ಸ್ನೇಹಿತರ ಸಮೇತ ಪೊಲೀಸ್​ ಠಾಣೆಗೆ ಬಂದ ನಟ ದರ್ಶನ್.. ‘ದಾಸನ’ ಮನೆಯಲ್ಲಿ ಆಗಿದ್ದೇನು?

ಸ್ನೇಹಿತರ ಸಮೇತ ಪೊಲೀಸ್​ ಠಾಣೆಗೆ ಬಂದ ನಟ ದರ್ಶನ್.. ‘ದಾಸನ’ ಮನೆಯಲ್ಲಿ ಆಗಿದ್ದೇನು?

ಮೈಸೂರು: ನಟ ದರ್ಶನ್​ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ವಂಚನೆ ಮಾಡಲು ಮುಂದಾಗಿದ್ದ ಘಟನೆ ಕುರಿತಂತೆ ನಟ ದರ್ಶನ್ ಅವರು ಸ್ವತಃ ಸ್ನೇಹಿತರೊಂದಿಗೆ ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.

ನಟ ದರ್ಶನ್ ನಿವಾಸಕ್ಕೆ ಆಗಮಿಸಿ ವಂಚನೆ ಮಾಡಲು ಮುಂದಾಗಿದ್ದ ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಏನಿದು ಘಟನೆ..?
ಮಹಿಳೆಯೊಬ್ಬರು ನಾವು ಬ್ಯಾಂಕ್​ ಮ್ಯಾನೇಜರ್​ ಎಂದು ಹೇಳಿಕೊಂಡು ನಟ ದರ್ಶನ್ ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ನಾನು ಬ್ಯಾಂಕ್ ಮ್ಯಾನೇಜರ್ ಎಂದು ಮಹಿಳೆ ಪರಿಚಯಿಸಿಕೊಂಡಿದ್ದರು ಎನ್ನಲಾಗಿದೆ.

ನಿಮ್ಮ ಸ್ನೇಹಿತರು ನಿಮ್ಮ ಶ್ಯೂರಿಟಿಯಲ್ಲಿ ಸಾಲಕ್ಕೆ ಅರ್ಜಿ ಹಾಕಿದ್ದಾರೆ.. ಇದರ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದೇನೆ ಎಂದು ಮಹಿಳೆ ಹೇಳಿದ್ದು, ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಜೊತೆ ಮಹಿಳೆ ಆಗಮಿಸಿದ್ದರು ಎನ್ನಲಾಗಿದ್ದು, ಮೈಸೂರಿನ ಕೆಲ ದರ್ಶನ್ ಸ್ನೇಹಿತರು 25 ಕೋಟಿ ಲೋನ್‌ಗೆ ಅರ್ಜಿ ಹಾಕಿದ್ದಾರೆ. ನಿಮ್ಮ ಹೆಸರು ಬಳಸಿಕೊಂಡು ಸಾಲಕ್ಕೆ ಅರ್ಜಿ ಹಾಕಿದ್ದಾರೆ ಎಂದು ಮಹಿಳೆ ಹೇಳಿದರಂತೆ.

ಈ ಬಗ್ಗೆ ಪರಿಶೀಲನೆ ನಡೆಸಿದಾಗ ಲೋನ್‌ಗೆ ಯಾರೂ ಅರ್ಜಿ ಹಾಕಿರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದ್ದು, ದರ್ಶನ್ ಸ್ನೇಹಿತರ ಜೊತೆಯಾಗಿ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿದ್ದು, ಘಟನೆ ಸಂಬಂಧ ಈಗಾಗಲೇ ಉಮಾಪತಿ ಶ್ರೀನಿವಾಸ್ ಗೌಡರನ್ನು ಕರೆಸಿರುವ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ವಿಚಾರಣೆ ವೇಳೆ, ಉಮಾಪತಿ ಹೇಳಿದ ಕಾರಣ ದರ್ಶನ ಬಳಿ ಬಂದು ಈ ರೀತಿ ಮಾಡಿದೆ ಎಂದು ಮಹಿಳೆ ಹೇಳಿದ್ದಾರೆ ಎನ್ನಲಾಗಿದೆ. ಈ ಹೇಳಿಕೆ ಹಿನ್ನೆಲೆಯಲ್ಲಿ ಉಮಾಪತಿ ಅವರು ಯಾವ ಕಾರಣಕ್ಕೆ ಹೀಗೆ ಮಾಡಿದರು ಅನ್ನೋ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರಕರಣವನ್ನು ಖುದ್ದು ಡಿಸಿಪಿ ಪ್ರದೀಪ್ ಗುಂಠಿ ಅವರು ತನಿಖೆ ನಡೆಸುತ್ತಿದ್ದು, ಎಸಿಪಿ ಶಿವಶಂಕರ್ ಕೂಡ ತನಿಖೆಯಲ್ಲಿ ಉಪಸ್ಥಿತರಿದ್ದಾರೆ ಎಂದು ಹೇಳಲಾಗಿದೆ.

The post ಸ್ನೇಹಿತರ ಸಮೇತ ಪೊಲೀಸ್​ ಠಾಣೆಗೆ ಬಂದ ನಟ ದರ್ಶನ್.. ‘ದಾಸನ’ ಮನೆಯಲ್ಲಿ ಆಗಿದ್ದೇನು? appeared first on News First Kannada.

Source: newsfirstlive.com

Source link