ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ವಾಟ್ಸ್​ ಆ್ಯಪ್​ ನಂಬರ್​ಗೇ ಬರಲಿದೆ ನೋಟಿಸ್

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ವಾಟ್ಸ್​ ಆ್ಯಪ್​ ನಂಬರ್​ಗೇ ಬರಲಿದೆ ನೋಟಿಸ್

ಈಗೆಲ್ಲವೂ ಅಡ್ವಾನ್ಸ್ಡ್​ ಟೆಕ್ನಾಲಜಿ.. ಕೂತಲ್ಲೇ ಏನ್ ಬೇಕಾದ್ರೂ ಮಾಡುವಂಥ ಕಾಲ. ಎಲ್ಲರಂತೆ ಪೊಲೀಸ್ರೂ ಟೆಕ್ನಾಲಜಿ ಮೊರೆ ಹೋಗಿದ್ದಾರೆ. ಸಾಮಾನ್ಯವಾಗಿ ಯಾರೇ ಟ್ರಾಫಿಕ್ ರೂಲ್ಸ್ ವಯೋಲೇಟ್ ಮಾಡಿದ್ರೂ, ಅಲ್ಲೇ ಡ್ರಾ ಅಲ್ಲೇ ಬಹುಮಾನ ಅನ್ನೋ ಹಾಗೆ ಫೈನ್ ಹಾಕಿ ಹಣ ಕಲೆಕ್ಟ್ ಮಾಡಿ ಕಳಿಸ್ತಿದ್ರು. ಇನ್ಮೇಲೆ ಹಂಗೆಲ್ಲ ಇಲ್ಲ. ನೀವು ರೂಲ್ಸ್ ಬ್ರೇಕ್ ಮಾಡಿ, ಪೊಲೀಸ್ರು ಹಿಡಿಲಿಲ್ಲ ಅನ್ನೋ ಖುಷಿಯಿಂದ ಹೋಗ್ತಿದ್ದಂಗೆ ನಿಮ್ಮ ವಾಟ್ಸ್ಯಾಪ್ ಮೊಬೈಲ್‌ಗೆ ಮೆಸೇಜ್ ರವಾನೆ ಆಗಿರುತ್ತೆ.

ಹೌದು, ಬೆಂಗಳೂರು ನಗರದಲ್ಲಿ ಟ್ರಾಫಿಕ್ ಪೊಲೀಸರ ಸಂಖ್ಯೆ ಕಡಿಮೆ ಇದೆ. ಅಲ್ದೆ ಕೊರೋನಾದಿಂದ ಇನ್ನೂ ಚೇತರಿಸಿಕೊಳ್ತಿದ್ದವರ ಸಂಖ್ಯೆ ಜಾಸ್ತಿನೇ ಇದೆ ಹೀಗಾಗಿ ನಿಂತು ಕಾದು ಫೈನ್ ಹಾಕೋ ಸಿಸ್ಟಮ್ ನ ಹೋಗಲಾಡಿಸಿ ಫೋನ್ ಮೂಲಕ ಫೋಟೋ ಕ್ಲಿಕ್ಕಿಸಿ‌ ಮೊಬೈಲ್ ಗೆ ನೋಟಿಸ್ ಕೊಟ್ಟು ಇಂತಿಷ್ಟು ದಿನದಲ್ಲಿ ಫೈನ್ ಕಟ್ಟೋ ಗಡುವು ನೀಡುವ ಹೊಸ ಪ್ಲ್ಯಾನಿಂಗ್ ಗೆ ಈಗ ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.

ಈಗಾಗಲೇ 400 ಕೋಟಿ ದಂಡ ಬಾಕಿ ವಸೂಲಾತಿಗಾಗಿ ಸಂಚಾರಿ ಪೊಲೀಸರು ನಯಾ ಪ್ಲ್ಯಾನ್​ ಮಾಡಿಕೊಂಡಿದ್ದಾರೆ. ಹೀಗಾಗಿ ವಾಹನ ಸವಾರರಿಗೆ ವಾಟ್ಸ್ಯಾಪ್​ ಮೆಸೇಜ್​ ಕಳಿಸಲಿದ್ದಾರೆ. ವಾಹನ ಸವಾರರು ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದ್ರೆ ಮನೆ ಸೇರೋ ಮೊದಲೇ ಸವಾರರಿಗೆ ವಾಟ್ಸ್ಯಾಪ್​ ಮೆಸೆಜ್​ ತಲುಪಿರುತ್ತದೆ. ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡ ಸಂಚಾರಿ ಪೊಲೀಸರು ಆ ವಾಹನಗಳ ಸಂಖ್ಯೆ ಆಧರಿಸಿ ವಾಟ್ಸ್ಯಾಪ್​ ಅಥವ ಎಸ್​ಎಮ್​ಎಸ್​​ ಮೂಲಕ ನೋಟಿಸ್​ ಜಾರಿ ಮಾಡುತ್ತಾರೆ. ಇನ್ನೊಂದು ವಾರದಲ್ಲಿ ಈ ವಾಟ್ಸ್ಯಾಪ್​ ನೋಟಿಸ್​ ಪ್ರಯೋಗ ಜಾರಿಯಾಗಲಿದೆ.

ಇಷ್ಟು ದಿನ ಪೋಸ್ಟ್​ ಆಫೀಸ್​ ಮೂಲಕ ಅಥವ ಮನೆಗೆ ಬಂದು ಪೊಲೀಸ್ರು ನೋಟೀಸ್​​ ಜಾರಿ ಮಾಡುತ್ತಿದ್ರು, ಆದ್ರೆ ಇನ್ಮೇಲೆ ಟೆಕ್ನಾಲಜಿ ಬಳಸಿಕೊಂಡು ಸಂಚಾರಿ ಪೊಲೀಸ್ರು ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವೇಗವಾಗಿ ವಾಟ್ಸ್ಯಾಪ್​​ ಅಥವ ಎಸ್​ಎಂಎಸ್​ ಮೂಲಕ ನೋಟಿಸ್​ ಜಾರಿ ಮಾಡಿ ಬಿಸಿ ಮುಟ್ಟಿಸಲಿದ್ದಾರೆ.

The post ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ವಾಟ್ಸ್​ ಆ್ಯಪ್​ ನಂಬರ್​ಗೇ ಬರಲಿದೆ ನೋಟಿಸ್ appeared first on News First Kannada.

Source: newsfirstlive.com

Source link