ಮಾಸ್ಕ್​ ಹಾಕ್ದೆ ವಾಹನ ದಾಖಲೆ ಪರಿಶೀಲಿಸುತ್ತಿದ್ದ ಎಎಸ್​​ಐಗೆ ಲಾರಿ ಚಾಲಕ ತರಾಟೆ

ಮಾಸ್ಕ್​ ಹಾಕ್ದೆ ವಾಹನ ದಾಖಲೆ ಪರಿಶೀಲಿಸುತ್ತಿದ್ದ ಎಎಸ್​​ಐಗೆ ಲಾರಿ ಚಾಲಕ ತರಾಟೆ

ಚಾಮರಾಜನಗರ: ಜನರಿಗೆ ಅರಿವು ಮೂಡಿಸುವ ಮೂಲಕ ಕೊರೊನಾ ಬಗ್ಗೆ ಎಚ್ಚರಿಕೆ ವಹಿಸಬೇಕಿದ್ದ ಅಧಿಕಾರಿಯೇ ಮಾಸ್ಕ್​ ಹಾಕದೆ ಕರ್ತವ್ಯ ನಿರ್ವಹಿಸುತ್ತಿದ್ದಕ್ಕೆ ಲಾರಿ ಚಾಲಕ ತರಾಟೆ ತೆಗೆದುಕೊಂಡಿರುವ ಘಟನೆ ಜಿಲ್ಲೆಯ ಪುಣಜನೂರು ಚೆಕ್ ಪೋಸ್ಟ್​​ನಲ್ಲಿ ನಡೆದಿದೆ.

ಪುಣಜನೂರು ಚೆಕ್ ಪೋಸ್ಟ್​​ನಲ್ಲಿ ಮಾಸ್ಕ್ ಹಾಕದೇ ಎ.ಎಸ್.ಐ ವಾಹನಗಳ ದಾಖಲೆ ಪರಿಶೀಲಿಸುತ್ತಿದ್ದರು. ಇದೇ ಮಾರ್ಗವಾಗಿ ಬಂದ ತಮಿಳುನಾಡು ಮೂಲದ ಲಾರಿಯನ್ನು ತಡೆದು ಪೊಲೀಸರು ದಾಖಲೆ ಪರಿಶೀಲನೆ ನಡೆಸಿದ್ದರು. ಈ ವೇಳೆ ಎಎಸ್​​ಐ ಮಾಸ್ಕ್​ ಧರಿಸದಿರುವುದನ್ನು ಗಮಿಸಿದ ಚಾಲಕ ಇದನ್ನು ಪ್ರಶ್ನೆ ಮಾಡಿದ್ದಾರೆ.

blank

ನೀವೇ ಮಾಸ್ಕ್ ಹಾಕದೆ ಹೇಗೆ ಪರಿಶೀಲನೆ ಮಾಡುತ್ತೀರಿ? ಸರ್ಕಾರ ಮಾಸ್ಕ್ ಹಾಕಬೇಡಿ ಅಂತ ಹೇಳಿದಿಯಾ? ಮಾಸ್ಕ್ ಹಾಕ್ಕೊಂಡು ಕರ್ತವ್ಯ ಮಾಡಿ. ಮಾಸ್ಕ್ ಹಾಕದೆ ನಮ್ಮನ್ನೇಕೆ ಗಾಡಿಯಿಂದ ಇಳಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದು, ಲಾರಿ ಚಾಲಕನ ಪ್ರಶ್ನೆಗಳಿಗೆ ಎಎಸ್​​ಐ ತಬ್ಬಿಬ್ಬಾಗಿದ್ದಾರೆ. ಅಲ್ಲದೇ ಲಾರಿ ಚಾಲಕನ ಪ್ರಶ್ನೆಗೆ ಉತ್ತರಿಸಲಾಗದೆ ಕೊನೆಗೂ ಎಎಸ್​​ಐ ಮಾಸ್ಕ್ ಧರಿಸಿದ್ದಾರೆ. ಈ ಕುರಿತ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

The post ಮಾಸ್ಕ್​ ಹಾಕ್ದೆ ವಾಹನ ದಾಖಲೆ ಪರಿಶೀಲಿಸುತ್ತಿದ್ದ ಎಎಸ್​​ಐಗೆ ಲಾರಿ ಚಾಲಕ ತರಾಟೆ appeared first on News First Kannada.

Source: newsfirstlive.com

Source link