ಉಗ್ರರ ನಂಟು ಆರೋಪ; ಜಮ್ಮು&ಕಾಶ್ಮೀರದ 11 ಸರ್ಕಾರಿ ನೌಕರರ ವಜಾಕ್ಕೆ ಮೆಹಬೂಬಾ ಆಕ್ರೋಶ

ಉಗ್ರರ ನಂಟು ಆರೋಪ; ಜಮ್ಮು&ಕಾಶ್ಮೀರದ 11 ಸರ್ಕಾರಿ ನೌಕರರ ವಜಾಕ್ಕೆ ಮೆಹಬೂಬಾ ಆಕ್ರೋಶ

ನವದೆಹಲಿ: ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ನಿರಂತರವಾಗಿ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದೆ. ಈ ಕಾರ್ಯಾಚರಣೆ ವೇಳೆ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಆರೋಪದ ಮೇರೆಗೆ 11 ಮಂದಿ ಸರ್ಕಾರಿ ನೌಕರರನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತ ವಜಾಗೊಳಿಸಿ ಆದೇಶಿಸಿದೆ. ಆದರೀಗ, ಯಾವುದೇ ಸಮರ್ಪಕ ದಾಖಲೆಗಳಿಲ್ಲದೇ 11 ಮಂದಿ ಸರ್ಕಾರಿ ನೌಕರರನ್ನು ವಜಾಗೊಳಿಸಿರುವ ಜಮ್ಮು ಮತ್ತು ಕಾಶ್ಮೀರ ಆಡಳಿತ ನಡೆ ಖಂಡನೀಯ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಮೆಹಬೂಬಾ ಮುಫ್ತಿ, ಯಾವುದೇ ದಾಖಲೆಯಿಲ್ಲದೇ ಸರ್ಕಾರಿ ನೌಕರರನ್ನು ವಜಾ ಮಾಡಿರುವುದು ಅಕ್ಷಮ್ಯ ಅಪರಾಧ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹುಸಿ ರಾಷ್ಟ್ರೀಯತೆ ಹೆಸರಿನಲ್ಲಿ ಜಮ್ಮು-ಕಾಶ್ಮೀರಿಗರ ಮೇಲೆ ಹೀಗೆ ದೌರ್ಜನ್ಯ ಎಸಗುತ್ತಿದೆ. ನಮ್ಮನ್ನು ಸುಖಾಸುಮ್ಮನೆ ಶಿಕ್ಷಿಸುವ ಸಲುವಾಗಿಯೇ ಕೇಂದ್ರ ಸರ್ಕಾರ ಇಂತಹ ಅಮಾನವೀಯ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ದೂರಿದ್ದಾರೆ.

ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ 11 ಮಂದಿ ಸರ್ಕಾರಿ ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಇಬ್ಬರು ಪುತ್ರರ ಸೇರಿ 11 ನೌಕರರನ್ನು ವಿವಿಧ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇರೆಗೆ ಕೆಲಸದಿಂದ ಕಿತ್ತೊಗೆಯಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

The post ಉಗ್ರರ ನಂಟು ಆರೋಪ; ಜಮ್ಮು&ಕಾಶ್ಮೀರದ 11 ಸರ್ಕಾರಿ ನೌಕರರ ವಜಾಕ್ಕೆ ಮೆಹಬೂಬಾ ಆಕ್ರೋಶ appeared first on News First Kannada.

Source: newsfirstlive.com

Source link