ಟಿಪ್​ಟಾಪ್ ಆಗಿ ಬಂದ ಕಳ್ಳ.. ರೂಮಿಗೆ ನುಗ್ಗಿ ಸೈಲೆಂಟಾಗೇ ಲ್ಯಾಪ್​ಟಾಪ್ ಹೊತ್ತೊಯ್ದ

ಟಿಪ್​ಟಾಪ್ ಆಗಿ ಬಂದ ಕಳ್ಳ.. ರೂಮಿಗೆ ನುಗ್ಗಿ ಸೈಲೆಂಟಾಗೇ ಲ್ಯಾಪ್​ಟಾಪ್ ಹೊತ್ತೊಯ್ದ

ಬೆಂಗಳೂರಿನ ಅಪಾರ್ಟ್​ಮೆಂಟ್ ನಿವಾಸಿಗಳೇ ಕೊಂಚ ಹುಷಾರಾಗಿರಿ.. ಸ್ವಲ್ಪ ಯಾಮಾರಿದ್ರೋ ನಿಮ್ಮ ವಸ್ತುಗಳು ಮನೆಯಿಂದ ಕಣ್ಮರೆಯಾಗ್​ ಬಿಡ್ತಾವೆ ಎಚ್ಚರ. ಟಿಪ್‌ಟಾಪ್ ಆಗಿ ಬಂದು ಫ್ಲಾಟ್​ಗೆ ನುಗ್ಗಿ ಕಳ್ಳತನ‌ ಮಾಡ್ತಿರೋರ ಸಂಖ್ಯೆ ಹೆಚ್ಚಾಗ್ತಿದೆ. ಮನೆ ಬಾಗಿಲು ಓಪನ್ ಮಾಡಿದ್ರೆ ಮುಗಿತು. ಸೀದಾ ಸೀದಾ ನುಗ್ಗೋ ಈ ಅಫೀಷಿಯಲ್ ಕಳ್ಳ ನಿಮ್ಮ ಮನೆಯನ್ನೇ ಗುಡಿಸಿ ಗುಂಡಾಂತರ ಮಾಡ್ಬಿಡ್ತಾನೆ.

ಜುಲೈ 7. ಮಧ್ಯಾಹ್ನ 3 ಗಂಟೆಯ ಸಮಯ. ಒಳ್ಳೆ ಸೂಟು, ಬೂಟು ಹಾಕೊಂಡು, ಇನ್​​ಸರ್ಟ್​ ಮಾಡಿದ್ದ ವ್ಯಕ್ತಿಯೊಬ್ಬ, ಆ ಕಡೆ, ಈ ಕಡೆ, ಮೇಲಿಂದ ಕೆಳಗೆ, ಒಳ್ಳೆ ಅಂಡು ಸುಟ್ಟ ಬೆಕ್ಕಿನಂತೆ ಎಲ್ಲಾ ಕಡೆ ಓಡಾಡ್ತಿದ್ದ. ಕೈಯಲ್ಲಿ ಆ್ಯಂಡ್ರಾಯ್ಡ್ ಫೋನ್ ಸಹ ಇತ್ತು. ಯಾರನ್ನೋ ಹುಡುಕ್ತಿರೋವಂತಿದ್ದ. ಕೊನೆಗೆ ಒಂದು ರೂಮ್ ಕಾಣ್ತು. ಅದನ್ನೇ ಒಂದು ಕ್ಷಣ ದಿಟ್ಟಿಸಿ ನೋಡಿ, ಕಿಟಕಿ ಕಡೆ ಕಣ್ಣು ಹಾಯಿಸಿದ್ದ. ಅರೆ, ಅಲ್ಲೇನ್ ಕಾಣ್ತೋ ಏನೋ, ಕಳ್ಳ ಬೆಕ್ಕಿನಂತೆ ಮೆಲ್ಲನೆ ಡೋರ್ ಕಡೆ ಬಂದವ ಒಳಗೆ ಹೋಗೇ ಬಿಟ್ಟ.. ಹೀಗೆ ಒಳಗೆ ಹೋಗಿ ಕೈಯಲ್ಲಿ ಲ್ಯಾಪ್​​ಟಾಪ್ ಹಿಡಿದು ಬಂದವನು, ನೀಟಾಗಿ ಬಾಗಿಲು ಮುಚ್ಚಿ ಹೊರನಡೆದೇ ಬಿಟ್ಟಿದ್ದ.

ಹೀಗೆ, ಅಫೀಷಿಯಲ್ ತರ ಬಂದು ರೂಮಿನಿಂದ ಲ್ಯಾಪ್​​ಟಾಪ್ ತಗೊಂಡೋದವನು, ಯಾರೋ ಆಫೀಸರ್ ಅಲ್ಲ. ಬದಲಾಗಿ ಅಫೀಷಿಯಲ್ ಕಳ್ಳ. ಯೆಸ್, ನಗರದ ಗೋವಿಂದಪುರ ಠಾಣೆ ವ್ಯಾಪ್ತಿಯ ವೀರನಪಾಳ್ಯದ ಸೋನಾ ಟವರ್ ಅಪಾರ್ಟ್​ಮೆಂಟ್​ನಲ್ಲಿ ಹಾಡಹಗಲೇ ಲ್ಯಾಪ್​​ಟಾಪ್ ಕಳ್ಳತನ ಮಾಡಿದ್ದಾನೆ. 4ನೇ ಮಹಡಿಯ ಅಪಾರ್ಟ್​ಮೆಂಟ್​ ಒಂದರ ರೂಮ್​​ನಲ್ಲಿದ್ದ ವಿದ್ಯಾರ್ಥಿನಿ ಸ್ನೇಹ, ಮನೆ ಬಾಗಿಲು ಸ್ವಲ್ಪ ಓಪನ್ ಬಿಟ್ಟು, ಫೋನ್ ತಗೊಂಡು ಬಾಲ್ಕನಿಗೆ ಹೋಗಿದ್ಳು. ಸ್ನೇಹ ತಾಯಿ ಬೆಡ್ ರೂಂನಲ್ಲಿ ಮಲಗಿದ್ರು. ಇದನ್ನ ಕಿಟಕಿಯ ಮೂಲಕ‌ ಕನ್ಫರ್ಮ್ ಮಾಡಿಕೊಂಡ ಕಳ್ಳ, ಒಳಗೆ ನುಗ್ಗಿ ಲ್ಯಾಪ್​​ಟಾಪ್ ಕದ್ದೊಯ್ದಿದ್ದಾನೆ.

ಇನ್ನ, ಈ ಕಳ್ಳತನ ನಡೆದ ಎರಡೇ ದಿನಕ್ಕೆ ಇದೇ ಅಪಾರ್ಟ್​ಮೆಂಟ್​ ಪಕ್ಕದಲ್ಲಿರೋ ಪಿಜಿಯಲ್ಲಿ, ಜುಲೈ 9ರಂದು ಕಳ್ಳತನವಾಗಿದೆ. ಪಿಜಿಯಲ್ಲಿದ್ದ ಮೊಬೈಲ್ ದೋಚಿ ಯಾರೋ ಖದೀಮರು ಪರಾರಿಯಾಗಿದ್ದಾರೆ. ಈ ಘಟ‌ನೆ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಟ್ನಲ್ಲಿ, ನಗರ ಅನ್​​ಲಾಕ್​ ಆಗ್ತಿದ್ದಂತೆ, ಮತ್ತೆ ಕಳ್ಳರು ಆ್ಯಕ್ಟಿವ್ ಆಗಿದ್ದಾರೆ‌. ಹಗಲು ಹೊತ್ತಲ್ಲೇ ಬಂದು ತಮ್ಮ ಕೈಚಳಕ ತೋರಿಸ್ತಿದ್ದಾರೆ. ಈ ನಡುವೆ ಪೊಲೀಸರು ಕ್ರೈಂ ಕಂಟ್ರೋಲ್​​ಗೆ ನಿನ್ನೆಯಷ್ಟೇ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಎಚ್ಚರಿಸಿದ್ದಾರೆ. ಇನ್ಮುಂದೆಯಾದ್ರೂ ಕ್ರೈಂ ಕಂಟ್ರೋಲ್ ಆಗುತ್ತಾ ಅಂತ ಕಾದು ನೋಡಬೇಕಿದೆ.

The post ಟಿಪ್​ಟಾಪ್ ಆಗಿ ಬಂದ ಕಳ್ಳ.. ರೂಮಿಗೆ ನುಗ್ಗಿ ಸೈಲೆಂಟಾಗೇ ಲ್ಯಾಪ್​ಟಾಪ್ ಹೊತ್ತೊಯ್ದ appeared first on News First Kannada.

Source: newsfirstlive.com

Source link