇದಕ್ಕೆ ಕಾರಣ ಒಂದೂವರೆ ವರ್ಷಗಳಾದ್ರೂ ಕೊರೊನಾ ಕಂಟ್ರೋಲ್​ಗೆ ಬಂದಿಲ್ಲ.. ಹೊಸ ಹೊಸ ಅವತಾರದಲ್ಲಿ ರೂಪಾಂತರಗೊಂಡು ಇಡೀ ಜಗತ್ತನ್ನೇ ಕೊರೊನಾ ಸೋಂಕು ಡೋಲಾಯಮಾನ ಮಾಡಿಬಿಟ್ಟಿದೆ. ಆದ್ರೆ ಕೊರೊನಾ ಹಂಚಿದ ಚೀನಾ ಕೊರೊನಾದ ಹೆಸರಲ್ಲೇ ಗಳಿಕೆ ಮಾಡಲು ಪ್ರಾರಂಭಿಸಿದೆ.

ಹೌದು.. ಚೀನಾದಲ್ಲಿ ಕೊರೊನಾ ಸೋಂಕು ಹೆಚ್ಚಾದಾಗ ಕೆಲವೇ ದಿನಗಳಲ್ಲಿ ಬೃಹತ್ ಆಸ್ಪತ್ರೆಗಳನ್ನ ನಿರ್ಮಿಸಿ ಯುದ್ಧೋಪಾದಿಯಲ್ಲಿ ವೈದ್ಯರು ಸೋಂಕಿನ ನಿಯಂತ್ರಣಕ್ಕೆ ಮುಂದಾದರು. ಜಗತ್ತಿನಾದ್ಯಂತ ಹಗಲಿರುಳು ವೈದ್ಯರು ಕಷ್ಟಪಟ್ಟಂತೆ ಚೀನಾದಲ್ಲೂ ವೈದ್ಯರು ನಿದ್ದೆಗೆಟ್ಟು ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾದರು.

blank

ಇದೀಗ ಕೊರೊನಾ ವಿರುದ್ಧ ಚೀನಾ ವೈದ್ಯರು ಹೋರಾಟ ನಡೆಸಿದ್ದನ್ನೇ ಕಥಾವಸ್ತುವನ್ನಾಗಿಟ್ಟುಕೊಂಡು ಚೀನಾ ಚೈನೀಸ್ ಡಾಕ್ಟರ್ ಹೆಸರಿನಲ್ಲಿ ಸಿನಿಮಾವೊಂದನ್ನ ತಯಾರಿಸಿದೆ. ಅಲ್ಲದೇ ಕಳೆದ ಮೂರುದಿನಗಳ ಹಿಂದೆ ಸಿನಿಮಾ ಬಿಡುಗಡೆಯಾಗಿದ್ದು ಭಾನುವಾರ ಮಧ್ಯಾಹ್ನದ ಹೊತ್ತಿಗೆ 46.3 ಮಿಲಿಯನ್​ ಡಾಲರ್ ಅಂದ್ರೆ ಭಾರತೀಯ ರೂಪಾಯಿಯಲ್ಲಿ 300 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.

The post ಕೊರೊನಾ ಹೆಸರಲ್ಲೇ ಸಿನಿಮಾ ಮಾಡಿದ ಚೀನಾ; ಮೂರೇ ದಿನಕ್ಕೆ 300 ಕೋಟಿ ಗಳಿಕೆ appeared first on News First Kannada.

Source: newsfirstlive.com

Source link