ನನ್ನ, ದರ್ಶನ್ ಹಾಗೂ ಹರ್ಷಾ ಸಹಿಗಳು ನಕಲಿಯಾಗಿವೆ ಎಂಬ ಮಾಹಿತಿ ಸಿಕ್ಕಿತ್ತು- ಉಮಾಪತಿ ಗೌಡ

ನನ್ನ, ದರ್ಶನ್ ಹಾಗೂ ಹರ್ಷಾ ಸಹಿಗಳು ನಕಲಿಯಾಗಿವೆ ಎಂಬ ಮಾಹಿತಿ ಸಿಕ್ಕಿತ್ತು- ಉಮಾಪತಿ ಗೌಡ

ಮೈಸೂರು: ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ಮಹಿಳೆಯೊಬ್ಬರು ನಟ ದರ್ಶನ್ ಹಾಗೂ ಸ್ನೇಹಿತರ ಮಾನ ಹರಾಜು ಹಾಕೋದಾಗಿ ಬೆದರಿಕೆಯೊಡ್ಡಿದ ಆರೋಪದ ವಿಚಾರವಾಗಿ ಮೈಸೂರಿನಲ್ಲಿ ನಿರ್ಮಾಪಕ ಉಮಾಪತಿ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಒಂದು ತಿಂಗಳ ಹಿಂದೆ ಬ್ಯಾಂಕ್ ಮ್ಯಾನೇಜರ್ ಎಂದು ಮಹಿಳೆ ಪರಿಚಯ ಮಾಡಿಕೊಂಡಿದ್ದಳು.. ಯಾವುದಾದರೂ ಲೋನ್ ಬೇಕಾದ್ರೆ ನಾನು ಬ್ಯಾಂಕ್ ಸಾಲ ಕೊಡಿಸುತ್ತೇನೆ ಎಂದು ಹೇಳಿದ್ದರು.. ಲೋನ್ ತೆಗೊತಿದ್ದೀರಾ, ಯಾರಿಗಾದ್ರೂ ಶ್ಯೂರಿಟಿ ಹಾಕಿದ್ದೀರಾ ಅಂತಾ ಕೇಳಿದ್ರು.. ನನಗೆ ಅನುಮಾನ ಬಂದು‌ ಕಳೆದ ತಿಂಗಳು ನನ್ನ ಕಚೇರಿ ವ್ಯಾಪ್ತಿಯಲ್ಲಿರೋ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿ ಎನ್.ಸಿ.ಆರ್ ಪಡೆದಿದ್ದೇನೆ.

ಆನಂತರ ನನ್ನ, ದರ್ಶನ್ ಹಾಗೂ ಹರ್ಷಾ ಸಹಿಗಳು ನಕಲಿಯಾಗಿವೆ. ಆಸ್ತಿ ಪತ್ರಗಳು ನಕಲಿಯಾಗಿವೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಮೈಸೂರಿನಲ್ಲಿ ದೂರು ಕೊಟ್ಟಿದ್ದೇನೆ. ಈ ವಿಚಾರವನ್ನು ಆರಂಭದಲ್ಲೇ ದರ್ಶನ್ ಅವರ ಗಮನಕ್ಕೂ ತಂದಿದ್ದೆ. ಮೈಸೂರು ಅಸ್ತಿ‌ ಪತ್ರಗಳು ನಕಲಿ ಆಗಿದ್ದರಿಂದ ಇಲ್ಲಿ‌ ದೂರು ಕೊಟ್ರೆ ಒಳ್ಳೆಯದು ಅಂತಾ ದರ್ಶನ್ ಅವರೇ ಹೇಳಿದ್ರು. ಅದರಂತೆ ಪೊಲೀಸರು ಈವತ್ತು ವಿಚಾರಣೆಗೆ ಕರೆದಿದ್ರು ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ.

ಅರುಣಾಕುಮಾರಿ ಎಂಬ ಮಹಿಳೆ ನನಗೆ ಮುಂಚೆಯಿಂದ ಪರಿಚಯ ಇರಲಿಲ್ಲ.. ಆಕೆ ಬಗ್ಗೆ ನನಗೆ ಅನುಮಾನ ಬಂದಿದ್ದರಿಂದಲೇ ತಕ್ಷಣ ಪೊಲೀಸರಿಗೆ ದೂರು ನೀಡಿದ್ದೇನೆ. ಹೀಗಿರುವಾಗ ಆಕೆಯನ್ನು ದರ್ಶನ್ ಅವರಿಗೆ ಪರಿಚಯ ಮಾಡಿಸಲು ಸಾಧ್ಯವೇ..? ಈ ಬಗ್ಗೆ ಪೊಲೀಸರು ತನಿಖೆ ಮಾಡ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಅನ್ನೋದನ್ನ ಪೊಲೀಸರೇ ಪತ್ತೆ ಹಚ್ಚಬೇಕು ಎಂದಿದ್ದಾರೆ.

The post ನನ್ನ, ದರ್ಶನ್ ಹಾಗೂ ಹರ್ಷಾ ಸಹಿಗಳು ನಕಲಿಯಾಗಿವೆ ಎಂಬ ಮಾಹಿತಿ ಸಿಕ್ಕಿತ್ತು- ಉಮಾಪತಿ ಗೌಡ appeared first on News First Kannada.

Source: newsfirstlive.com

Source link