ಟರ್ಕಿಯಲ್ಲಿ ಭೀಕರ ಬಸ್​ ಅಪಘಾತ; 12 ಮಂದಿ ಸಾವು.. 26 ಜನರಿಗೆ ಗಾಯ

ಟರ್ಕಿಯಲ್ಲಿ ಭೀಕರ ಬಸ್​ ಅಪಘಾತ; 12 ಮಂದಿ ಸಾವು.. 26 ಜನರಿಗೆ ಗಾಯ

ನವದೆಹಲಿ: ಪೂರ್ವ ಟರ್ಕಿಯಲ್ಲಿ ಬಸ್ಸೊಂದು ಭೀಕರ ಅಪಘಾತಕ್ಕೀಡಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪ್ಘಾನ್​​​ ವಲಸಿಗರನ್ನು ಕರೆದೊಯ್ಯುತ್ತಿರುವಾಗ ಸಂಭವಿಸಿದ ಈ ಬಸ್​ ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ 26 ಮಂದಿಗೆ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು, ಅಪಘಾತಕ್ಕೀಡಾದ ಬಳಿಕ ಇರಾನ್​​-ಟರ್ಕಿ ಗಡಿ ಭಾಗದಲ್ಲಿರುವ ಮರ್ದಿಯಾದ ವಾನ್​ ಎಂಬ ಪ್ರಾಂತ್ಯದಲ್ಲಿ ಬಸ್​​​ ಕಮರಿಗೆ ಬಿದ್ದು ಬೆಂಕಿ ಹತ್ತಿಕೊಂಡಿದೆ. ಇದರ ಪರಿಣಾಮ ಸವಾರರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುತ್ತಿವೆ ಸ್ಥಳೀಯ ಮೂಲಗಳು.

ಬಸ್​​ ಪಾಕಿಸ್ತಾನದಿಂದ ಯೂರೋಪ್​ನತ್ತ ತೆರಳುತ್ತಿತ್ತು. ಈ ಮಾರ್ಗ ಮಧ್ಯೆ ವಲಸಿಗರನ್ನು ಟರ್ಕಿಗೆ ಸಾಗಿಸುವಾಗ ಈ ಅವಘಡ ಸಂಭವಿಸಿದೆ. ಇರಾನ್‌, ಅಪ್ಘಾನಿಸ್ತಾನ, ಪಾಕಿಸ್ತಾನದಿಂದ ಯೂರೋಪ್​​ಗೆ ತೆರಳುವ ವಲಸಿಗರಿಗೆ ಟರ್ಕಿಯೂ​​​​ ಮಧ್ಯವರ್ತಿ ದೇಶವಾಗಿತ್ತು ಎನ್ನಲಾಗಿದೆ.

The post ಟರ್ಕಿಯಲ್ಲಿ ಭೀಕರ ಬಸ್​ ಅಪಘಾತ; 12 ಮಂದಿ ಸಾವು.. 26 ಜನರಿಗೆ ಗಾಯ appeared first on News First Kannada.

Source: newsfirstlive.com

Source link