ಇಷ್ಟು ದಿನ ಉಪ್ಪಿ ಕಾಯ್ತಿದ್ದ ಕಥೆ ಸಿಕ್ತಂತೆ.. ಸದ್ಯದಲ್ಲೇ ಡೈರೆಕ್ಟರ್ ಕ್ಯಾಪ್ ಧರಿಸ್ತಾರಾ ಟೋಪಿವಾಲ?

ಇಷ್ಟು ದಿನ ಉಪ್ಪಿ ಕಾಯ್ತಿದ್ದ ಕಥೆ ಸಿಕ್ತಂತೆ.. ಸದ್ಯದಲ್ಲೇ ಡೈರೆಕ್ಟರ್ ಕ್ಯಾಪ್ ಧರಿಸ್ತಾರಾ ಟೋಪಿವಾಲ?

ಪ್ರಜಾಕೀಯ, ಮತ್ತು ಸಿನಿಮಾ ಈ ಎರಡು ದೋಣಿಗಳ ಮೇಲೆ ಒಟ್ಟೊಟ್ಟಿಗೇ ಪಯಣಿಸುತ್ತಿರೋರು ರಿಯಲ್ ಸ್ಟಾರ್ ಉಪೇಂದ್ರ.. ಉಪ್ಪಿ ನಟನೆಯ ಸಿನಿಮಾ, ಉಪ್ಪಿ ಕಟ್ಟುತ್ತಿರೋ ಪ್ರಜಾಕೀಯ ಪಕ್ಷ. ಈ ಎರಡಕ್ಕಿಂತ ಒಂದು ಕೈ ಜಾಸ್ತಿ ಡಿಮ್ಯಾಂಡ್ ಇರೋದು ಉಪೇಂದ್ರ ಡೈರೆಕ್ಷನ್​​​ ಸಿನಿಮಾಕ್ಕೆ.. ಹಾಗಾಗ್ರೆ ಉಪ್ಪಿ ಡೈರೆಕ್ಷನ್ ಯಾವಾಗ..? ಅನ್ನೋ ಪ್ರಶ್ನೆಗೆ ಸ್ವತಃ ಉಪೇಂದ್ರ ಅವರೇ ಉತ್ತರ ಕೊಟ್ಟಿದ್ದಾರೆ.

ಇಂಡಿಯನ್ ಸಿನಿಮಾ ರಂಗದ ಟಾಪ್ 20 ಡೈರೆಕ್ಟರ್ಸ್​​ಗಳಲ್ಲೊಬ್ಬರು ರಿಯಲ್ ಸ್ಟಾರ್ ಉಪೇಂದ್ರ.. ‘ತರ್ಲೆ ನನ್ ಮಗ’, ‘ಶ್’ , ‘ಓಂ’, ‘ಎ’ , ‘ಉಪೇಂದ್ರ’, ‘ಸೂಪರ್’​​​ ಹೀಗೆ ಹೇಳ್ತಾ ಹೋದ್ರೆ ದೊಡ್ಡ ಫೇಮಸ್ ಪಟ್ಟಿನೇ ಎದುರು ಬರುತ್ತೆ.. ಬಹುಮುಖ ಪ್ರತಿಭೆ ಉಪೇಂದ್ರ ನಟನೆಯಲ್ಲಿ ನೂರಕ್ಕೆ ನೈಂಟಿ ಮಾರ್ಕ್ಸ್ ಪಡೆದುಕೊಂಡ್ರೆ, ಡೈರೆಕ್ಷನ್​​​ನಲ್ಲಿ ಹಂಡ್ರೆಡ್​​​ಗೆ ಹಂಡ್ರೆಡ್ ಪರ್ಸೆಂಟ್​ ಮಾರ್ಕ್ಸ್ ಗಿಟ್ಟಿಸಿಕೊಳ್ತಾರೆ.

blank

ಹೌದು ಉಪ್ಪಿ ಡೈರೆಕ್ಷನ್​ಗೆ ಭಾಷೆ-ಗಿಷೆ ಅನ್ನದೇ ಯೂನಿವರ್ಸಲ್​ ಸಿನಿ ಪ್ರೇಕ್ಷಕ ಎದ್ದು ಬಿದ್ದು ಸಿನಿಮಾ ಥಿಯೇಟರ್​​ಗೆ ನುಗ್ಗುತ್ತಾರೆ.. ಆದ್ರೆ ಉಪ್ಪಿ ಮಾತ್ರ ಡೈರೆಕ್ಟರ್ ಕ್ಯಾಪ್​ನ್ನ ತೊಡಲು ಮನಸು ಮಾಡ್ತಾನೆ ಇಲ್ಲ..

ಹೌದು ಉಪ್ಪಿ ನಟನೆಯ ಸಿನಿಮಾ, ಉಪ್ಪಿ ಕಟ್ಟುತ್ತಿರೋ ಪ್ರಜಾಕೀಯ ಪಕ್ಷ ಈ ಎರಡಕ್ಕಿಂತ ಒಂದು ಕೈ ಜಾಸ್ತಿ ಡಿಮ್ಯಾಂಡ್ ಇದೆ ಉಪೇಂದ್ರ ಡೈರೆಕ್ಷನ್​​​ ಸಿನಿಮಾಕ್ಕೆ.. ಹಾಗಾಗ್ರೆ ಉಪ್ಪಿ ಡೈರೆಕ್ಷನ್ ಯಾವಾಗ..? ಅನ್ನೋ ಪ್ರಶ್ನೆಗೆ ಸ್ವತಃ ಉಪೇಂದ್ರ ಅವರೇ ಉತ್ತರ ಕೊಟ್ಟಿದ್ದಾರೆ.. ಉಪ್ಪಿಗೆ ಥ್ರಿಲ್ ಅನ್ನಿಸೋ ಸಬ್ಜೆಕ್ಟ್ ಒಂದು ಸಿಕ್ಕಿದೆಯಂತೆ.. ಈಗಾಗಲೇ ಎರಡ್ಮೂರು ವರ್ಷಗಳಿಂದ ಆ ಥ್ರಿಲ್ಲಿಂಗ್ ಸಬ್ಜೆಕ್ಟ್ ಮೇಲೆ ಕೆಲಸ ಮಾಡ್ತಿದ್ದಾರಂತೆ ಬುದ್ಧಿವಂತ..

blank

ಆದರೆ ಕಬ್ಜ, ಲಗಾಮ್, ತ್ರಿಶೂಲಂ ಸೇರಿದಂತೆ ಮೂರ್ನಾಲ್ಕು ಸಿನಿಮಾಗಳಲ್ಲಿ ರಿಯಲ್ ಸ್ಟಾರ್ ಬ್ಯುಸಿ ಇದ್ದಾರೆ. ಇದ್ರ ಜೊತೆಗೆ ಪ್ರಜಾಕೀಯ ಪಕ್ಷ , ಸಮಾಜ ಸೇವೆ ಅಂತೆಲ್ಲ ಓಡಾಡುತ್ತಿದ್ದಾರೆ.. ಉಪ್ಪಿಗೆ ಸದ್ಯಕ್ಕಂತೂ ಸಮಯ ಸಾಲುತ್ತಿಲ್ಲ.. ಆದ್ರೂ ಬಿಡುವು ಮಾಡ್ಕೊಂಡು ಸ್ಕ್ರಿಪ್ಟ್ ಕಾರ್ಯದಲ್ಲಿ ಮಗ್ನರಾಗಿದ್ದಾರಂತೆ. ಮುಂದಿನ ದಿನಗಳಲ್ಲಿ ಉಪ್ಪಿ ಡೈರೆಕ್ಷನಲ್ಲಿ ಸಿನಿಮಾ ಬರೋ ಸಾಧ್ಯತೆ ಇದೆ.

The post ಇಷ್ಟು ದಿನ ಉಪ್ಪಿ ಕಾಯ್ತಿದ್ದ ಕಥೆ ಸಿಕ್ತಂತೆ.. ಸದ್ಯದಲ್ಲೇ ಡೈರೆಕ್ಟರ್ ಕ್ಯಾಪ್ ಧರಿಸ್ತಾರಾ ಟೋಪಿವಾಲ? appeared first on News First Kannada.

Source: newsfirstlive.com

Source link