ಪೋಷಕರೇ ಹುಷಾರ್; ಕಾಫಿ ಕೊಡಿಸುತ್ತೇನೆಂದು ಕರೆದೊಯ್ದ ಮಗುವನ್ನ ಕಿಡ್ನ್ಯಾಪ್ ಮಾಡಿದ ಕಳ್ಳ

ಪೋಷಕರೇ ಹುಷಾರ್; ಕಾಫಿ ಕೊಡಿಸುತ್ತೇನೆಂದು ಕರೆದೊಯ್ದ ಮಗುವನ್ನ ಕಿಡ್ನ್ಯಾಪ್ ಮಾಡಿದ ಕಳ್ಳ

ಉಡುಪಿ: ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಾಗಲಕೋಟೆ ಮೂಲದ ದಂಪತಿಯ ಮಗುವನ್ನು ಅಪರಿಚಿತ ವ್ಯಕ್ತಿಯೋರ್ವ ಅಪಹರಿಸಿದ್ದಾನೆ. ಮಗುವನ್ನು ಕಿಡ್ನ್ಯಾಪ್​​ ಮಾಡಿ ಖತರ್ನಾಕ್​​ ಕಳ್ಳ ಖಾಸಗಿ ಬಸ್ ಹತ್ತುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇರೆಗೆ ಉಡುಪಿ ನಗರ ಪೊಲೀಸರು ಆರೋಪಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಭಾರತಿ ಮತ್ತು ಅರುಣ್ ದಂಪತಿಯ 2 ವರ್ಷದ ಮಗುವನ್ನು ಅಪಹರಿಸಲಾಗಿದೆ ಎನ್ನಲಾಗಿದೆ. ಈ ದಂಪತಿಗೆ ಇಬ್ಬರು ಮಕ್ಕಳು. ಎರಡು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆಂದು ಉಡುಪಿಗೆ ಬಂದಾಗ ಒಬ್ಬ ಮಗುವನ್ನು ಊರಲ್ಲೇ ಬಿಟ್ಟು ಮತ್ತೋರ್ವನನ್ನು ಕರೆದುಕೊಂಡು ಬಂದಿದ್ದಾರೆ.

ಕೊರೊನಾ ಲಾಕ್ಡೌನ್ ಸಂದರ್ಭದಿಂದಲೂ ಈ ದಂಪತಿ ಕರಾವಳಿ ಬೈಪಾಸ್ ಬಳಿ ಒಂದು ಶೆಡ್ ಹಾಕಿಕೊಂಡು ವಾಸವಾಗಿದ್ದರು. ಇಲ್ಲೇ ತಾನು ಬಾಗಲಕೋಟೆ ಮೂಲದವನೇ ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿ ಈ ದಂಪತಿಗೆ ಪರಿಚಯವಾಗಿದ್ದ. ಇಂದು ಬೆಳಿಗ್ಗೆ ಮಗುವಿಗೆ ಕಾಫಿ ಕೊಡಿಸುತ್ತೇನೆ ಎಂದು ಕರೆದುಕೊಂಡು ಹೋದ ಆಸಾಮಿ ಮತ್ತೆ ವಾಪಸ್ಸು ಬರಲೇ ಇಲ್ಲ ಎನ್ನಲಾಗಿದೆ.

ಸದ್ಯ ಈ ವ್ಯಕ್ತಿ ಮಗುವನ್ನು ಎತ್ತಿಕೊಂಡು ಖಾಸಗಿ ಬಸ್ನಲ್ಲಿ ಪರಾರಿಯಾದ ವಿಡಿಯೋ ಈಗ ಲಭ್ಯವಾಗಿದೆ. ಭಾರತಿ- ಅರುಣ್ ದಂಪತಿ ದೂರಿನ ಆಧಾರದ ಮೇರೆಗೆ ಉಡುಪಿ ನಗರ ಪೊಲೀಸರು ಖತರ್ನಾಕ್ ಮಗು ಕಳ್ಳನಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

The post ಪೋಷಕರೇ ಹುಷಾರ್; ಕಾಫಿ ಕೊಡಿಸುತ್ತೇನೆಂದು ಕರೆದೊಯ್ದ ಮಗುವನ್ನ ಕಿಡ್ನ್ಯಾಪ್ ಮಾಡಿದ ಕಳ್ಳ appeared first on News First Kannada.

Source: newsfirstlive.com

Source link