‘ದೇಶದಲ್ಲಿ 69 ಬಾರಿ ತೈಲೋತ್ಪನ್ನಗಳ ದರ ಏರಿಕೆ’- ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

‘ದೇಶದಲ್ಲಿ 69 ಬಾರಿ ತೈಲೋತ್ಪನ್ನಗಳ ದರ ಏರಿಕೆ’- ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

1. ಫುಡ್​​ಕಿಡ್​​ಗಾಗಿ ಶಾಸಕರ ಮನೆ ಮುಂದೆ ಜನಸಾಗರ!

blank
ಯಾರೋ ಹಬ್ಬಿಸಿದ ಸುಳ್ಳು ಸುದ್ದಿಗೆ ಬೆಳಗಾವಿ ಜಿಲ್ಲೆ ರಾಗಭಾಗ ಶಾಸಕ ದುರ್ಯೋದನ ಐಹೊಳೆಯವರ ಗೃಹ ಕಚೇರಿ ಮುಂದೆ ಜನ ಸಾಗರ ಸೇರಿತ್ತು. ಲಾಕ್​ಡೌನ್​ನಿಂದ ಸಂಕಷ್ಟಕ್ಕೀಡಾಗಿರೋ ಕಾರ್ಮಿಕರು, ಕುಟುಂಬಗಳಿಗೆ ಫುಡ್​​ಕಿಟ್ ನೀಡಲಾಗುತ್ತೆ ಅಂತ ಗಾಳಿ ಸುದ್ದಿ ಹರಿಬೀಡಲಾಗಿತ್ತು. ಆದ್ರೆ ಇದನ್ನೆ ನಂಬಿ ಕಾರ್ಮಿಕ ಇಲಾಖೆ ವತಿಯಿಂದ ಫುಡ್​ಕಿಟ್​ ಕೊಡ್ತವ್ರೇ ಅಂತ ಶಾಸಕರ ಕಚೇರಿ ಎದುರು ಜನ ಸ್ತೋಮ ಸೇರಿತ್ತು. ಮಾಸ್ಕ್​ ಇಲ್ದೇ, ಸೋಷಿಯಲ್ ಡಿಸ್ಟೆನ್ಸ್ ಕಾಪಾಡದೇ ಸಾವಿರಾರು ಜನ ಒಂದೆಡೆ ಗುಂಪುಗೊಂಡಿದ್ರು. ಪರಿಣಾಮ ಜನರನ್ನ ನಿಯಂತ್ರಿಸೋಕಾಗ್ದೇ ಪೊಲೀಸರು ಸುಸ್ತಾಗಿ ಹೋಗಿದ್ರು. ಕೊನೆಗೆ ಗಂಟೆಗಟ್ಟಲೇ ಕಿಟ್​ಗಾಗಿ ನಿಂತರೂ ಬರಿದಾದ ಕೈಯಲ್ಲೇ ಬಂದಿದ್ದವರು ವಾಪಸ್​ ಹೋಗುವಂತಾಯಿತು.

2. ಕೇರಳದಲ್ಲಿ 18ಕ್ಕೇರಿದ ‘ಝೀಕಾ’ ವೈರಸ್ ಕೇಸ್

blank
ಕೇರಳದಲ್ಲಿ ಝೀಕಾ ವೈರಸ್ ಆರ್ಭಟ ಮುಂದುವರೆದಿದ್ದು, ನಿನ್ನೆ ಮತ್ತೆ ಮೂವರಲ್ಲಿ ಸೋಂಕು ದೃಢಪಟ್ಟಿದೆ. 22 ತಿಂಗಳ ಮಗು ಸೇರಿ 46 ವರ್ಷದ ವ್ಯಕ್ತಿ ಮತ್ತು 29 ವರ್ಷದ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕೇರಳದಲ್ಲಿ ಝೀಕಾ ವೈರಸ್​​ಗಳ ಸಂಖ್ಯೆ 18ಕ್ಕೇರಿದೆ. ಕೇರಳದ ತಿರುವನಂತಪುರಂ, ತ್ರಿಶೂರ್, ಕೋಝಿಕೋಡ್ ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಅಲಪ್ಪುಳದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಘಟಕದಲ್ಲಿ ಪರೀಕ್ಷಾ ವ್ಯವಸ್ಥೆ ಮಾಡಿದೆ ಅಂತ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

3. ‘ಮಹಿಳಾ ಮಂತ್ರಿ’ಗಳಿಗೆ ನಿರ್ಮಲಾ ‘ಟೀ’ ಪಾರ್ಟಿ!

blank
ಪ್ರಧಾನಿ ನರೇಂದ್ರ ಮೋದಿಯವರ ಮಂತ್ರಿಮಂಡಲದ ಮಹಿಳಾ ಮಂತ್ರಿಗಳಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟೀ ಪಾರ್ಟಿ ಆಯೋಜಿಸಿದ್ರು. ತಮ್ಮ ನಿವಾಸದಲ್ಲಿ ನಡೆದ ಅನೌಪಚಾರಿಕ ಸಭೆಯಲ್ಲಿ ಸ್ಮೃತಿ ಇರಾನಿ, ಮೀನಾಕ್ಷಿ ಲೇಖಿ, ಸಾಧ್ವಿ ನಿರಂಜನ್ ಜ್ಯೋತಿ, ಅನುಪ್ರಿಯಾ ಪಟೇಲ್, ರೇಣುಕಾ ಸಿಂಗ್, ಅನ್ನಪೂರ್ಣ ದೇವಿ, ಪ್ರತಿಮಾ ಭೌಮುಲ್, ಭಾರತಿ ಪವಾರ್, ಶೋಭಾ ಕರಂದ್ಲಾಜೆ, ದರ್ಶನಾ ಜರ್ದೋಷ್ ಭಾಗಿಯಾಗಿದ್ದರು. ಕೇಂದ್ರ ಸಂಪುಟ ವಿಸ್ತರಣೆಯ ನಂತರ, ಪ್ರಧಾನಿ ಮೋದಿಯವರ ಮಂತ್ರಿ ಮಂಡಲದಲ್ಲಿ ಈಗ ಬರೋಬ್ಬರಿ 11 ಸಚಿವೆಯರಿದ್ದಾರೆ.

4. ‘ದೇಶದಲ್ಲಿ 69 ಬಾರಿ ತೈಲೋತ್ಪನ್ನಗಳ ದರ ಏರಿಕೆ’

blank
ಕೊರೊನಾ ನಡುವೆ ದೇಶದಲ್ಲಿ 69 ಬಾರಿ ತೈಲೋತ್ಪನ್ನಗಳ ದರ ಏರಿಕೆಯಾಗಿದೆ. ಇದರಿಂದ ಕೇಂದ್ರ ಸರ್ಕಾರ ಬರೋಬ್ಬರಿ 4.91 ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸಿದೆ ಅಂತ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಹೇಳಿದ್ದಾರೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರ ನಿತ್ಯವೂ ಸುದ್ದಿಯಾಗುತ್ತಿದೆ. ಈ ವರ್ಷದ 7 ತಿಂಗಳ ಅವಧಿಯಲ್ಲಿ 69 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾಗಿದೆ. ಈ ತೈಲ ಬೆಲೆ ಏರಿಕೆಯಿಂದಲೇ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ ಸರಿ ಸುಮಾರು 5 ಲಕ್ಷ ಕೋಟಿ ರೂಪಾಯಿ ಆದಾಯ ಬಂದಿದೆ ಅಂತ ಚೌಧರಿ ತಿಳಿಸಿದ್ದಾರೆ.

5. 11ನೇ ವರ್ಷಕ್ಕೆ ಭೌತಶಾಸ್ತ್ರ ವಿಷಯದಲ್ಲಿ ಡಿಗ್ರಿ ಪಡೆದ ಬಾಲಕ
11 ವರ್ಷಕ್ಕೆ ಭೌತಶಾಸ್ತ್ರ ವಿಷಯದಲ್ಲಿ ಡಿಗ್ರಿ ಮುಗಿಸುವ ಮೂಲಕ ಬೆಲ್ಜಿಯಮ್ ಬಾಲಕನೋರ್ವ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ. 20 ವರ್ಷಕ್ಕೆ ಮುಗಿಸಬೇಕಾದ ಡಿಗ್ರಿಯನ್ನು ಲೌರೆಂಟ್ ಸಿಮೋನ್ಸ್ ಕೇವಲ 11 ವರ್ಷಕ್ಕೆ ಪೂರ್ಣಗೊಳಿಸಿದ್ದಾನೆ. ಅತೀ ಸಣ್ಣ ವಯಸ್ಸಿನಲ್ಲೇ ಈತ ಮಾಡಿದ ಸಾಧನೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಬೆಲ್ಜಿಯಂನ ಒಸ್ಟೆಂಡ್‍ನ ನಿವಾಸಿಯಾದ ಸಿಮೋನ್ಸ್ 11 ವರ್ಷಕ್ಕೆ ವಿಶ್ವವಿದ್ಯಾಲಯವೊಂದರಲ್ಲಿ ಡಿಗ್ರಿ ಸರ್ಟಿಫಿಕೇಟ್ ಪಡೆಯುವ ಮೂಲಕವಾಗಿ ಜಗತ್ತಿನ 2ನೇ ಅತೀ ಪುಟ್ಟ ಪದವೀಧರ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ.

6. ಬಾಹ್ಯಾಕಾಶ ಪ್ರವಾಸ ಮಾಡಿ ಬಂದ ಆರು ಜನರ ತಂಡ

blank
ಬಾಹ್ಯಾಕಾಶದಲ್ಲಿ ಈಗಾಗಲೇ ಹತ್ತು ಹಲವು ಸಾಧನೆ ಮಾಡಿರೋ ವಿಜ್ಞಾನಿಗಳು ಇದೀಗ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ.. ಬಾಹ್ಯಾಕಾಶ ಪ್ರವಾಸೋದ್ಯಮದ ಹೊಸ ಕನಸು ಕಂಡಿದ್ದ ಬ್ರಿಟನ್​ನ ಶ್ರೀಮಂತ ಉದ್ಯಮಿ ರಿಚರ್ಡ್​ ಬ್ರಾನ್​ಸನ್ ಆ್ಯಂಡ್ ಟೀಂ ಗಗನಯಾನ ಮಾಡಿದೆ.. 6 ಜನರ ತಂಡದೊಂದಿಗೆ ವರ್ಜಿನ್‌ ನೌಕೆಯ ಮೂಲಕ ನಭಕ್ಕೆ ಹಾರಿ ಮರಳಿ ಬಂದಿದೆ. ವರ್ಜಿನ್ ಗ್ಯಾಲಕ್ಟಿಕ್‌ನ VSS ಯೂನಿಟಿ ಎಂಬ ಗಗನ ನೌಕೆ ಮೂಲಕ ಗಗನ ಪ್ರವಾಸ ಮಾಡಿದ್ದಾರೆ. ಅಮೆರಿಕಾದ ನ್ಯೂ ಮೆಕ್ಸಿಕೋದಿಂದ ಈ ಗಗನನೌಕೆ ಬಾಹ್ಯಾಕಾಶದತ್ತ ಪ್ರಯಾಣ ಮಾಡಲಾಗಿತ್ತು. ಒಟ್ಟು ಒಂದು ಗಂಟೆ 30 ನಿಮಿಷದ ಕಾಲ ಈ ತಂಡ ಗಗನಯಾನ ಪ್ರಯಾಣ ಮಾಡಿದೆ.

7. ಕೊರೊನಾ ಕಥೆಯನ್ನೇ ಸಿನಿಮಾ ಮಾಡಿದ ಚೀನಾ!
ಜಗತ್ತಿಗೇ ಕೊರೊನಾ ಹರಡಲು ಕಾರಣವಾದ ಚೀನಾಗೆ ಅಮೆರಿಕಾ ಸೇರಿ ಅದೆಷ್ಟೋ ದೇಶಗಳು ಇಂದಿಗೂ ಛೀಮಾರಿ ಹಾಕುತ್ತಿವೆ. ಆದ್ರೆ, ಕೊರೊನಾ ಹಂಚಿದ ಚೀನಾ ಅದೇ ವೈರಸ್​ನ ಕಥೆಯಿಟ್ಟುಕೊಂಡೇ ಗಳಿಕೆ ಮಾಡಲು ಪ್ರಾರಂಭಿಸಿದೆ. ಕೊರೊನಾ ವಿರುದ್ಧ ಚೀನಾ ವೈದ್ಯರು ಹೋರಾಟ ನಡೆಸಿದ್ದನ್ನೇ ಕಥಾವಸ್ತುವನ್ನಾಗಿಟ್ಟುಕೊಂಡು ಚೀನಾ ಚೈನೀಸ್ ಡಾಕ್ಟರ್ ಹೆಸರಿನಲ್ಲಿ ಸಿನಿಮಾ ತಯಾರಿಸಿದೆ. ಅಲ್ಲದೇ ಕಳೆದ 3 ದಿನಗಳ ಹಿಂದೆ ಸಿನಿಮಾ ಬಿಡುಗಡೆಯಾಗಿದ್ದು, 300 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ.

8. 2ನೇ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು

2ನೇ ಟಿ-20 ಪಂದ್ಯದಲ್ಲಿ ಮಹಿಳಾ ಇಂಗ್ಲೆಂಡ್​ ತಂಡದ ವಿರುದ್ಧ ಮಹಿಳಾ ಭಾರತ ತಂಡ ಗೆದ್ದು ಬೀಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ 4 ವಿಕೆಟ್‌ಗೆ 148 ರನ್ ಕಲೆ ಹಾಕಿತ್ತು. ಪ್ರತಿಯಾಗಿ 149 ರನ್​ ಟಾರ್ಗೆಟ್​ ಬೆನ್ನತ್ತಿದ್ದ ಮಹಿಳಾ ಇಂಗ್ಲೆಂಡ್ ತಂಡ 8 ವಿಕೆಟ್‌ಗೆ 140 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತೀಯರ ಮಹಿಳಾ ತಂಡ 2ನೇ ಟಿ-20 ಪಂದ್ಯದಲ್ಲಿ 8 ರನ್​ಗಳಿಂದ ಗೆಲುವು ದಾಖಲಿಸಿದೆ. ಸದ್ಯ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿವೆ. ಇನ್ನು, ಸರಣಿ ಅಂತಿಮ ಪಂದ್ಯ ಜುಲೈ 14ರಂದು ನಡೆಯಲಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

9. ‘ಯೂರೋ-2020’ ಕಪ್ ಮುಡಿಗೇರಿಸಿಕೊಂಡ ಇಟಲಿ

ಇಂಗ್ಲೆಂಡ್‌ನ ವೆಂಬ್ಲಿ ಸ್ಟೇಡಿಯಂನಲ್ಲಿ ನಡೆದ ಯೂರೋ 2020 ರೋಚಕ ಫೈನಲ್ಸ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಇಟಲಿ ಗೆದ್ದು ಬೀಗಿದೆ. ಈ ಮೂಲಕ ಯುಇಎಫ್‌ಎ ಯೂರೋ ಕಪ್​​ ಅನ್ನು ತನ್ನದಾಗಿಸಿಕೊಂಡಿದೆ. ಇಟಲಿ ಮತ್ತು ಇಂಗ್ಲೆಂಡ್ ಎರಡೂ ಬಲಿಷ್ಠ ತಂಡಗಳೇ ಆಗಿದ್ದವು. ಅದರಂತೆ ಎರಡೂ ತಂಡಗಳು 90 ನಿಮಿಷಗಳಲ್ಲಿ 1-1 ಗೋಲ್​ ಬಾರಿಸಿ ಸಮಶಕ್ತಿ ಪ್ರದರ್ಶನ ಮಾಡಿದ್ದವು. ಆದ್ರೆ, ಪೆನಾಲ್ಟಿ ಕಿಕ್​​ನಲ್ಲಿ 3-2 ಅಂತರದಿಂದ ಇಟಲಿ ಹ್ಯಾರಿ ಕೇನ್​ ನೇತೃತ್ವದ ಇಂಗ್ಲೆಂಡ್ ತಂಡವನ್ನು ಮಣಿಸಿ ಜಯಭೇರಿ ಬಾರಿಸಿದೆ.

10. ‘ಕರುನಾಡು ಚಕ್ರವರ್ತಿ’ಗೆ 59ನೇ ಹುಟ್ಟುಹಬ್ಬದ ಸಂಭ್ರಮ

blank
ಹ್ಯಾಟ್ರಿಕ್ ಹೀರೋ ಶಿವರಾಜ್​​ ಕುಮಾರ್ ಇಂದು 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಕುಟುಂಬದೊಂದಿಗೆ ಕೇಕ್​ ಕಟ್ ಮಾಡಿ ಸರಳ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.. ಪ್ರತಿ ವರ್ಷದಂತೆ ಈ ವರ್ಷ ಅದ್ಧೂರಿ ಹುಟ್ಟುಹಬ್ಬ ಆಚರಣೆ ಮಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಬದಲಾಗಿ ಕೊರೊನಾ ಲಸಿಕೆ ಹಾಕಿಸಿಕೊಂಡು ಎಚ್ಚರದಿಂದಿರಿ ಅಂತ ಶಿವಣ್ಣ ಮನವಿ ಮಾಡಿದ್ದಾರೆ. ಇತ್ತ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಶಿವಣ್ಣ ಅಭಿನಯದ ಬಹುನಿರೀಕ್ಷಿತ ಭಜರಂಗಿ – 2 ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಅಲ್ಲದೇ ಶಿವಣ್ಣನ ಮುಂದಿನ 3 ಚಿತ್ರಗಳ ಟೈಟಲ್​ ಕೂಡ ಲಾಂಚ್ ಆಗಲಿದೆ. ಇನ್ನೊಂದೆಡೆ ರಾಜಾಜಿನಗರದಲ್ಲಿ ಅಭಿಮಾನಿಗಳು ಫುಡ್​ ಕಿಟ್​ ವಿತರಣೆ ಮಾಡಲಿದ್ದಾರೆ.

The post ‘ದೇಶದಲ್ಲಿ 69 ಬಾರಿ ತೈಲೋತ್ಪನ್ನಗಳ ದರ ಏರಿಕೆ’- ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link