ಬೆಣ್ಣೆತೋರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ

– ನದಿ ಪಾತ್ರದಲ್ಲಿ ಕಟ್ಟೆಚ್ಚರ

ಕಲಬುರಗಿ: ಬೆಣ್ಣೆತೋರಾ ಯೋಜನೆಯ ಜಲಾಶಯವು ಈಗಾಗಲೇ ಶೇ.70 ರಷ್ಟು ಭರ್ತಿಯಾಗಿದ್ದು, ಜಲಾಶಯಕ್ಕೆ ನೀರಿನ ಒಳಹರಿವು ಹರಿದು ಬರುತ್ತಿದೆ. ಇದೇ ಜುಲೈ 15 ರವರೆಗೆ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುವುದಾಗಿ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದ್ದು, ಜಲಾಶಯದ ಗರಿಷ್ಠ ಮಟ್ಟದ ನಂತರ ಬಂದ ಒಳಹರಿವಿನ ಹೆಚ್ಚಿನ ನೀರನ್ನು ಆಣೆಕಟ್ಟೆ ಕೋಡಿ ಮುಖಾಂತರ ನದಿಗೆ ಹರಿಬಿಡಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಬೆಣ್ಣೆತೋರಾ ಯೋಜನೆ ವಿಭಾಗ ಹೆಬ್ಬಾಳದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಆದ್ದರಿಂದ ಬೆಣ್ಣೆತೋರಾ ನದಿ ಸುತ್ತಮುತ್ತಲಿನ ಕುರಿಕೋಟಾ, ಹಳೆ ಹೆಬ್ಬಾಳ, ಕಣಸೂರ, ಕಲಗುರ್ತಿ, ಮಲಘಾಣ ಮತ್ತು ತೆಂಗಳಿ ಗ್ರಾಮಗಳ ಜನರು ಹಾಗೂ ನದಿಯ ಇತರ ಅಕ್ಕಪಕ್ಕದ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರಬೇಕು. ಇದನ್ನೂ ಓದಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೆಡ್ ಅಲರ್ಟ್-ಹವಾಮಾನ ಎಚ್ಚರಿಕೆ

ಸಾರ್ವಜನಿಕರು ನದಿಯಲ್ಲಿ ಇಳಿದು ಈಜುವುದು, ಬಟ್ಟೆ ತೊಳೆಯಲು ಮುಂದಾಗೋದು, ದನಕರುಗಳಿಗೆ ನೀರು ಕುಡಿಸಲು ಹಾಗೂ ಇನ್ನಿತರ ಯಾವುದೇ ಕಾರಣಕ್ಕಾಗಿ ನದಿಯಲ್ಲಿ ಇಳಿಯಬಾರದು. ನದಿಯ ಪಾತ್ರದಲ್ಲಿರುವ ಸಣ್ಣ ನೀರಾವರಿ ಮತ್ತು ಇನ್ನಿತರ ಯವುದೇ ಇಲಾಖೆಗಳಿಗೆ ಸಂಬಂಧಪಟ್ಟ ಆಸ್ತಿಗಳಿದ್ದಲ್ಲಿ ಮುಂಜಾಗ್ರತೆಯಾಗಿ ಸುರಕ್ಷಿತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಇದನ್ನೂ ಓದಿ: ಔರಾದ್ ತಾಲೂಕಿನಲ್ಲಿ ಮಳೆಯ ಅಬ್ಬರ- ಅಪಾರ ಪ್ರಮಾಣದ ಬೆಳೆ ಹಾನಿ

 

The post ಬೆಣ್ಣೆತೋರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ appeared first on Public TV.

Source: publictv.in

Source link