ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಹುಟ್ಟುಹಬ್ಬದ ಸಂಭ್ರಮ- ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್​

ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಹುಟ್ಟುಹಬ್ಬದ ಸಂಭ್ರಮ- ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್​

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್​​​ಕುಮಾರ್ ಅವರು ಇಂದು 59 ವಸಂತಕ್ಕೆ ಕಾಲಿಟ್ಟಿದ್ದು, ಪತ್ನಿ ಗೀತಾ ಹಾಗೂ ಕುಟುಂಬ ಸದಸ್ಯರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

blank

ಕೊರೊನಾ ಕಾರಣದಿಂದ ಪ್ರತಿ ವರ್ಷದಂತೆ ಈ ವರ್ಷ ಅದ್ಧೂರಿ ಆಚರಣೆ ಇಲ್ಲ ಎಂದು ಮೊದಲೇ ಅಭಿಮಾನಿಗಳಿಗೆ ತಿಳಿಸಿದ್ದ ಶಿವರಾಜ್​ಕುಮಾರ್ ಅವರು, ಮನೆಯ ಅಭಿಮಾನಿಗಳು ಬಳಿ ಬಾರದಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೇ ನೀವು ಇರುವ ಸ್ಥಳದಿಂದಲೇ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುವಂತೆ ತಿಳಿಸಿದ್ದರು. ಕೊರೊನಾ ಪರಿಸ್ಥಿತಿಯಲ್ಲಿ ಅದ್ಧೂರಿ ಆಚರಣೆಗೆ ಬ್ರೇಕ್ ಹಾಕಿದ್ದ ಶಿವರಾಜ್​ಕುಮಾರ್​, ವಾಕ್ಸಿನ್ ಹಾಕಿಸಿಕೊಳ್ಳಿ, ಸೋಂಕಿನ ಬಗ್ಗೆ ಎಚ್ಚರಿಕೆಯಿಂದಿರಿ ಎಂಬ ಸಂದೇಶವನ್ನೂ ನೀಡಿದ್ದರು.

blank

ಇನ್ನು ಹುಟ್ಟುಹಬ್ಬದ ವಿಶೇಷತೆಯ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10:05ಕ್ಕೆ ಬಹುನಿರೀಕ್ಷಿತ ಭಜರಂಗಿ-2 ಸಿನಿಮಾ ಟೀಸರ್ ರಿಲೀಸ್ ಆಗಲಿದ್ದು, ಇದರೊಂದಿಗೆ ಶಿವರಾಜ್​​ಕುಮಾರ್ ಅಭಿನಯಿಸುತ್ತಿರುವ ಮೂರು ಚಿತ್ರಗಳ ಟೈಟಲ್ ಕೂಡ ಲಾಂಚ್ ಆಗಲಿದೆ. ಆ ಮೂಲಕ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್​ ನೀಡಲಿದ್ದಾರೆ. ಅಲ್ಲದೇ ಕೊರೊನಾದಿಂದ ಸಂಕಷ್ಟ ಸಿಲುಕಿರುವ ಜನರಿಗೆ ನೆರವಿಗೆ ಬರಲು ಬೆಂಗಳೂರಿನ ರಾಜಾಜಿನಗರದಲ್ಲಿ ಫುಡ್ ಕಿಟ್ ವಿತರಣೆ ಮಾಡಲಿದ್ದಾರೆ.

The post ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಹುಟ್ಟುಹಬ್ಬದ ಸಂಭ್ರಮ- ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್​ appeared first on News First Kannada.

Source: newsfirstlive.com

Source link