#biggboss ಕಿಚ್ಚನ ಖಡಕ್ ವಾರ್ನಿಂಗ್​; ಕಮಕ್-ಕಿಮಿಕ್ ಎನ್ನದ ಸ್ಪರ್ಧಿಗಳು

#biggboss ಕಿಚ್ಚನ ಖಡಕ್ ವಾರ್ನಿಂಗ್​; ಕಮಕ್-ಕಿಮಿಕ್ ಎನ್ನದ ಸ್ಪರ್ಧಿಗಳು

ವಾರದ ಕತೆ ಕಿಚ್ಚನ ಜೊತೆಯಲ್ಲಿ ಸುದೀಪ್​ ಮಾತಿಗೆ ಮನೆ ತಣ್ಣಗಾಗಿತ್ತು. ನಂದು ತಪ್ಪಿಲ್ಲ, ನಿಂದು ತಪ್ಪಿಲ್ಲ ಅಂತಾ ಹೇಳ್ತಿದ್ದವರೆಲ್ಲ, ಕಿಚ್ಚನ ಮಾತಿಗೆ ಕಮಕ್​ ಕಿಮಿಕ್​ ಅನ್ನಲಿಲ್ಲ. ಪ್ರಶಾಂತ್​ ಹಾಗೂ ಅರವಿಂದ್​ ಅವರು ಮಾಡಿದ ಗಲಾಟೆ ಕುರಿತು ಮಾತನಾಡಿ ಚಳಿ ಬಿಡುಸುತ್ತಾರೆ.
ದಿವ್ಯಾ ಕ್ಯಾಪ್ಟನ್​ಶಿಪ್​ ಅವಧಿ ಮುಗಿದಿದೆ ಎಂದು ಬಿಗ್​ ಬಾಸ್​ ಅನೌನ್ಸ್​ ಮಾಡ್ತಾರೆ. ಆಗ ಪ್ರಶಾಂತ್​ ಅವರು ದಿವ್ಯಾ ಅವರಿಗೆ ಗುಡ್​ ಜಾಬ್​ ಎನ್ನುತ್ತಾರೆ. ತಕ್ಷಣ ಅರವಿಂದ್​ ಮಾತನಾಡಿ, ಇದನ್ನೇಲ್ಲ ನಂಬ ಬೇಡ. ಮನಸ್ಸಲ್ಲೊಂದು ಹೊರಗಡೆ ಇನ್ನೊಂದು ಹೇಳ್ತಾರೆ ಅಂತಾರೆ ಅದಕ್ಕೆ ಪ್ರಶಾಂತ್​ ಕೆಂಡವಾಗುತ್ತಾರೆ. ಇವರಿಬ್ಬರ ಗಲಾಟೆ ತೀವ್ರವಾಗಿ ಕೈಮಿಲಾಯಿಸುವ ಹಂತಕ್ಕೆ ಹೋಗಿರುತ್ತೆ.

ಈ ಟಾಪಿಕ್​ ಬಗ್ಗೆ ಸುದೀಪ್​ ಮಾತನಾಡಿ, ಜಗಳ ಇಬ್ಬರೂ ಮಾಡಿದ್ರೆನೇ ಅದಕ್ಕೆ ಜಗಳ ಅನ್ನೋದು. ಆಟ ಮುಗಿದಿತ್ತು, ಇಡೀ ವಾರ ಮುಗಿಯುವುದ್ರಲ್ಲಿ ಇತ್ತು. ಯಾವ ಹೊಸ ವಿಚಾರಗಳು ಇರಲಿಲ್ಲ. ಹಳೆಯದನ್ನೇಲ್ಲಾ ತಲೆಯಲ್ಲಿ ಇಟ್ಕೊಂಡು ಹೊಸ ಜಗಳ ಶುರುವಾಗುತ್ತೆ. ಅದು ಎಲ್ಲಿಂದ ಎಲ್ಲಿಗೆ ಹೋಯ್ತು…ಇದು ನಿಮಗೆ ಸರಿ ಅನ್ಸುತ್ತಾ.

blank

ಇದಕ್ಕೆ ಅರವಿಂದ್​, ತುಂಬಾ ನಾಚಿಕೆ ವಿಷಯ. ಆ ತರಹ ಮಾಡ್ಬಾರ್ದಿತ್ತು. ಅಲ್ಲಿ ಜಗಳ ಅವಶ್ಯಕತೆ ಇರ್ಲಿಲ್ಲ. ಸಾರಿ ಅಂತಾರೆ.
ನಂತರ ಮಾತ್ನಾಡಿದ ಪ್ರಶಾಂತ್​, ಸರ್​ ಅರವಿಂದ್​ ಕೆಪಿ. ಅವರಿಗೆ ಯಾರಾದ್ರೂ ಕ್ರಿಟಿಸಿಜಮ್​ ಮಾಡಿದ್ರೇ ಅದನ್ನು ತೆಗೆದುಕೊಳ್ಳುವ ವಿಶಾಲ ಹೃದಯ ಇಲ್ಲ. ಅವರ ಇಗೋ ತುಂಬಾ ದೊಡ್ಡದಾಗಿದೆ. ನಾನು ಏನೇ ಹೇಳಿದ್ರೂ ಒವರ್​ ರಿಯಾಕ್ಟ್​ ಮಾಡ್ತಾರೆ. ನಾನು ಹಾಕಿದ ಪಾಯಿಂಟ್ಸ್​, ಕೇಳಿದ ನ್ಯಾಯ ಕರಕ್ಟಾಗಿ ಇತ್ತು. ಹಾಗಾಗಿ ಇದನ್ನು ಬಿಡ್ಬಾರ್ದು ಅಂತಾ ಜೋರಾದೆ. ನನ್ನ ಜೊತೆ ಇಡೀ ದಿನ ಯಾರು ಸರಿಯಾಗಿ ಮಾತ್ನಾಡಲಿಲ್ಲ. ನನ್ನ ಆಟ ಆಡೋಕೆ ಬಿಡಲಿಲ್ಲ. ತುಂಬಾ ಎಮೋಷನಲಿ ಬ್ರೇಕ್​ ಆಗಿದ್ದೆ. ಅದೆಲ್ಲಾ ಒಂದೇ ಸಾರಿ ಆಚೆ ಬಂತು ಅಂತಾರೆ. ಈ ಬಗ್ಗೆ ನಾನು ಇಡೀ ಮನೆಗೆ ಸಾರಿ ಕೇಳಿದೆ.

ಏನ್​ ಇನ್​ಫ್ಲೂಯನ್ಸ್​ ಮಾಡಿತು ಅರವಿಂದ್​ ಅವರೇ ಈ ರೀತಿ ಪ್ರವೋಕ್​ ಆಗೋಕೆ ಎಂದು ಸುದೀಪ್​ ಕೇಳ್ತಾರೆ. ನಿಮ್ಮ ಅಭಿಪ್ರಾಯಗಳನ್ನು ಹೇಳಬಹುದು. ಆದರೆ ಚಕ್ರವರ್ತಿ ಅವರೇ ಮಂಜು ಅವರು ನಿಮ್ಮ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ದಕ್ಕೆ ನಾನು ನಿಮ್ಮ ಪರ ನಿಂತಿದ್ದೆ. ಆದ್ರೇ ನೀವು ಮತ್ತೆ ಅದೇ ತಪ್ಪು ಮಾಡಿದ್ರಿ. ಅದನ್ನು ಅರವಿಂದ್​ ನೀವು ಕೇಳಿಸಿಕೊಂಡು ಸುಮ್ನೇ ಕೂತಿದ್ದು ಎಷ್ಟೂ ಸರಿ.

blank

ಈ ವಿಷಯ ಪ್ರಶಾಂತ್​ ಬಗ್ಗೆ ಮಾತಾಡೋಕೆ ಇನ್​ಫ್ಲೂಯನ್ಸ್ ಮಾಡಿತು ಎಂದು ಪರೋಕ್ಷವಾಗಿ ಸುದೀಪ್​ ಅರವಿಂದ್​ಗೆ ಮನವರಿಕೆ ಮಾಡುತ್ತಾರೆ.

ಪ್ರಶಾಂತ್​ ಹಾಗೂ ಅರವಿಂದ್​ ಮನೆ ನಿಮ್ಮಿಬ್ಬರದು ಮಾತ್ರಾ ಅಲ್ಲಾ. ಅಲ್ಲಿ ಬೇರೆ ಸ್ಪರ್ಧಿಗಳು ಇದ್ದಾರೆ. ಅವರಿಗೂ ತೊಂದ್ರೆ ಆಗುತ್ತೆ. ಪ್ರಶಾಂತ್​ ನೀವು ಮಾಡಿದ್ದು ನೋಡಿ ಎಲ್ಲರೂ ಭಯ ಪಟ್ಟಿದ್ದರೂ ಒಂದು ವೇಳೆ ನಿಮಗೆನಾದ್ರು ಹೆಚ್ಚು​ ಕಡಿಮೆ ಆಗಿದ್ರೇ.. ನೀವೇ ಯೋಚನೆ ಮಾಡಿ ಅಂತಾರೆ.

ವೈಯಕ್ತಿಕವಾಗಿ ಮಾತಡಬೇಡಿ ಅಂತಾ ಎಲ್ರೀಗೂ ಹೇಳ್ತಿದ್ದಿನಿ. ಪದೇ ಪದೇ ಅದೇ ತಪ್ಪು ಮಾಡೋದು ಸರಿಯಲ್ಲ. ನಿಮ್ಮತನವನ್ನು ನೀವು ಕಳೆದುಕೊಳ್ಳುತ್ತಿರಿ ಅಂತಾರೆ. ಇಲ್ಲಿ ಯಾರದೂ ಸರರೀಯಿಲ್ಲ, ಯಾರದೂ ತಪ್ಪಿಲ್ಲ. ಹಿಡಿತ ಕಳೇದುಕೊಳ್ಳಬೇಡಿ ಎಂದು ಬುದ್ಧಿ ಹೇಳುತ್ತಾರೆ ಕಿಚ್ಚ.

The post #biggboss ಕಿಚ್ಚನ ಖಡಕ್ ವಾರ್ನಿಂಗ್​; ಕಮಕ್-ಕಿಮಿಕ್ ಎನ್ನದ ಸ್ಪರ್ಧಿಗಳು appeared first on News First Kannada.

Source: newsfirstlive.com

Source link