ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ; ಮಹಿಳೆ ವಿರುದ್ಧ ಜಯನಗರದಲ್ಲಿ ನಿರ್ಮಾಪಕ ಉಮಾಪತಿ ದೂರು

ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ; ಮಹಿಳೆ ವಿರುದ್ಧ ಜಯನಗರದಲ್ಲಿ ನಿರ್ಮಾಪಕ ಉಮಾಪತಿ ದೂರು

ನಟ ದರ್ಶನ್ ಹೆಸರಲ್ಲಿ ಮಹಿಳೆಯೊಬ್ಬರು ವಂಚಿಸಿದ್ದಾರೆ ಎನ್ನಲಾಗಿದ್ದು ಈ ಸಂಬಂಧ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ಗೌಡ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ..? 

ಅರುಣ್ ಕುಮಾರಿ ಎಂಬುವವರು ದರ್ಶನ್ ಹಾಗೂ ಅವರಿಗೆ ಪರಿಚಿತರಬ್ಬರಿಗೆ ಲೋನ್​ಗಾಗಿ ದರ್ಶನ್ ಶ್ಯೂರಿಟಿ ಹಾಕಿದ್ದಾರೆ. ಈ ಬಗ್ಗೆ ದಾಖಲೆಗಳ ಕುರಿತು ವಿಚಾರಣೆ ಮಾಡಬೇಕು ಎಂದರು. ಅವರಿಗೆ ಭೇಟಿಯಾಗಲು ತಿಳಿಸಿದೆ. ನನ್ನ ಕಚೇರಿಗೆ ಬಂದ ಮಹಿಳೆ ಕೆಲವು ದಾಖಲೆ ತೋರಿಸಿ ದರ್ನ್ ಪರಿಚಿತರಿಗೆ ಲೋನ್​ಗಾಗಿ ಶ್ಯೂರಿಟಿ ಹಾಕಿದ್ದು ಈ ಬಗ್ಗೆ ವಿಚಾರಿಸಿ ಮಾಹಿತಿ ನೀಡಿ ಎಂದು. ನಾನು ದರ್ಶನ್​ ಅವರನ್ನೇ ಸಂಪರ್ಕಿಸಿ ಎಂದು ಹೇಳಿದ್ದೇನೆ.

ಮಹಿಳೆ ಇದೇ ರೀತಿ ಹಲವರಿಗೆ ಫೋನ್ ಮಾಡಿ ಲೋನ್ ಬಗ್ಗೆ ಮಾಹಿತಿ ನೀಡುವಂತೆ ವಿಚಾರಿಸಿದ್ದಾಳೆ. ಮಹಿಳೆಯ ವರ್ತನೆ ಹಾಗೂ ಅವರು ತೋರಿಸಿದ ದಾಖಲೆಗಳ ಬಗ್ಗೆ ನನಗೆ ಸಂಶಯವಿದೆ. ಆದ್ದರಿಂದ ನನ್ನನ್ನ ಭೇಟಿ ಮಾಡಿ ಮಹಿಳೆ ಅರುಣ್​ಕುಮಾರಿಯನ್ನ ಕರೆಸಿ ವಿಚಾರಣೆ ಮಾಡಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

The post ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ; ಮಹಿಳೆ ವಿರುದ್ಧ ಜಯನಗರದಲ್ಲಿ ನಿರ್ಮಾಪಕ ಉಮಾಪತಿ ದೂರು appeared first on News First Kannada.

Source: newsfirstlive.com

Source link