ಕೇರಳದಲ್ಲಿ ಮತ್ತೆ ಮೂವರಿಗೆ ‘ಝೀಕಾ’ ವೈರಸ್ – 18ಕ್ಕೇರಿದ ಸೋಂಕಿತರ ಸಂಖ್ಯೆ

ಕೇರಳದಲ್ಲಿ ಮತ್ತೆ ಮೂವರಿಗೆ ‘ಝೀಕಾ’ ವೈರಸ್ – 18ಕ್ಕೇರಿದ ಸೋಂಕಿತರ ಸಂಖ್ಯೆ

ತಿರುವನಂತಪುರಂ: ಕೇರಳದಲ್ಲಿ ಝೀಕಾ ವೈರಸ್ ಆರ್ಭಟ ಮುಂದುವರೆದಿದ್ದು, ನಿನ್ನೆ ಮತ್ತೆ ಮೂವರಲ್ಲಿ ಸೋಂಕು ದೃಢಪಟ್ಟಿದೆ. 22 ತಿಂಗಳ ಮಗು ಸೇರಿ 46 ವರ್ಷದ ವ್ಯಕ್ತಿ ಮತ್ತು 29 ವರ್ಷದ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕೇರಳದಲ್ಲಿ ಝೀಕಾ ವೈರಸ್​​ಗಳ ಸಂಖ್ಯೆ 18ಕ್ಕೇರಿದೆ.

ಕೇರಳದ ತಿರುವನಂತಪುರಂ, ತ್ರಿಶೂರ್, ಕೋಝಿಕೋಡ್ ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಅಲಪ್ಪುಳದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಘಟಕದಲ್ಲಿ ಪರೀಕ್ಷಾ ವ್ಯವಸ್ಥೆ ಮಾಡಿದೆ ಅಂತ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

The post ಕೇರಳದಲ್ಲಿ ಮತ್ತೆ ಮೂವರಿಗೆ ‘ಝೀಕಾ’ ವೈರಸ್ – 18ಕ್ಕೇರಿದ ಸೋಂಕಿತರ ಸಂಖ್ಯೆ appeared first on News First Kannada.

Source: newsfirstlive.com

Source link