ಇಂಗ್ಲೆಂಡ್​ ಸರಣಿಯಲ್ಲಿ ಮೇಜರ್​ ಸರ್ಜರಿ.. ಉಪನಾಯಕನನ್ನೇ ಕೈ ಬಿಡ್ತಾರಾ ಕಿಂಗ್ ಕೊಹ್ಲಿ?

ಇಂಗ್ಲೆಂಡ್​ ಸರಣಿಯಲ್ಲಿ ಮೇಜರ್​ ಸರ್ಜರಿ.. ಉಪನಾಯಕನನ್ನೇ ಕೈ ಬಿಡ್ತಾರಾ ಕಿಂಗ್ ಕೊಹ್ಲಿ?

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಸೋಲುಂಡಿರುವ ಟೀಮ್​ ಇಂಡಿಯಾ ಇಂಗ್ಲೆಂಡ್​​ ವಿರುದ್ಧದ ಸರಣಿಯಲ್ಲಿ ಮೇಜರ್​​ ಸರ್ಜರಿಗೆ ಮುಂದಾಗಿದೆ. ಪರಿಣಾಮ ಉಪ ನಾಯಕನೇ ಬೆಂಚ್​ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಗೆಲ್ಲೋ ಮಹಾತ್ವಾಕಾಂಕ್ಷೆಯೊಂದಿಗೆ ಆಂಗ್ಲರ ನಾಡಿಗೆ ತೆರಳಿದ್ದ ಟೀಮ್​ ಇಂಡಿಯಾ ಸೋಲುಂಡು ನಿರಾಸೆ ಮೂಡಿಸಿದೆ. ಸೋಲಿನ ಬೆನ್ನಲ್ಲೇ ಹಲವು ಟೀಕೆ-ಟಿಪ್ಪಣಿಗಳು ಕೊಹ್ಲಿ ಪಡೆಗೆ ತುರಿ ಬಂದಿದ್ವು. ಇಷ್ಟು ದಿನ ಸೋಲಿನ ಆತ್ಮವಲೋಕನಕ್ಕೆ ಜಾರಿದ್ದ ಟೀಮ್​ ಮ್ಯಾನೇಜ್​ಮೆಂಟ್​ ಇದೀಗ ಇಂಗ್ಲೆಂಡ್​ ಸರಣಿಯಲ್ಲಿ ಮೇಜರ್​​ ಸರ್ಜರಿ ಮಾಡಲು ಮುಂದಾಗಿದೆ.

ಇಂಗ್ಲೆಂಡ್​ ಸರಣಿಯಿಂದ ಉಪನಾಯಕನಿಗೇ ಕೊಕ್​..?
ಬೆಂಚ್​​ಗೆ ಸೀಮಿತವಾಗ್ತಾರಾ ಇನ್​ಕನ್ಸಿಸ್ಟೆಂಟ್​​ ರಹಾನೆ..?

ಟೀಮ್​ ಇಂಡಿಯಾ ಸೋಲಿಗೆ ಕಾರಣ ಏನು..? ಎಂಬ ಬಗ್ಗೆ ಪರಾಮರ್ಷೆ ನಡೆಸಿರೋ ಟೀಮ್​ ಮ್ಯಾನೇಜ್​ಮೆಂಟ್​​ ಮಿಡಲ್​ ಆರ್ಡರ್​​​ ವೈಫಲ್ಯ ಎಂಬ ಉತ್ತರ ಕಂಡುಕೊಂಡಿದೆ. ಹೀಗಾಗಿ ಈ ವೈಫಲ್ಯದ ಮೇಲೆ ವರ್ಕೌಟ್​ ಮಾಡಲು ನಿರ್ಧರಿಸಿದ್ದು, ಇಂಗ್ಲೆಂಡ್​ ಎದುರಿನ ಸರಣಿಯಲ್ಲಿ ಬದಲಾವಣೆಯೊಂದಿಗೆ ಕಣಕ್ಕಿಳಿಯಲು ಸಿದ್ಧತೆ ನಡೆಸಿದೆ. ಟೀಮ್​ ಇಂಡಿಯಾ ಉಪನಾಯಕನನ್ನೇ ಡ್ರಾಪ್​ ಮಾಡೋದು ಕೂಡ ಗೇಮ್​​ಪ್ಲಾನ್​ನಲ್ಲಿದೆಯಂತೆ.

ಯೆಸ್​​, ನೀಡ್ತಾ ಇರೋ ಇನ್​ಕನ್ಸಿಸ್ಟೆನ್ಸಿ ಪ್ರದರ್ಶನ ರಹಾನೆಗೆ ಮುಳುವಾಗಿದೆ. ಆಸ್ಟ್ರೇಲಿಯಾ ಪ್ರವಾಸದ ಮೆಲ್ಬರ್ನ್​ ಟೆಸ್ಟ್​​ನಲ್ಲಿ ಶತಕ ಸಿಡಿಸಿದ್ದ ರಹಾನೆ ಆ ಬಳಿಕ 12 ಇನ್ನಿಂಗ್ಸ್​​​ಗಳನ್ನಾಡಿದ್ದಾರೆ. ಆ 12 ಇನ್ನಿಂಗ್ಸ್​​ಗಳಲ್ಲಿ ಕಲೆ ಹಾಕಿರೋದು ಕೇವಲ 263 ರನ್​ ಮಾತ್ರ. ಈ ಪೈಕಿ 1 ಬಾರಿ ಮಾತ್ರ 50ರ ಗಡಿ ದಾಟಿದ್ದಾರಷ್ಟೇ.

blank

ಕೇವಲ ಇನ್​ಕನ್ಸಿಸ್ಟೆಂಟ್​ ಪ್ರದರ್ಶನ ಮಾತ್ರವಲ್ಲ.. ಕಟ್ಟುತ್ತಿರುವ ಸ್ಲೋ ಇನ್ನಿಂಗ್ಸ್​​​ ಕೂಡ ತಂಡಕ್ಕೆ ಮುಳುವಾಗ್ತಿದೆ. ಈ ಬಗ್ಗೆ ಮಾತನಾಡಿದ್ದ ಕ್ರಿಕೆಟ್​ ವಿಶ್ಲೇಷಕ ದೀಪ್​ ದಾಸ್​ಗುಪ್ತಾ ಕೂಡ 2015-16ರಲ್ಲಿದ್ದ ರಹಾನೆ ಈಗಿನ ರಹಾನೆಯಲ್ಲ ಎಂದು ಹೇಳಿದ್ರು. ಅಂದಿದ್ದ ಫುಟ್​ವರ್ಕ್​, ಬ್ಯಾಟಿಂಗ್​ ಟೆಕ್ನಿಕ್​ ಎಲ್ಲಾ ಮಾಯವಾಗಿದೆ ಅನ್ನೋ ಹೇಳಿಕೆ ನೀಡಿದ್ರು. ಅದು ನಿಜ ಕೂಡ. 2015-16ರಲ್ಲಿ ಕ್ವಿಕ್​ ಬ್ಯಾಟಿಂಗ್​ ನಡೆಸ್ತಾ ಇದ್ದ ರಹಾನೆ ಈಗ ಮಂಕಾಗಿರೋದು ಕಳೆದ ಕೆಲ ಸರಣಿಗಳಿದಂಲೂ ಕಂಡು ಬರ್ತಿದೆ.

ಇದೆಲ್ಲದರ ಹೊರತಾಗಿ ಇಂಗ್ಲೆಂಡ್​ ವಿರುದ್ಧ ರಹಾನೆ ಉತ್ತಮ ಅಂಕಿ-ಅಂಶಗಳನ್ನೇ ಹೊಂದಿದ್ದಾರೆ. ಅದಲ್ಲದೇ ಉಪನಾಯಕನಾಗಿಯೂ ತಂಡಕ್ಕೆ ಸೂಕ್ತ ಕೊಡುಗೆಯನ್ನೇ ನೀಡಿದ್ದಾರೆ. ಹೀಗಾಗಿ ರಹಾನೆಯನ್ನ ತಂಡದಿಂದ ಕೈ ಬಿಡೋದು ಕೂಡ ಮ್ಯಾನೇಜ್​ಮೆಂಟ್​​ ಅಷ್ಟೇ ಕಷ್ಟದ ನಿರ್ಧಾರವಾಗಿದೆ.

The post ಇಂಗ್ಲೆಂಡ್​ ಸರಣಿಯಲ್ಲಿ ಮೇಜರ್​ ಸರ್ಜರಿ.. ಉಪನಾಯಕನನ್ನೇ ಕೈ ಬಿಡ್ತಾರಾ ಕಿಂಗ್ ಕೊಹ್ಲಿ? appeared first on News First Kannada.

Source: newsfirstlive.com

Source link