ಕೊರೊನಾ ನಿರ್ವಹಣೆ; ‘ಯೋಗಿಯವರನ್ನ ನಮಗೆ ಸಾಲ ಕೊಡಿ’ ಎಂದ ಆಸ್ಟ್ರೇಲಿಯಾ ಸಂಸದ

ಕೊರೊನಾ ನಿರ್ವಹಣೆ; ‘ಯೋಗಿಯವರನ್ನ ನಮಗೆ ಸಾಲ ಕೊಡಿ’ ಎಂದ ಆಸ್ಟ್ರೇಲಿಯಾ ಸಂಸದ

ನವದೆಹಲಿ: ಕಳೆದೊಂದು ತಿಂಗಳಿಂದ ಇಡೀ ದೇಶಾದ್ಯಂತ ತೀವ್ರಗೊಂಡಿರುವ ಕೊರೊನಾ ಎರಡನೇ ಅಲೆಯೂ ಉತ್ತರ ಪ್ರದೇಶದಲ್ಲಿ ಮಾತ್ರ ನಿಯಂತ್ರಣಕ್ಕೆ ಬಂದಿದೆ. ಭಾರತದಲ್ಲೇ ಅತೀ ಹೆಚ್ಚು ಅಂದರೆ ಶೇ. 2.5% ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲೀಗ ಕೊರೋನಾ ಪಾಸಿಟಿವಿಟಿ ದರ ಶೇ.1 ರಷ್ಟಿದೆ. ಹೀಗೆ ಕೊರೊನಾ ನಿಯಂತ್ರಿಸಲು ಹಗಲು ರಾತ್ರಿಯೆನ್ನದೇ ದುಡಿದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬಂದಿವೆ.

ಹೌದು, ಆಸ್ಟ್ರೇಲಿಯಾದ ಸಂಸದ ಕ್ರೇಗ್ ಕೆಲ್ಲೀ ಎಂಬುವರು ತನ್ನ ಟ್ವಿಟರ್ ಖಾತೆಯಿಂದ ಉತ್ತರ ಪ್ರದೇಶದಲ್ಲಿ ಕಡಿಮೆಯಾಗಿರುವ ಕೊರೊನಾ ಪಾಸಿಟಿವಿಟಿ ದರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕೋವಿಡ್-19 ಎರಡನೇ ಅಲೆ ವಿರುದ್ಧದ ಹೋರಾಟದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಮರ್ಥ ಹೋರಾಟ ನಡೆಸಿದ್ದಾರೆ. ಯೋಗಿ ಅವರನ್ನ ನಾವು ಸಾಲವಾಗಿ ಪಡೆಯಬಹುದೇ..? ಅಂಥ ಸಾಧ್ಯತೆ ಇದೆಯಾ ಎಂದು ಕೇಳಿದ್ದಾರೆ.

 

The post ಕೊರೊನಾ ನಿರ್ವಹಣೆ; ‘ಯೋಗಿಯವರನ್ನ ನಮಗೆ ಸಾಲ ಕೊಡಿ’ ಎಂದ ಆಸ್ಟ್ರೇಲಿಯಾ ಸಂಸದ appeared first on News First Kannada.

Source: newsfirstlive.com

Source link