ಫುಡ್​​ಕಿಡ್​​ಗಾಗಿ ಮುಗಿಬಿದ್ದು ಕೊರೊನಾ ನಿಯಮಕ್ಕೆ ಗೋಲಿ ಹೊಡೆದ ಜನರು!

ಫುಡ್​​ಕಿಡ್​​ಗಾಗಿ ಮುಗಿಬಿದ್ದು ಕೊರೊನಾ ನಿಯಮಕ್ಕೆ ಗೋಲಿ ಹೊಡೆದ ಜನರು!

ಬೆಳಗಾವಿ: ಕಟ್ಟಡ ಕಾರ್ಮಿಕರಿಗಾಗಿ ದಿನಸಿ ಕಿಟ್ ವಿತರಣೆ ಸಂದರ್ಭದಲ್ಲಿ ಸಾವಿರಾರು ಕಾರ್ಮಿಕರು ಮುಗಿಬಿದ್ದ ಹಿನ್ನೆಲೆಯಲ್ಲಿ ನೂಕು ನುಗ್ಗಲು ಉಂಟಾಗಿ, ಪರಿಸ್ಥಿತಿ ನಿಯಂತ್ರಣಕ್ಕಾಗಿ ಹರಸಾಹಸ ಘಟನೆ ಬೆಳಗಾವಿಯ ರಾಯಬಾಗ ಪಟ್ಟಣದಲ್ಲಿ ನಡೆದಿದೆ.

ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಶಾಸಕ ದುರ್ಯೋಧನ ಐಹೊಳೆ ಅವರ ಗೃಹ ಕಚೇರಿ ಎದುರು ಆಹಾರ ಕಿಟ್ ನೀಡುವ ವಿಷಯ ಗೊತ್ತಾಗ್ತಾ ಇದ್ದಂತೆ ಜನಜಾತ್ರೆಯೇ ನೆರೆದು ನೂಕು ನುಗ್ಗಲು ಉಂಟಾಯಿತು. ಬಿಪಿಎಲ್ ಕಾರ್ಡುದಾರರಿಗೆಲ್ಲರಿಗೂ ಕಿಟ್ ಕೊಡ್ತಾರೆ ಅನ್ನೋ ಗಾಳಿ ಸುದ್ದಿಯೇ ಈ ಆವಾಂತರಕ್ಕೆ ಕಾರಣವಾಗಿದ್ದು, ಜನಸ್ತೋಮವನ್ನು ನಿಯಂತ್ರಿಸೋದು ಪೊಲೀಸರಿಗೆ ಸಾಕು ಸಾಕಾಗಿ ಹೋಯಿತು.

blank

ಫುಡ್​ಕಿಟ್​​ಗಾಗಿ ಬಂದವರಂತೂ ಕೊರೊನಾ ಅಂದ್ರೆ ಭಯವೇ ಇಲ್ಲ ಅನ್ನೋ ಹಾಗೇ ನೂಕುನುಗ್ಗಲಿನ ನರಕ ಸೃಷ್ಟಿಸಿಬಿಟ್ಟಿದ್ದರು. ಸರಿಯಾದ ವ್ಯವಸ್ಥೆ, ಕೋವಿಡ್ ನಿಯಮಗಳಿಗೆ ಅಗತ್ಯ ಕ್ರಮ ತೆಗೆದುಕೊಳ್ಳದೇ ಕಾರ್ಮಿಕ ಇಲಾಖೆಯೂ ಕೈಚೆಲ್ಲಿದ್ದು ಇಲ್ಲಿ ಎದ್ದು ಕಾಣುತ್ತಿತ್ತು. ಸರತಿ ಸಾಲಿನಲ್ಲಿ ಸಾಗದೇ ಜನದಟ್ಟಣೆ ಏರ್ಪಟ್ಟಿತು. ಕೊರೊನಾಗೆ ಆಹ್ವಾನ ನೀಡುವಂತಹ ಇಂತದ್ದೊಂದು ಭಯಹುಟ್ಟಿಸೋ ದೃಶ್ಯಕ್ಕೆ ಶಾಸಕರ ಗೃಹಕಚೇರಿ ಸಾಕ್ಷಿಯಾಯಿತು. ಗಂಟೆಗಟ್ಟಲೇ ಕಿಟ್​ಗಾಗಿ ಕಿಲೋಮೀಟರ್​ಗಟ್ಟಲೆ ನಿಂತರೂ ಬರಿದಾದ ಕೈಯಲ್ಲೇ ಬಂದಿದ್ದವರು ವಾಪಸ್​ ಹೋಗುವಂತಾಯಿತು.

The post ಫುಡ್​​ಕಿಡ್​​ಗಾಗಿ ಮುಗಿಬಿದ್ದು ಕೊರೊನಾ ನಿಯಮಕ್ಕೆ ಗೋಲಿ ಹೊಡೆದ ಜನರು! appeared first on News First Kannada.

Source: newsfirstlive.com

Source link