ಪಕ್ಷೇತರರಾಗಿ ಅಖಾಡಕ್ಕಿಳೀತಾರಾ ಜಿಟಿಡಿ..?

ಮೈಸೂರು: ಜೆಡಿಎಸ್‍ನಿಂದ ಒಂದು ಹೆಜ್ಜೆ ಹೊರಗೆ ಹೋಗಿರೋ ಮಾಜಿ ಸಚಿವ ಜಿಟಿ ದೇವೇಗೌಡ, ಜೆಡಿಎಸ್‍ಗೆ ಗುಡ್‍ಬೈ ಹೇಳಿ ಪಕ್ಷೇತರವಾಗಿ ಅಖಾಡಕ್ಕೆ ಇಳಿಯುವ ಸುಳಿವು ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿ, 2 ವರ್ಷಗಳಿಂದ ಜೆಡಿಎಸ್ ಪಕ್ಷದ ಸಭೆಗಳಲ್ಲಿ ಪಾಲ್ಗೊಂಡಿಲ್ಲ. ಮುಂದೆ ಬಿಜೆಪಿ ಅಥವಾ ಕಾಂಗ್ರೆಸ್ ಸೇರಬೇಕೋ, ಜೆಡಿಎಸ್‍ನಲ್ಲೇ ಇರಬೇಕೋ ಎಂಬುದರ ಬಗ್ಗೆ ತೀರ್ಮಾನ ಮಾಡಿಲ್ಲ. ಹಾಗೇ ನಾನು ಪಕ್ಷೇತರವಾಗಿ ನಿಂತರೂ ಅಚ್ಚರಿ ಪಡಬೇಕಿಲ್ಲ ಎಂದು ಹೇಳಿದ್ದಾರೆ.

ನಾನು ಮತ್ತು ನನ್ನ ಮಗ ಹರೀಶ ಇಂಡಿಪೆಂಡೆಂಟ್ ಆಗಿ ನಿಂತರೂ ಗೆಲ್ಲುತ್ತೇವೆ. ಚಾಮುಂಡೇಶ್ವರಿ, ಹುಣಸೂರು, ಕೆ.ಆರ್.ನಗರ ಎಲ್ಲಿ ನಿಂತರೂ ಗೆಲ್ಲುತ್ತೇವೆ, ಜನರ ಪ್ರೀತಿ ವಿಶ್ವಾಸ, ಇಷ್ಟು ವರ್ಷ ರಾಜಕಾರಣ ಮಾಡಿದ್ದರಿಂದ ಧೈರ್ಯ ಬಂದಿದೆ. ದೇವೇಗೌಡರು ಹಲವು ದಿನಗಳ ಬಳಿಕ ನನಗೆ ಫೋನ್ ಮಾಡಿ ಪಕ್ಷ ಬಿಡಬೇಡಿ ಅಂತ ಹೇಳಿದ್ದಾರೆ ಅಂದ್ರು. ಇದನ್ನೂ ಓದಿ: ಸ್ವಾಭಿಮಾನಿ ಪಕ್ಷ ಸ್ಥಾಪಿಸ್ತಾರಾ ಸಂಸದೆ ಸುಮಲತಾ ಅಂಬರೀಶ್..?

ಜನ ಕೂಡ ನಮಗೆ ಪಕ್ಷ ಬೇಡ, ಜಿ.ಟಿ.ದೇವೇಗೌಡರು ಬೇಕು ಅಂತಿದ್ದಾರೆ. ಮುಂದಿನ ವಾರದಿಂದ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ತೀನಿ, ಮತದಾರರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡ್ತೀನಿ ಅಂತ ಜಿಟಿಡಿ ಹೇಳಿದ್ದಾರೆ.

The post ಪಕ್ಷೇತರರಾಗಿ ಅಖಾಡಕ್ಕಿಳೀತಾರಾ ಜಿಟಿಡಿ..? appeared first on Public TV.

Source: publictv.in

Source link