ಬಾಂಗ್ಲಾಕೇಸ್ ಬೆನ್ನು ಹತ್ತಿದ ಪೊಲೀಸರಿಗೆ ಶಾಕ್; ಆರೋಪಿಗಳು ಬಾಯ್ಬಿಟ್ಟ ಸತ್ಯವೇನು..?

ಬಾಂಗ್ಲಾಕೇಸ್ ಬೆನ್ನು ಹತ್ತಿದ ಪೊಲೀಸರಿಗೆ ಶಾಕ್; ಆರೋಪಿಗಳು ಬಾಯ್ಬಿಟ್ಟ ಸತ್ಯವೇನು..?

ರಾಷ್ಟಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಾಂಗ್ಲಾ ಯುವತಿಯ ಅತ್ಯಾಚಾರ ಕೇಸ್ ಮತ್ತೆ ಸದ್ದು ಮಾಡ್ತಿದೆ. ಕೆಲ ಆರೋಪಿಗಳ ಹೆಡೆಮುರಿ ಕಟ್ಟಿ ತನಿಖೆ ನಡೆಸ್ತಿರೋ ಪೊಲೀಸರಿಗೆ, ಕೆಲ ಶಾಕಿಂಗ್ ಮಾಹಿತಿಗಳು ಲಭ್ಯವಾಗಿವೆ. ತನಿಖೆ ವೇಳೆ ಆರೋಪಿಗಳು ಬಾಯ್ಬಿಟ್ಟ ಕೆಲ ವಿಚಾರಗಳು ಪೊಲೀಸ್ರನ್ನೇ ಬೆಚ್ಚಿ ಬೀಳಿಸಿದೆ. ಅಷ್ಟಕ್ಕೂ ಆರೋಪಿಗಳು ಅಂತದ್ದೇನು ಬಾಯ್ಬಿಟ್ರು?

ಬಾಂಗ್ಲಾ ಯುವತಿ ಮೇಲೆ ಅತ್ಯಾಚಾರ ಪ್ರಕರಣ. ಯುವತಿ ಗುಪ್ತಾಂಗಕ್ಕೆ ಕಾಲಿನಿಂದ ಒದ್ದು ವಿಕೃತಿ ಮೆರೆದಿದ್ದ ಆರೋಪಿಗಳ ಕಾಲನ್ನ ಪೊಲೀಸರ ಗುಂಡು ಸೀಳಿದೆ. ಈ ಪ್ರಕರಣದ ತನಿಖೆ ಚುರುಕುಗೊಳಿಸಿರೋ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ಅತ್ಯಾಚಾರ ಆರೋಪಿಗಳು, ಅಮಾಯಕ ಯುವತಿಯ ಕಳ್ಳಸಾಗಣೆ ಮಾಡಿದ್ದನ್ನ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಬಾಂಗ್ಲಾ ಗ್ಯಾಂಗ್​ನಿಂದ ಕೇರಳದಲ್ಲೂ ಸ್ಪಾ ಕೇಂದ್ರ.. ಗ್ಯಾಂಗ್ ರೇಪ್​​ & ಟಾರ್ಚರ್​​ಗೆ ಕಾರಣ ಇದೇ

ಬೆಂಗಳೂರಿಗೆ 15,000ಕ್ಕೂ ಹೆಚ್ಚು ಅಮಾಯಕ ಯುವತಿಯರ ಎಂಟ್ರಿಯಾಗಿರೋ ಶಂಕೆ ವ್ಯಕ್ತವಾಗಿದೆ. ಬಾಂಗ್ಲಾದ ಬಡತನವನ್ನೇ ದುರ್ಬಳಕೆ ಮಾಡಿಕೊಂಡು ಕೃತ್ಯವೆಸಗಿದ್ದು, ಯುವತಿಯರಿಗೆ ಕೆಲಸದ ಆಮಿಷವೊಡ್ಡಿ ಕರೆ ತಂದು ಸಾಗಾಟ ಮಾಡ್ತಿದ್ರಂತೆ. ಮಾನವ ಕಳ್ಳಸಾಗಣೆ ದಂಧೆ ಹಿಂದೆ 4 ಪ್ರಮುಖ ಕಿಂಗ್​ಪಿನ್​ಗಳು ಇದ್ದು, ಅವ್ರು ಬಾಂಗ್ಲಾದೇಶದಲ್ಲೇ ಇದ್ದು ಆ ದೇಶದಿಂದ ಯುವತಿಯರ ರವಾನಿಸ್ತಿದ್ರು ಎನ್ನಲಾಗಿದೆ.

ಇದನ್ನೂ ಓದಿ: ಬಾಂಗ್ಲಾ ಯುವತಿ ರೇಪ್‌ ಕೇಸ್‌; ಆರೋಪಿಗಳ ಮೊಬೈಲ್​​ನಲ್ಲಿ 1,200ಕ್ಕೂ ಹೆಚ್ಚು ಅರೆನಗ್ನ ಪಾರ್ಟಿ ವಿಡಿಯೋ

ಬಾಂಗ್ಲಾದಿಂದ ನುಸುಳಿ ಪಶ್ಚಿಮ ಬಂಗಾಳದ ಪಟ್ಲಾ ಗ್ರಾಮಕ್ಕೆ ರವಾನಿಸಿ, ಅಲ್ಲಿ ಯುವತಿಯರಿಗೆ ಭಾರತದ ಗುರುತಿನ ಪತ್ರ ನೀಡಲಾಗುತ್ತೆ. ಆನಂತರ 100 ಯುವತಿಯರ ಬ್ಯಾಚ್ ಮಾಡಿ ದೆಹಲಿ, ಮುಂಬೈ ಮತ್ತು ಬೆಂಗಳೂರಿಗೆ ರವಾನಿಸುತ್ತಿದ್ದರು. ಬೆಂಗಳೂರಲ್ಲಿ 3 ಟೀಂ ವಿಂಗಡಣೆ ಮಾಡಿ, 15 ದಿನ ಏರಿಯಾದಲ್ಲಿ ಕೆಲಸ ಮಾಡಿಸುತ್ತಿದ್ದರು. 3 ಏರಿಯಾ ಕವರ್ ಬಳಿಕ ಚೆನ್ನೈಗೆ, ಅಲ್ಲಿಂದ ಕೇರಳಕ್ಕೆ ರವಾನಿಸ್ತಿದ್ರು. ಒಂದು ವರ್ಷದ ನಂತರ ಯುವತಿಯರು ಬಾಂಗ್ಲಾಕ್ಕೆ ವಾಪಸ್ ಆಗ್ತಿದ್ರು. ಅಗತ್ಯ ಹಣದ ಸಮೇತ ದಂಧೆಕೋರರು ಬಾಂಗ್ಲಾದೇಶಕ್ಕೆ ಯುವತಿಯರನ್ನ ಕಳಿಸ್ತಿದ್ರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಬಾಂಗ್ಲಾ ರಾಕ್ಷಸರಿಂದ ಗ್ಯಾಂಗ್​ ರೇಪ್​: 12 ಆರೋಪಿಗಳ ವಿರುದ್ಧ ಚಾರ್ಜ್​​ಶೀಟ್ ಸಲ್ಲಿಕೆ

ಬಾಂಗ್ಲಾ ದೇಶದ ಕಿಂಗ್​ಪಿನ್ ರಫಿಯನ್ನ ಬಾಂಗ್ಲಾ ಪೊಲೀಸರು ಬಂಧಿಸಿ​​, ಬೆಂಗಳೂರಿನಲ್ಲಿರೋ ಕಿಂಗ್​ಪಿನ್​ಗಳಿಗಾಗಿ ತಲಾಶ್ ನಡೆಸ್ತಿದ್ದಾರೆ. ಬೆಂಗಳೂರು ಪೊಲೀಸರ ಮಾಹಿತಿ ಮೇರೆಗೆ ಬಾಂಗ್ಲಾದಲ್ಲಿ ಬಂಧಿಸಲಾಗಿದೆ. ಆರೋಪಿಗಳಾದ ಅಶ್ರಫ್ ಉಲ್ಲಾ, ಇಸ್ಲಾಂ @ ಬಾಸ್ ರಫಿ, ರೆಹಮಾನ್ ಶೇಖ್, ಶಹೀದಾ ಬೇಗಮ್ @ ಮೇಡಮ್ ಶಹೀದಾ ಇಸ್ಮಾಯಿಲ್ ಎಂಬುವವರನ್ನ ಅರೆಸ್ಟ್ ಮಾಡಿದ್ದಾರೆ. 10 ಯುವತಿಯರನ್ನು ಸಾಗಾಟ ಮಾಡಿದ್ದ ಕಿಂಗ್​ಪಿನ್ ರಫಿ ಕೊನೆಗೂ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ.

ಒಟ್ಟಾರೆ, ಬಾಂಗ್ಲಾ ಯುವತಿಯ ಅತ್ಯಾಚಾರ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ತಿದ್ದು, ಬೆಂಗಳೂರಿನಲ್ಲಿರೋ ಕಿಂಗ್​ಪಿನ್​​ಗಳಿಗಾಗಿ ತೀವ್ರ ಶೋಧ ನಡೆಯುತ್ತಿದೆ. ಆ ಕಿಂಗ್​​ಪಿನ್​​ಗಳೇನಾದ್ರೂ ಪೊಲೀಸರ ಬಲೆಗೆ ಬಿದ್ರೆ, ಮತ್ತಷ್ಟು ಮಾಹಿತಿ ಹೊರ ಬರೋ ಸಾಧ್ಯತೆ ಇದೆ.

The post ಬಾಂಗ್ಲಾಕೇಸ್ ಬೆನ್ನು ಹತ್ತಿದ ಪೊಲೀಸರಿಗೆ ಶಾಕ್; ಆರೋಪಿಗಳು ಬಾಯ್ಬಿಟ್ಟ ಸತ್ಯವೇನು..? appeared first on News First Kannada.

Source: newsfirstlive.com

Source link