ರೀಲ್​ನಲ್ಲಿ ಆಗದ್ದನ್ನ ರಿಯಲ್​ ಲೈಫ್​ನಲ್ಲಿ ಮಾಡಿದ ದುನಿಯಾ ವಿಜಯ್

ರೀಲ್​ನಲ್ಲಿ ಆಗದ್ದನ್ನ ರಿಯಲ್​ ಲೈಫ್​ನಲ್ಲಿ ಮಾಡಿದ ದುನಿಯಾ ವಿಜಯ್

ಸಿನಿಮಾ ಕಥೆಗೂ ಸಿನಿಮಾ ಮಂದಿ ಕಥೆಗೂ ಎಷ್ಟೋ ಬಾರಿ ಸಾಮ್ಯತೆಗಳು ಕಂಡು ಬರುತ್ತವೆ.. ‘ದುನಿಯಾ’ ಈ ಸಿನಿಮಾದ ಮೂಲಕ ವಿಜಯ್ ಕುಮಾರ್ ಅನ್ನೋ ಗಟ್ಟಿ ಪ್ರತಿಭೆ ಕನ್ನಡ ಸಿನಿ ಅಂಗಳದಲ್ಲಿ ದುನಿಯಾ ವಿಜಯ್ ಅನ್ನೋ ಹೆಸರಿನಿಂದ ಅರಳಿದ್ರು.. ರೀಲ್ ‘ದುನಿಯಾ’ದಲ್ಲಿ ಆಗದೇ ಇದ್ದಿದ್ದನ್ನ ರಿಯಲ್ ದುನಿಯಾದಲ್ಲಿ ಮಾಡುತ್ತಿದ್ದಾರೆ ವಿಜಯ್..

ಈ ಪಾಪಿ ದುನಿಯಾ ಪ್ರೀತಿ ಕಲಿಸಿ ಉಳಿಸೋದು ಕಲಿಸಿಲ್ಲ.. ಬೀದಿಲಿ ಬಡವ ಸಾಯುವಾಗ , ಕೇಳೋಕೆ ಯಾರಿಲ್ಲ , ಓ ಅವ್ವ ಕಣ್ಣೀರು ಒರೆಸೊಲ್ಲ.. ಈ ರೀತಿಯ ಮನಮುಟ್ಟುವ ಲೈನುಗಳು ಕಣ್ಣೀರು ತರಿಸೋ ದೃಶ್ಯಗಳು, ಮುಗ್ಧ ಮತ್ತು ಮುದ್ದಾದ ಪಾತ್ರಗಳಿಂದ ಕರುನಾಡ ಮನೆ ಮಾತಾಯ್ತು ದುನಿಯಾ ಸಿನಿಮಾ.. ವಿಜಯ್ ಕುಮಾರ್.. ದುನಿಯಾ ಸಿನಿಮಾದ ಮೂಲಕ ದುನಿಯಾ ವಿಜಯ್ ಆಗಿ ಕರುನಾಡ ಮನೆ ಮಗನಾದ್ರು.. ದುನಿಯಾ ಚಿತ್ರದಲ್ಲಿ ನಾಯಕ ಪಾತ್ರದಾರಿ ಶಿವು ತನ್ನ ತಾಯಿಯ ಗೋರಿ ಕಟ್ಟಲು ಪಡುವ ಕಷ್ಟವನ್ನು ಸೂರಿ ಮನ ಮುಟ್ಟುವ ಹಾಗೆ ಕಟ್ಟಿಕೊಟ್ಟಿದ್ರು.. ಇವತ್ತಿಗೂ ಈ ಸಿನಿಮಾ ಚಿತ್ರಪ್ರೇಮಿಗಳ ಕಂಗಳಲ್ಲಿ ಕಣ್ಣೀರು ತರಿಸುತ್ತೆ.. ಈ ಸಿನಿಮಾಕ್ಕೂ ವಿಜಯ್ ಲೈಫ್ ಸಿನಿಮಾಕ್ಕೂ ಒಂದಷ್ಟು ಸಾಮ್ಯತೆ ಕಾಣಿಸುತ್ತಿದೆ..

blank

ದುನಿಯಾದಲ್ಲಿ ಚಿತ್ರದಲ್ಲಿ ಶಿವು ಪಾತ್ರದಾರಿ ವಿಜಯ್​ಗೆ ತನ್ನ ತಾಯಿಯ ಗೋರಿಯನ್ನ ಕಟ್ಟಲು ಆಗೊಲ್ಲ. ಆದ್ರೆ ರಿಯಲ್ ಲೈಫ್​​ನಲ್ಲಿ ಹಾಗೆ ಆಗುತ್ತಿಲ್ಲ.. ದುನಿಯಾ ವಿಜಯ್ ತಮ್ಮ ತಾಯಿ ನಾಯರಾಯಣಮ್ಮ ಗೋರಿಯನ್ನ ಭಕ್ತಿಯಿಂದ ಕಟ್ಟುತ್ತಿದ್ದಾರೆ..ತಾವೇ ಮುಂದೆ ನಿಂತು ಗೋರಿ ಕಟ್ಟು ಕೆಲಸ ಕಾರ್ಯಗಳನ್ನ ಮಾಡ್ತಿದ್ದಾರೆ..

ಇದನ್ನೂ ಓದಿ: ಕೊನೆಗಾಲದಲ್ಲಿ ಮಗುವಿನಂತೆ ತಾಯಿ ಸೇವೆ ಮಾಡಿದ್ದರು ದುನಿಯಾ ವಿಜಯ್

ವಿಜಯ್ ಅವರ 15ವರ್ಷದ ​​ ಸಿನಿ ಲೈಫ್​​ನಲ್ಲಿ ಫಸ್ಟ್ ಟೈಮ್ ಡೈರೆಕ್ಷನ್ ಮಾಡಿ ಸಲಗ ಸಿನಿಮಾದಲ್ಲಿ ನಟಿಸಿದ್ರು.. ಮಗ ಹೀರೋ ಆಗಿದ್ದನ್ನ ನೋಡಿ ಸಂಭ್ರಮಿಸಿದ್ದ ನಾರಯಣಮ್ಮ ಅವರು ಮಗ ಡೈರೆಕ್ಷನ್ ಮಾಡಿರುವ ಸಿನಿಮಾವನ್ನ ನೋಡಲು ಆಗ್ಲೇ ಇಲ್ಲ.. ಕೋವಿಡ್ ಬಂದಾಗ ತಂದೆ ತಾಯಿಯ ಸೇವೆ ಮಾಡಿದ್ದ ದುನಿಯಾ ವಿಜಯ್ ಈಗ ತನ್ನ ತಾಯಿಯನ್ನ ಕಳೆದುಕೊಂಡು ದುಖಃ ಸಮುದ್ರದ ಮದ್ಯೆ ನಿಂತಿದ್ದಾರೆ..

ಆನೇಕಲ್ ತಾಲೂಕಿನ ಕುಂಬಾರನ ಹಳ್ಳಿಯ ತಮ್ಮ ಜಮೀನಿನಲ್ಲಿ ವಿಜಯ್ ತನ್ನ ತಾಯಿ ಗೋರಿಯನ್ನ ಭಕ್ತಿಯಿಂದ ಕಟ್ಟಿಸುತ್ತಿದ್ದಾರೆ.. ಅದ್ಯಾರೇ ಆಗಿರಲಿ ತಾಯಿ ಸ್ಥಾನವನ್ನ ತುಂಬಲು ಸಾಧ್ಯವೇ ಇಲ್ಲ.. ಅದಕ್ಕೆ ಹಂಸಲೇಖ ಬರೆದಿರೋದು ‘ತಾಯಿಗಿಂತ ಇಲ್ಲಿ ದೊಡ್ಡದಿಲ್ಲ ಸ್ಥಾಯಿ’

The post ರೀಲ್​ನಲ್ಲಿ ಆಗದ್ದನ್ನ ರಿಯಲ್​ ಲೈಫ್​ನಲ್ಲಿ ಮಾಡಿದ ದುನಿಯಾ ವಿಜಯ್ appeared first on News First Kannada.

Source: newsfirstlive.com

Source link