ಜಿಮ್‍ನಲ್ಲಿ ಜಿದ್ದಿಗೆ ಬಿದ್ದ ಪಾಂಡ್ಯ ಸಹೋದರರು

ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರು ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ಈ ಇಬ್ಬರು ಸಹೋದರು ಜಿಮ್‍ನಲ್ಲಿ ಜಿದ್ದಿಗೆ ಬಿದ್ದು ಯಾರು ಬೆಸ್ಟ್ ಎನ್ನುವುದನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ.

ಪಾಂಡ್ಯ ಸಹೋದರರು ಜಿಮ್‍ನಲ್ಲಿ ಮೂರು ಸವಾಲುಗಳನ್ನು ಪರಸ್ಪರ ಎದುರಾಳಿಗಳಾಗಿ ಎದುರಿಸಿದ್ದಾರೆ. ಈ ವೀಡಿಯೋವನ್ನು ಬಿಸಿಸಿಐ ಟ್ವಿಟ್ಟರ್‍ ನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.

ಲಂಕಾ ನೆಲದಲ್ಲಿ ಬೀಡುಬಿಟ್ಟಿರುವ ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾದಲ್ಲಿ ಪ್ರಮುಖ ಆಲ್‍ರೌಂಡರ್ಸ್‍ಗಳಾಗಿ ಗುರುತಿಸಿಕೊಂಡಿರುವ ಪಾಂಡ್ಯ ಸಹೋದರು ಜಿಮ್‍ನಲ್ಲಿ ಕಾದಾಟ ನಡೆಸಿದ್ದಾರೆ. ಇಬ್ಬರೂ ಕೂಡ 3 ಚಾಲೆಂಜ್‍ಗಳನ್ನು ಸ್ವೀಕರಿಸಿದ್ದಾರೆ ಮೊದಲು ‘ವಾಲ್ ಸ್ಕ್ವಾಟ್ ಹೋಲ್ಡ್’ ಚಾಲೆಂಚ್ ಸ್ವೀಕರಿಸಿದ್ದಾರೆ ಈ ಸವಾಲಿನಲ್ಲಿ ಕೃನಾಲ್ ಪಾಂಡ್ಯ ಗೆದ್ದಿದ್ದಾರೆ. ಬಳಿಕ ಎರಡನೇ ಸ್ಪರ್ಧೆಯಲ್ಲಿ ಹಾರ್ದಿಕ್ ಪಾಂಡ್ಯ ಗೆಲ್ಲುವ ಮೂಲಕ ಸಮಬಲ ಸಾಧಿಸಿದರು. ಬಳಿಕ ಅಂತಿಮ ಸುತ್ತಿನ ‘ಸ್ಪ್ಲಿಟ್ ಸ್ಕ್ವಾಟ್ ಹೋಲ್ಡ್’ ಸ್ಪರ್ಧೆಯಲ್ಲಿ ಇಬ್ಬರೂ ಕೂಡ ಸಮಾನವಾಗಿ ಸ್ಪರ್ಧಿಸುವ ಮೂಲಕ ಇಬ್ಬರೂ ಕೂಡ ಸ್ಟ್ರಾಂಗ್ ಎಂಬ ಸಂದೇಶವನ್ನು ನೀಡಿದ್ದಾರೆ. ಇದನ್ನೂ ಓದಿ: ಹರ್ಲೀನ್ ಡಿಯೋಲ್ ದಿ ಬೆಸ್ಟ್ ಕ್ಯಾಚ್ – ದಿಗ್ಗಜರು ಬೆರಗು

ಭಾರತ ಹಾಗೂ ಶ್ರೀಲಂಕಾ ನಡುವಿನ ಸರಣಿಯಲ್ಲಿ ಈ ಇಬ್ಬರೂ ಕೂಡ ಪ್ರಮುಖ ಆಟಗಾರರಾಗಿದ್ದಾರೆ. ಅದರಲ್ಲೂ ಹಾರ್ದಿಕ್ ಪಾಂಡ್ಯ ತಂಡದಲ್ಲಿರುವ ಅನುಭವಿ ಅಲ್‍ರೌಂಡರ್ ಆಗಿದ್ದಾರೆ. ಶ್ರೀಲಂಕಾ ವಿರುದ್ಧದ ನಿಗದಿತ ಓವರ್‍ ಗಳ ಸರಣಿ ಜುಲೈ 18 ರಿಂದ ಆರಂಭವಾಗಲಿದೆ. ಭಾರತ ಹಾಗೂ ಶ್ರೀಲಂಕಾ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ.

The post ಜಿಮ್‍ನಲ್ಲಿ ಜಿದ್ದಿಗೆ ಬಿದ್ದ ಪಾಂಡ್ಯ ಸಹೋದರರು appeared first on Public TV.

Source: publictv.in

Source link