ಟಯರ್ ಬ್ಲಾಸ್ಟ್ ಆಗಿ ಕಾರು ಅಪಘಾತ-ತರಕಾರಿ ಮಾರುವ ಮಹಿಳೆ ಸಾವು

ಬಳ್ಳಾರಿ: ಚಲಿಸುತ್ತಿದ್ದ ಕಾರಿನ ಮುಂದಿನ ಟಯರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಮರದ ಕೆಳಗಡೆ ತರಕಾರಿ ಮಾರಾಟ ಮಾರುತ್ತಿದ್ದ ಮಹಿಳೆ ಧಾರುಣವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದಲ್ಲಿ ವರದಿಯಾಗಿದೆ.

ಹಳೇಕೋಟೆ ಗ್ರಾಮದ ನಿವಾಸಿ ಕುರುಬರ ಶಾಂತಮ್ಮ(42) ಮೃತ ದುರ್ದೈವಿ. ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದ ಬಳಿ ಗಾದಿಲಿಂಗ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರಿನ ಮುಂದಿನ ಟಯರ್ ಸ್ಫೋಟಗೊಂಡಿದೆ. ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಮರದ ಕೆಳಗಡೆ ತರಕಾರಿ ಮರುತ್ತಿದ್ದ ಶಾಂತಮ್ಮ ಸ್ಥಳದಲ್ಲೇ ಅಸುನಿಗಿದ್ದಾರೆ. ಇದನ್ನೂ ಓದಿ: ಮೈಲಾರಲಿಂಗೇಶ್ವರ ದರ್ಶನ ಪಡೆದ ರವಿ ಚನ್ನಣ್ಣನವರ್

ಘಟನೆಯಲ್ಲಿ ಕಾರಿನ ಚಾಲಕ ಗಾದಿಲಿಂಗ ಸೇರಿದಂತೆ ತರಕಾರಿ ಖರೀದಿಗೆ ಆಗಮಿಸಿದವರಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಸಿರುಗುಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಗಾಯಗಳಾದ ಒಬ್ಬರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೆಕ್ಕಲಕೋಟೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

The post ಟಯರ್ ಬ್ಲಾಸ್ಟ್ ಆಗಿ ಕಾರು ಅಪಘಾತ-ತರಕಾರಿ ಮಾರುವ ಮಹಿಳೆ ಸಾವು appeared first on Public TV.

Source: publictv.in

Source link