ಮತ್ತೆ ಸದ್ದು ಮಾಡಿದ ಡ್ರೋಣ್ ಪ್ರತಾಪ್ ಕೇಸ್; ಜೇಕಬ್​ ಜಾರ್ಜ್​ಗೆ ನೋಟಿಸ್

ಮತ್ತೆ ಸದ್ದು ಮಾಡಿದ ಡ್ರೋಣ್ ಪ್ರತಾಪ್ ಕೇಸ್; ಜೇಕಬ್​ ಜಾರ್ಜ್​ಗೆ ನೋಟಿಸ್

ಬೆಂಗಳೂರು: ಡ್ರೋಣ್ ತಯಾರಿಕೆಯಲ್ಲಿ ಸಾಧನೆ ಮಾಡಿರುವುದಾಗಿ ಹೇಳಿಕೊಂಡು ವಂಚನೆ ಮಾಡಿರುವ ಆರೋಪದ ಮೇಲೆ,​​ ಪ್ರತಾಪ್ ವಿರುದ್ಧ ಸಾಮಾಜಿಕ ಕಾರ್ಯಕರ್ತರಾದ ಜೇಕಬ್ ಜಾರ್ಜ್ ಎಂಬುವವರು ಸಾರ್ವಜನಿಕ ಹಣವನ್ನು ವಂಚಿಸಿದ್ದಾರೆಂದು ಅಂದಿನ ನಗರ ಪೊಲೀಸ್​ ಆಯುಕ್ತರಾಗಿದ್ದ ಭಾಸ್ಕರ್​ ರಾವ್​ ಅವರಿಗೆ ದೂರು ನೀಡಿದ್ದರು.

ಇದೀಗ ಈಗ ಈ ಪ್ರಕರಣಕ್ಕೆ ಮತ್ತೆ ಜೀವಂತಿಕೆ ಬಂದಿದೆ. ಅಂದು ದೂರು ಪಡೆದಿದ್ದ ಸದ್ದಗುಂಟೆ ಪಾಳ್ಯ ಪೊಲೀಸರು ಡ್ರೋಣ್ ಪ್ರತಾಪನ ಮೊಬೈಲ್​ ನಂಬರ್​ ಮತ್ತು ವಿಳಾಸ ನೀಡುವಂತೆ ದೂರುದಾರರಾದ ಜೇಕಬ್​ ಜಾರ್ಜ್ ಅವರಿಗೆ ನೋಟಿಸ್​ ಕಳಿಸಿದ್ದಾರಂತೆ! ಪ್ರತಾಪ್​ನ ಅಡ್ರೆಸ್​, ಮೊಬೈಲ್​ ನಂಬರ್​, ಈಮೇಲ್​ ವಿಳಾಸ ನೀಡುವಂತೆ ಮನೆಗೆ ಬಂದ ನೋಟಿಸ್​ ಕಂಡು ದೂರುದಾರ ಜೇಕಬ್​ ಜಾರ್ಜ್ ಬೆರೆಗಾಗಿದ್ದಾರಂತೆ..

The post ಮತ್ತೆ ಸದ್ದು ಮಾಡಿದ ಡ್ರೋಣ್ ಪ್ರತಾಪ್ ಕೇಸ್; ಜೇಕಬ್​ ಜಾರ್ಜ್​ಗೆ ನೋಟಿಸ್ appeared first on News First Kannada.

Source: newsfirstlive.com

Source link