ಬಿಗ್‍ಬಾಸ್ ಮನೆಯಿಂದ ರಘು ಔಟ್

ಬಿಗ್‍ಬಾಸ್ ಎರಡನೇ ಇನ್ನಿಂಗ್ಸ್‌ನ ಮೂರನೇ ವಾರ ರಘು ಗೌಡರವರು ದೊಡ್ಮನೆಯಿಂದ ಹೊರ ಬಂದಿದ್ದಾರೆ.

ಬಿಗ್‍ಬಾಸ್ ಮನೆಯ 13ನೇ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟ ರಘು, ಇನ್‍ಸ್ಟಾಗ್ರಾಮ್‍ನಲ್ಲಿ ರಘು ವೈನ್ ಸ್ಟೋರ್ ಎಂಬ ಖಾತೆಯ ಮೂಲಕವೇ ಸಖತ್ ಫೇಮಸ್. ದೊಡ್ಮನೆಯಲ್ಲಿ ಎಲ್ಲ ಸ್ಪರ್ಧಿಗಳೊಂದಿಗೆ ಉತ್ತಮ ಬಾಂಧವ್ಯ ಹಾಗೂ ಗುಡ್ ಮ್ಯಾನರಿಸಮ್ ಹೊಂದಿರುವ ರಘುರವರು, ಈ ವಾರ ಟಾಸ್ಕ್‌ಗಳಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ.

ಬಿಗ್‍ಬಾಸ್ ಫಸ್ಟ್ ಇನ್ನಿಂಗ್ಸ್‌ನಲ್ಲಿ ಅಷ್ಟಾಗಿ ಆಕ್ಟೀವ್ ಆಗಿರದ ರಘು ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ರೊಚ್ಚು ರಘು ಆಗಿ ಬಂದಿರುವುದಾಗಿ ತಿಳಿಸಿ ಮೊದಲ ವಾರದಿಂದಲೇ ಟಾಸ್ಕ್‌ಗಳಲ್ಲಿ ಚೆನ್ನಾಗಿ ಭಾಗವಹಿಸುವ ಮೂಲಕ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ದೊಡ್ಮನೆಯಲ್ಲಿ ವೈಷ್ಣವಿಯವರ ಬೆಸ್ಟ್ ಫ್ರೆಂಡ್ ಆಗಿರುವ ರಘು ತಮ್ಮ ತುಂಟತನ, ತರ್ಲೆ ಹಾಗೂ ಕಾಮಿಡಿ ಮಾಡುವ ಮೂಲಕ ಮನೆಯ ಸ್ಪರ್ಧಿಗಳಿಗೆ ನಗುವಿನ ಕಚಗುಳಿ ನೀಡುತ್ತಿದ್ದರು.

blank

ಸದ್ಯ ಈ ವಾರ ಜೋಡಿ ಟಾಸ್ಕ್, ನೋಟು ಮುದ್ರಣಾ ಟಾಸ್ಕ್, ಬಲೂನ್ ಟಾಸ್ಕ್ ಹೀಗೆ ಹಲವಾರು ಟಾಸ್ಕ್‌ಗಳಲ್ಲಿ ಭಾಗವಹಿಸಿ ಸಿಂಪಲ್ ಆಗಿ ಆಟಗಳನ್ನು ಆಡಿದ್ದ ರಘು, ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನ ಮನೆಯಿಂದ ಹೊರಗೆ ಬರುತ್ತಿರುವ ಎರಡನೇ ಸ್ಪರ್ಧಿಯಾಗಿದ್ದಾರೆ. ಈ ಮುನ್ನ ಸ್ಯಾಂಡಲ್‍ವುಡ್ ನಟಿ ನಿಧಿ ಸುಬ್ಬಯ್ಯರವರು ದೊಡ್ಮನೆಯಿಂದ ಹೊರಬಂದಿದ್ದರು. ಇದನ್ನೂ ಓದಿ: 72 ದಿನಗಳ ಹಿಂದೆ ನಾನು ನೋಡಿದ್ದ ಕೆಪಿ ಹೀಗೆ ಇರಲಿಲ್ಲ: ಸುದೀಪ್

The post ಬಿಗ್‍ಬಾಸ್ ಮನೆಯಿಂದ ರಘು ಔಟ್ appeared first on Public TV.

Source: publictv.in

Source link