ಆಷಾಢ ಮಾಸದ ಬಳಿಕ ಸಂಪುಟ ವಿಸ್ತರಣೆ ಸಾಧ್ಯತೆ; ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ?

ಆಷಾಢ ಮಾಸದ ಬಳಿಕ ಸಂಪುಟ ವಿಸ್ತರಣೆ ಸಾಧ್ಯತೆ; ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ?

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಬಹುನಿರೀಕ್ಷಿತ ಸಂಪುಟ ವಿಸ್ತರಣೆಗೆ ಮುಹೂರ್ತ ಬಹುತೇಕ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ. ಆಷಾಢ ಮಾಸ ಮುಗಿದ ಕೂಡಲೇ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಬಿ.ಎಸ್​ ಯಡಿಯೂರಪ್ಪ ಮುಂದಾಗಿದ್ದಾರಂತೆ. ಹೀಗಾಗಿ ಬಿಜೆಪಿ ಹಲವು ಶಾಸಕರು ಮಂತ್ರಿಯಾಗಲು ಈಗಿನಿಂದಲೇ ಭಾರೀ ಸರ್ಕಸ್​​ ನಡೆಸುತ್ತಿದ್ದಾರಂತೆ.

ಹೌದು, ಆಷಾಢ ಮಾಸ ಮುಗಿದ ಕೂಡಲೇ ಸಂಪುಟ ವಿಸ್ತರಣೆ ಎಂದ ಕೂಡಲೇ ಸಚಿವ ಸ್ಥಾನದ ಆಕಾಂಕ್ಷಿಗಳು ಭಾರೀ ಸರ್ಕಸ್​​ ನಡೆಸುತ್ತಿದ್ದಾರಂತೆ. ನಾವು ಮುಂದಿನ ತಿಂಗಳದಲ್ಲಿ ವಿಸ್ತರಣೆಯಾಗುವ ಸಂಪುಟ ಸೇರಬೇಕಾದರೆ ಈಗಿನಿಂದಲೇ ಕಸರತ್ತು ಮಾಡಬೇಕು. ಹಾಗಾಗಿ, ಸಂಪುಟ ಸೇರಲು ಅಗತ್ಯವಿರುವ ಎಲ್ಲಾ ಕೆಲಸಗಳು ಮಾಡಬೇಕು ಎಂದು ಬಿಜೆಪಿ ಶಾಸಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಮಂತ್ರಿ ರೇಸ್​​ನಲ್ಲಿರುವ ನಾಯಕರು

ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದೃಷ್ಟಿಯಲ್ಲಿಟ್ಟುಕೊಂಡು ವಿಸ್ತರಿಸುತ್ತಿರುವ ಸಂಪುಟಕ್ಕೆ ಹೇಗಾದರೂ ಸೇರಿಕೊಳ್ಳಬೇಕು ಎಂದು ಹಲವರು ಪ್ಲಾನ್​ ಮಾಡಿಕೊಡಿದ್ದಾರಂತೆ. ಈ ಸಾಲಿನಲ್ಲಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಎಸ್.ವಿ ರಾಮಚಂದ್ರ, ನೆಹರು ಓಲೇಕಾರ್, ಎಸ್.ಎ ರಾಮದಾಸ್, ಸುನೀಲ್‌ ಕುಮಾರ್‌ ಕಾರ್ಕಳ, ಶಿವನಗೌಡ ನಾಯಕ್, ರಾಜೂಗೌಡ, ದತ್ತಾತ್ರೇಯ ಪಾಟೀಲ್ ರೇವೂರ್, ರಾಜ್‌ಕುಮಾರ್ ಪಾಟೀಲ್ ತೇಲ್ಕೂರ್ ಸೇರಿದಂತೆ ಹಲವು ಆಕಾಂಕ್ಷಿಗಳು ಇದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

blank

ತಿಂಗಳಾಂತ್ಯಕ್ಕೆ ಏನು ಕಸರತ್ತು ಬೇಕೋ ಅದನ್ನೆಲ್ಲಾ ಮಾಡಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕು. ಈ ಬಾರಿ ಮಿಸ್​​ ಆದಲ್ಲಿ ಮುಂದೆ ಸಂಪುಟ ಸೇರಲು ಸಾಧ್ಯವೇ ಇಲ್ಲ. ಹೀಗಾಗಿ ಜಾತಿ, ಪ್ರದೇಶ ಮತ್ತು ಕೆಲಸದ ಟ್ರಂಪ್​ ಕಾರ್ಡ್​ ಪ್ಲೇ ಮಾಡಲುಸಚಿವ ಸ್ಥಾನದ ಆಕಾಂಕ್ಷಿಗಳು ಮುಂದಾಗಿದ್ದಾರಂತೆ.

ರಮೇಶ್​​ ಜಾರಕಿಹೊಳಿಗೆ ಮತ್ತೆ ಮಂತ್ರಿ ಭಾಗ್ಯ?

ಇನ್ನು, ಮೂಲಗಳ ಪ್ರಕಾರ ಸಿಡಿ ಕೇಸ್​​ನಲ್ಲಿ ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಮುನಿರತ್ನರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆಯಾದರೂ ಇದರ ಕುರಿತು ಸ್ಪಷ್ಟ ಮಾಹಿತಿಯಿಲ್ಲ.

blank

The post ಆಷಾಢ ಮಾಸದ ಬಳಿಕ ಸಂಪುಟ ವಿಸ್ತರಣೆ ಸಾಧ್ಯತೆ; ಯಾರಿಗೆ ಒಲಿಯಲಿದೆ ಮಂತ್ರಿ ಭಾಗ್ಯ? appeared first on News First Kannada.

Source: newsfirstlive.com

Source link