ಕೊಡಗು ಅನ್​ಲಾಕ್​; ಮಡಿಕೇರಿಗೆ ಒಂದು ಟ್ರಿಪ್ ಹೋಗೋಣಾ ಅಂತ ಅಂದುಕೊಂಡರೆ ಸ್ವಲ್ಪ ಕಾಯಿರಿ

ಕೊಡಗು ಅನ್​ಲಾಕ್​; ಮಡಿಕೇರಿಗೆ ಒಂದು ಟ್ರಿಪ್ ಹೋಗೋಣಾ ಅಂತ ಅಂದುಕೊಂಡರೆ ಸ್ವಲ್ಪ ಕಾಯಿರಿ

ಮಡಿಕೇರಿ: ಕೊಡಗು ಜಿಲ್ಲೆ ಅನ್​ಲಾಕ್​ ಆಗಿದೆ. ಸೋ ಮಡಿಕೇರಿಗೆ ಒಂದು ಟ್ರಿಪ್ ಹೋಗೋಣಾ ಅಂತ ನೀವೆಲ್ಲಾದ್ರೂ ಪ್ಲಾನ್ ಹಾಕ್ಕೊಂಡ್ರೆ ಸ್ವಲ್ಪ ಕಾಯಿರಿ. ಯಾಕಂದ್ರೆ ಕೊಡಗು ಜಿಲ್ಲಾಡಳಿತ ಇನ್ನೂ ಯಾವುದೇ ಪ್ರವಾಸಿ ತಾಣಗಳನ್ನ ಓಪನ್ ಮಾಡಿಲ್ಲ. ಕೊಡಗಿನ ಪ್ರಸಿದ್ಧ ತಾಣವಾದ ರಾಜಾಸೀಟು ಉದ್ಯಾನವನ, ಅಬ್ಬಿ ಫಾಲ್ಸ್​ಗೆ ಇನ್ನೂ ಬೀಗ ಹಾಕಲಾಗಿದೆ. ಪರಿಣಾಮ ಪ್ರವಾಸಿಗರು ಬಂದು ವಾಪಸ್ ಮರಳ್ತಿದ್ದಾರೆ.

blank

ಬಾಗಿಲು ಮುಚ್ಚಿರೋ ರಾಜಾಸೀಟು ಉದ್ಯಾನವನ, ಅಬ್ಬಿ ಫಾಲ್ಸ್​ ಪ್ರವಾಸಿಗರು ಇಲ್ಲದೇ ಬಣಗುಡುತ್ತಿದೆ. ಕೊಡಗು ಜಿಲ್ಲೆಯನ್ನ ಅನ್​ಲಾಕ್ ಮಾಡಿ ಈಗಾಗ್ಲೇ ಎರಡು ದಿನಗಳು ಕಳೆದಿವೆ. ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಕೂಡ ಆರಂಭಿಸಬಹುದು, ಪ್ರವಾಸಿಗರು ತೆರಳಬಹುದು ಅಂತ ರಾಜ್ಯ ಸರ್ಕಾರವೇ ಹೇಳಿದೆ. ಹಾಗಾಗಿ ಕಳೆದೆರಡು ದಿನಗಳಿಂದ ಟೂರಿಸ್ಟ್​ ಕೂಡ ಕೊಡಗಿನ ವಿವಿಧ ಪ್ರವಾಸಿ ತಾಣಗಳಿಗೆ ವಿಸಿಟ್ ಕೊಡ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಯಾವುದೇ ಪ್ರವಾಸಿ ತಾಣಗಳನ್ನು ಓಪನ್ ಮಾಡಿಲ್ಲ.

blank

ಸರ್ಕಾರದ ಆದೇಶದಂತೆ ಇತರೇ ಜಿಲ್ಲೆಗಳ್ಲಿ ಪ್ರವಾಸಿ ಚಟುವಟಿಕೆಗಳು ಶುರುವಾದರೂ ಕೊಡಗಿನಲ್ಲಿ ಯಾವುದೇ ಪ್ರವಾಸಿತಾಣಗಳು ಓಪನ್​ ಆಗದ ಕಾರಣ ಬಂದ ಪ್ರವಾಸಿಗರು ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನೊಂದೆಡೆ ದುಬಾರೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಪ್ರಭಾವ ಬೀರಿ ಬಂದ ಕೆಲ ಪ್ರವಾಸಿಗರನ್ನ ಮಾತ್ರ ಆನೆ ಕ್ಯಾಂಪಿಗೆ ಬೀಡಲಾಗ್ತಿದೆ. ಉಳಿದ ಪ್ರವಾಸಿಗರು ಗಂಟೆಗಟ್ಟಲೆ ಕಾದು ಹಿಂದಿರುಗಿದ ಸನ್ನಿವೇಶವೂ ನಡೆದಿದೆ.

blank

ಮತ್ತೊಂದೆಡೆ ಈ ಪ್ರವಾಸಿ ತಾಣಗಳನ್ನೇ ನಂಬಿ ಜೀವನ ಸಾಗಿಸ್ತಿರೋ ಬೀದಿ ಬದಿ ವ್ಯಾಪಾರಿಗಳಿಗೂ ಸಮಸ್ಯೆಯಾಗಿದೆ. ಹೀಗೆ ಪ್ರವಾಸಿತಾಣಗಳಿಗೆ ಬಾಗಿಲು ಹಾಕಿರುವುದರಿಂದ ಜನ ಬಂದು ವಾಪಸ್​ ಹೋಗ್ತಿದ್ದಾರೆ ಅಂತಾರೆ ವ್ಯಾಪಾರಸ್ಥರು ತಿಳಿಸಿದ್ದಾರೆ.
ಇನ್ನು ಕೊಡಗು ಜಿಲ್ಲೆಯನ್ನ ಅನ್​ಲಾಕ್​ ಮಾಡಿದ್ರೂ ಯಾಕೆ ಪ್ರವಾಸಿ ತಾಣಗಳನ್ನ ತೆರೆದಿಲ್ಲ ಎಂಬ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಅಧಿಕಾರಗಳ ಜೊತೆ ಸಭೆ ನಡೆಸಿ ಪ್ರವಾಸಿ ತಾಣಗಳನ್ನ ಅನ್​ಲಾಕ್ ಮಾಡಲಾಗುವ ನಿರೀಕ್ಷೆ ಇದೆ, ಏನೇ ಆಗಲಿ. ಕೊರೊನಾದಿಂದ ಬೇಸತ್ತಿದ್ದ ಜನ ಜಾಲಿ ಟ್ರಿಪ್​ಗೆ ಬಂದ್ರೆ ಪ್ರವಾಸಿ ತಾಣಗಳಿಗೆ ಬೀಗ ಹಾಕಿರೋದು ನಿರಾಶೆಯಾಗಿದೆ.

The post ಕೊಡಗು ಅನ್​ಲಾಕ್​; ಮಡಿಕೇರಿಗೆ ಒಂದು ಟ್ರಿಪ್ ಹೋಗೋಣಾ ಅಂತ ಅಂದುಕೊಂಡರೆ ಸ್ವಲ್ಪ ಕಾಯಿರಿ appeared first on News First Kannada.

Source: newsfirstlive.com

Source link