‘ಮಹಿಳಾ ಮಂತ್ರಿ’ಗಳಿಗೆ ನಿರ್ಮಲಾ ‘ಟೀ’ ಪಾರ್ಟಿ

‘ಮಹಿಳಾ ಮಂತ್ರಿ’ಗಳಿಗೆ ನಿರ್ಮಲಾ ‘ಟೀ’ ಪಾರ್ಟಿ

ಪ್ರಧಾನಿ ನರೇಂದ್ರ ಮೋದಿಯವರ ಮಂತ್ರಿಮಂಡಲದ ಮಹಿಳಾ ಮಂತ್ರಿಗಳಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟೀ ಪಾರ್ಟಿ ಆಯೋಜಿಸಿದ್ರು.

ತಮ್ಮ ನಿವಾಸದಲ್ಲಿ ನಡೆದ ಅನೌಪಚಾರಿಕ ಸಭೆಯಲ್ಲಿ ಸ್ಮೃತಿ ಇರಾನಿ, ಮೀನಾಕ್ಷಿ ಲೇಖಿ, ಸಾಧ್ವಿ ನಿರಂಜನ್ ಜ್ಯೋತಿ, ಅನುಪ್ರಿಯಾ ಪಟೇಲ್, ರೇಣುಕಾ ಸಿಂಗ್, ಅನ್ನಪೂರ್ಣ ದೇವಿ, ಪ್ರತಿಮಾ ಭೌಮುಲ್, ಭಾರತಿ ಪವಾರ್, ಶೋಭಾ ಕರಂದ್ಲಾಜೆ, ದರ್ಶನಾ ಜರ್ದೋಷ್ ಭಾಗಿಯಾಗಿದ್ದರು. ಕೇಂದ್ರ ಸಂಪುಟ ವಿಸ್ತರಣೆಯ ನಂತರ, ಪ್ರಧಾನಿ ಮೋದಿಯವರ ಮಂತ್ರಿ ಮಂಡಲದಲ್ಲಿ ಈಗ ಬರೋಬ್ಬರಿ 11 ಸಚಿವೆಯರಿದ್ದಾರೆ.

ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬಳಿಕ ಕ್ಯಾಬಿನೆಟ್​ನಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಳವಾಗಿತ್ತು. 2019ರ ಸಂಪುಟದಲ್ಲಿ 6 ಮಹಿಳಾ ಸಚಿವರು ಸ್ಥಾನ ಪಡೆದಿದ್ದರು. ಸದ್ಯ ಈ ಸಂಖ್ಯೆ 11 ಗಂಟೆಗೆ ಏರಿಕೆಯಾಗಿದೆ. ಸದ್ಯ ಇರುವ 11 ಮಹಿಳಾ ಸಚಿವರನ್ನು 9 ರಾಜ್ಯ ಹಾಗೂ 9 ಸಮುದಾಯಗಳಿಂದ ಆಯ್ಕೆ ಮಾಡಲಾಗಿದೆ.

The post ‘ಮಹಿಳಾ ಮಂತ್ರಿ’ಗಳಿಗೆ ನಿರ್ಮಲಾ ‘ಟೀ’ ಪಾರ್ಟಿ appeared first on News First Kannada.

Source: newsfirstlive.com

Source link