ಪುದುಚೆರಿ ಸಿಎಂಗೆ ಬರೋಬ್ಬರಿ 13 ಖಾತೆ.. ಪ್ರತಿ ಸಚಿವರಿಗೂ ತಲಾ 6 ಇಲಾಖೆ ಹಂಚಿಕೆ

ಪುದುಚೆರಿ ಸಿಎಂಗೆ ಬರೋಬ್ಬರಿ 13 ಖಾತೆ.. ಪ್ರತಿ ಸಚಿವರಿಗೂ ತಲಾ 6 ಇಲಾಖೆ ಹಂಚಿಕೆ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗ ಸುಧಾರಿಸಿದ ಬೆನ್ನಲ್ಲೇ ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಸಿಎಂ ಮುಖ್ಯಮಂತ್ರಿ ಎನ್. ರಂಗಸ್ವಾಮಿ ನೇತೃತ್ವದ ಸಂಪುಟ ರಚನೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಡಾ. ತಮಿಳುಸಾಯಿ ಸುಂದರರಾಜನ್ ಅನುಮೋದನೆ ಬಳಿಕ ಈಗ ಕೇಂದ್ರಾಡಳಿತ ಪ್ರದೇಶ ಪುದುಚೆರಿ ಸರ್ಕಾರದ ಸಂಪುಟ ರಚನೆಯಾಗಿದೆ.

ಇನ್ನು, ಆರೋಗ್ಯ ಇಲಾಖೆ ಸೇರಿದಂತೆ ಸುಮಾರು 13 ಖಾತೆಗಳು ಸಿಎಂ ಎನ್. ರಂಗಸ್ವಾಮಿ ತನ್ನ ಬಳಿಯೇ ಇಟ್ಟುಕೊಂಡಿದ್ದಾರೆ. ಉಳಿದ ಎಲ್ಲಾ ಸಚಿವರಿಗೆ ತಲಾ ಆರು ಖಾತೆ ನೀಡಲಾಗಿದೆ. ಇಂಧನ, ಶಿಕ್ಷಣ, ಯುವಜನ ಮತ್ತು ಕ್ರೀಡೆ ಇಲಾಖೆ ಇತ್ಯಾದಿ ಹೊರತುಪಡಿಸಿ ಕಂದಾಯ ಇಲಾಖೆ ಸೇರಿದಂತೆ 13 ಪ್ರಮುಖ ಖಾತೆಗಳನ್ನು ಪುದುಚೆರಿ ಸಿಎಂ ಯಾರಿಗೂ ಬಿಟ್ಟುಕೊಟ್ಟಿಲ್ಲ ಎಂಬುದು ಗಮನಾರ್ಹ.

ಕಳೆದ ಐದು ತಿಂಗಳ ಹಿಂದೆ ಫೆಬ್ರವರಿಯಲ್ಲಿ ವಿ. ನಾರಾಯಣಸಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಕಳೆದುಕೊಂಡ ಕಾರಣ ಪುದುಚೆರಿಯಲ್ಲಿ ಅಧಿಕೃತವಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿತ್ತು. ಅಂದು ಕಾಂಗ್ರೆಸ್​ ಸರ್ಕಾರದ ಪತನಕ್ಕೆ ಎನ್. ರಂಗಸ್ವಾಮಿ ಮತ್ತವರ ಆಪ್ತ ಶಾಸಕರ ರಾಜೀನಾಮೆಯೇ ಕಾರಣವಾಗಿತ್ತು ಎನ್ನಲಾಗಿದೆ. ಕಾಂಗ್ರೆಸ್​ನಿಂದ ಹೊರಬಂದ ಎನ್. ರಂಗಸ್ವಾಮಿ ಬಣ ಬಿಜೆಪಿಯೊಂದಿಗೆ ಸೇರಿ ಸರ್ಕಾರ ಮಾಡಿದೆ.

26 ಸದಸ್ಯರ ಸಂಖ್ಯೆಯಿರುವ ಪುದುಚೆರಿ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ ಬೇಕಾದ ಬಹುಮತದ ಸಂಖ್ಯೆ 14. ಅಂದು ಸಾಲು ಸಾಲು ಶಾಸಕರ ರಾಜೀನಾಮೆಯಿಂದ ಮಾಜಿ ಸಿಎಂ ವಿ. ನಾರಾಯಣಸಾಮಿ ನೇತೃತ್ವದ ಕಾಂಗ್ರೆಸ್​ ಅಧಿಕಾರ ಕಳೆದುಕೊಂಡಿತ್ತು.

The post ಪುದುಚೆರಿ ಸಿಎಂಗೆ ಬರೋಬ್ಬರಿ 13 ಖಾತೆ.. ಪ್ರತಿ ಸಚಿವರಿಗೂ ತಲಾ 6 ಇಲಾಖೆ ಹಂಚಿಕೆ appeared first on News First Kannada.

Source: newsfirstlive.com

Source link