ನೆಟ್​ವರ್ಕ್ ಸಮಸ್ಯೆ; ಆನ್​ಲೈನ್ ಕ್ಲಾಸ್ ಅಟೆಂಡ್​ ಮಾಡಲು ಗುಡ್ಡವೇರಿದ ವಿದ್ಯಾರ್ಥಿಗಳು

ನೆಟ್​ವರ್ಕ್ ಸಮಸ್ಯೆ; ಆನ್​ಲೈನ್ ಕ್ಲಾಸ್ ಅಟೆಂಡ್​ ಮಾಡಲು ಗುಡ್ಡವೇರಿದ ವಿದ್ಯಾರ್ಥಿಗಳು

ಕೊರೊನಾ ಸೋಂಕಿನ ಹಿನ್ನೆಲೆ ಬಹುತೇಕ ವಿದ್ಯಾರ್ಥಿಗಳು ಇದೀಗ ಆನ್ಲೈನ್ ಕ್ಲಾಸ್ ಒಂದೇ ಕೊನೆಯ ಪರಿಹಾರ ಎಂಬಂತಾಗಿದೆ. ಆದರೆ ಕರ್ನಾಟಕ ಮಹಾರಾಷ್ಟ್ರ ಗಡಿ ಪ್ರದೇಶದ ಖಾನಾಪೂರದ ಕಾಡಂಚಿನ ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್​ನಲ್ಲಿ ಪಾಲ್ಗೊಳ್ಳಲು ನೆರೆರಾಜ್ಯಗಳಾದ ಮಹಾರಾಷ್ಟ್ರ-ಗೋವಾ ನೆಟ್ವರ್ಕ್ ಮೊರೆ ಹೋಗುವಂತಾಗಿದೆಯಂತೆ.

ಆನ್ಲೈನ್ ಕ್ಲಾಸ್ ಅಟೆಂಡ್ ಮಾಡಲು ನೆಟ್ವರ್ಕ್​ಗಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರದಾಟ ನಡೆಸುವಂತಾಗಿದ್ದು ಮಹಾರಾಷ್ಟ್ರ-ಗೋವಾದ ಗಡಿಯೊಳಗಿನ ಕಾಡಿನ ಮದ್ಯ ಗುಡ್ಡವೇರಿ ಕುಳಿತು ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.

ಖಾನಾಪೂರ ತಾಲೂಕಿನ ಜಾಂಬೋಟಿ, ಕಣಕುಂಬಿ, ಮಾನ, ಚೋರ್ಲಾ, ಮಂಡೋಳಿ ಗ್ರಾಮ ಸೇರಿದಂತೆ 30 ಕ್ಕೂ ಹೆಚ್ಚು ಹಳ್ಳಿಗಳ ವಿದ್ಯಾರ್ಥಿಗಳಿಗೆ ಮೊಬೈಲ್ ನೆಟ್ವರ್ಕ್ನ ಸಮಸ್ಯೆ ಎದುರಾಗಿದ್ದು ಸಮಸ್ಯೆ ಕುರಿತು ವಿದ್ಯಾರ್ಥಿಗಳು ಖಾನಾಪೂರ ಕ್ಷೇತ್ರದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಗಮನಕ್ಕೆ ತಂದಿದ್ದಾರೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸಮಸ್ಯೆ ಕುರಿತು ಟ್ವೀಟ್ ಮಾಡಿದ ಶಾಸಕಿ.. ನೆಟ್ವರ್ಕ್ ಸಮಸ್ಯೆ ಸರ್ಕಾರದ ಗಮನ ಸೆಳೆಯಲು ನಿರ್ಧಾರ ಮಾಡಲಾಗಿದೆ.. ವಿದ್ಯಾರ್ಥಿಗಳ ನೆಟ್ವರ್ಕ್ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.

The post ನೆಟ್​ವರ್ಕ್ ಸಮಸ್ಯೆ; ಆನ್​ಲೈನ್ ಕ್ಲಾಸ್ ಅಟೆಂಡ್​ ಮಾಡಲು ಗುಡ್ಡವೇರಿದ ವಿದ್ಯಾರ್ಥಿಗಳು appeared first on News First Kannada.

Source: newsfirstlive.com

Source link