ಪುದುಚೇರಿ ಸಿಎಂ ಸಂಪುಟ ರಚನೆ- 13 ಖಾತೆಗಳನ್ನು ಇಟ್ಟುಕೊಂಡ ಎನ್.ರಂಗಸ್ವಾಮಿ

ಪುದುಚೆರಿ: ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮುಖ್ಯಮಂತ್ರಿ ಎನ್.ರಂಗಸ್ವಾಮಿ ನೇತೃತ್ವದ ಸಂಪುಟ ರಚನೆಯಾಗಿದೆ. ರಂಗಸ್ವಾಮಿ ಆರೋಗ್ಯ, ಕಂದಾಯ ಇಲಾಖೆ ಸೇರಿದಂತೆ ಪ್ರಮುಖ 13 ಖಾತೆಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಾರೆ.

ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ಲೆಫ್ಟಿನೆಂಟ್ ಗವರ್ನರ್ ಡಾ.ತಮಿಳುಸಾಯಿ ಸುಂದರರಾಜನ್ ಅವರ ಅನುಮೋದನೆ ಬಳಿಕ ಸರ್ಕಾರದ ಸಂಪುಟ ರಚನೆಯಾಗಿದೆ. ಸಿಎಂ 13 ಖಾತೆಗಳನ್ನು ತನ್ನ ಬಳಿ ಇಟ್ಟುಕೊಂಡರೆ ಉಳಿದ ಎಲ್ಲಾ ಸಚಿವರಿಗೆ ತಲಾ ಆರು ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಇದನ್ನೂ ಓದಿ: ಪುದುಚೇರಿಯಲ್ಲಿ ಕಮಲ ಅರಳಿದ್ದು ಹೇಗೆ? ಕಾಂಗ್ರೆಸ್ ಎಡವಿದ್ದೆಲ್ಲಿ?

ಎನ್. ರಂಗಸ್ವಾಮಿ ಅವರು ಆರೋಗ್ಯ, ಕಂದಾಯ, ಸ್ಥಳೀಯ ಆಡಳಿತ, ಬಂದರು, ವಿಜ್ಞಾನ ತಂತ್ರಜ್ಞಾನ ಮತ್ತು ಪರಿಸರ, ಮಾಹಿತಿ ಮತ್ತು ಪ್ರಚಾರ ಸೇರಿದಂತೆ ಪ್ರಮುಖ 13 ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡು ಉಳಿದ ಸಚಿವರಿಗೆ ತಲಾ 6 ಖಾತೆಯಂತೆ ಹಂಚಿಕೆ ಮಾಡಿದ್ದಾರೆ.

ಫೆಬ್ರವರಿಯಲ್ಲಿ ವಿ. ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಕ್ಕೆ ಪ್ರಮುಖ ಕಾರಣರಾಗಿದ್ದ ಎನ್. ರಂಗಸ್ವಾಮಿ ಇದೀಗ ಕಾಂಗ್ರೆಸ್ ತೊರೆದು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿದ್ದಾರೆ.

The post ಪುದುಚೇರಿ ಸಿಎಂ ಸಂಪುಟ ರಚನೆ- 13 ಖಾತೆಗಳನ್ನು ಇಟ್ಟುಕೊಂಡ ಎನ್.ರಂಗಸ್ವಾಮಿ appeared first on Public TV.

Source: publictv.in

Source link