ಬಿಜೆಪಿ ನಾಯಕರೇ ಟಾರ್ಗೆಟ್.. ಆತ್ಮಾಹುತಿ ಬಾಂಬ್ ದಾಳಿ ಮೂಲಕ ಯುಪಿನಲ್ಲಿ ಸರಣಿ ಸ್ಫೋಟಕ್ಕೆ ಸ್ಕೆಚ್

ಬಿಜೆಪಿ ನಾಯಕರೇ ಟಾರ್ಗೆಟ್.. ಆತ್ಮಾಹುತಿ ಬಾಂಬ್ ದಾಳಿ ಮೂಲಕ ಯುಪಿನಲ್ಲಿ ಸರಣಿ ಸ್ಫೋಟಕ್ಕೆ ಸ್ಕೆಚ್

ನವದೆಹಲಿ: ಉತ್ತರ ಪ್ರದೇಶದಲ್ಲಿ ಎಟಿಎಸ್ ಅಧಿಕಾರಿಗಳು ನಿನ್ನೆ ಇಬ್ಬರು ಅಲ್​ ಖೈದಾ ಉಗ್ರರನ್ನ ಬಂಧಿಸಿ, ದೊಡ್ಡ ವಿಧ್ವಂಸಕ ಕೃತ್ಯವೊಂದನ್ನ ತಪ್ಪಿಸಿದ್ದಾರೆ. ಬಂಧಿತ ಉಗ್ರರಿಂದ ಸ್ಫೋಟಕ ವಸ್ತು ಹಾಗೂ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದು ತನಿಖೆಯನ್ನ ಮುಂದುವರಿಸಿದ್ದಾರೆ. ಲೆಟೆಸ್ಟ್ ವಿಷಯ ಏನಂದ್ರೆ, ಬಂಧಿತ ಉಗ್ರರಿಗೆ ಮಾನವ ಬಾಂಬ್​ ದಾಳಿಯ ತರಬೇತಿ ಇತ್ತು ಅಂತಾ ಲಖನೌ ಎಡಿಜಿಪಿ (ಲಾ ಅಂಡ್ ಆರ್ಡರ್​) ಪ್ರಶಾಂತ್ ಕುಮಾರ್​ ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ಬಂಧಿತರಿಂದ ಎರಡು ಪ್ರೆಶರ್ ಕುಕ್ಕರ್ ಬಾಂಬ್​​, ಒಂದು ಡೆಟೊನೇಟರ್ ಮತ್ತು 7 ಕೆಜಿ ಸ್ಫೋಟಕ ಅವರ ಬಳಿಯಿತ್ತು. ಬಂಧಿತರು ಅಲ್​ ಖೈದಾ ಸಂಘಟನೆಯ ಜೊತೆಗೆ ಸಂಪರ್ಕ ಹೊಂದಿರೋದು ಗೊತ್ತಾಗಿದೆ. ಉತ್ತರ ಪ್ರದೇಶದ ಎಟಿಎಸ್​ ತಂಡ ದೊಡ್ಡ ಭಯೋತ್ಪಾದಕ ಘಟಕದ ಜಾಲವನ್ನ ಭೇದಿಸಿದೆ ಎಂದಿದ್ದಾರೆ.

ಆಘಾತಕಾರಿ ವಿಚಾರ ಏನಂದರೆ, ಬಂಧಿತ ಉಗ್ರರು ಮಾನವ ಬಾಂಬ್ ತರಬೇತಿ ಇತ್ತು. ಇವರು ತಮ್ಮ ಇತರೆ ಸದಸ್ಯರಿಗೆ ತರಬೇತಿಯನ್ನ ನೀಡ್ತಿದ್ದರು. ಯುವಕರನ್ನು ಸೇರಿಸಿಕೊಂಡು ಹಣದ ಆಮಿಷವೊಡ್ಡಿ ಮಾನವ ಬಾಂಬರ್ ಟ್ರೈನಿಂಗ್ ಕೊಡಲಾಗ್ತಿತ್ತು ಅನ್ನೋ ಅಂಶ ತನಿಖೆಯಿಂದ ಬಯಲಾಗಿದೆ ಎಂದಿದ್ದಾರೆ.

ಜೊತೆಗೆ ಇವರು ಬಿಜೆಪಿ ಸಂಸದರು ಹಾಗೂ ಹಿರಿಯ ನಾಯಕರನ್ನ ಟಾರ್ಗೆಟ್ ಮಾಡಿದ್ದರು. ಕೆಲವು ಪ್ರಮುಖ ನಾಯಕರನ್ನ ಗುರಿಯಾಗಿಸಿಕೊಂಡು ಸ್ಫೋಟ ನಡೆಸಲು ಪ್ಲಾನ್ ಮಾಡಿದ್ದರು ಅನ್ನೋದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ಉ.ಪ್ರದೇಶದಲ್ಲಿ ಬಾಂಬ್ ಸ್ಫೋಟಕ್ಕೆ ಸ್ಕೆಚ್; ಇಬ್ಬರು ಶಂಕಿತ ಉಗ್ರರು ಅರೆಸ್ಟ್

The post ಬಿಜೆಪಿ ನಾಯಕರೇ ಟಾರ್ಗೆಟ್.. ಆತ್ಮಾಹುತಿ ಬಾಂಬ್ ದಾಳಿ ಮೂಲಕ ಯುಪಿನಲ್ಲಿ ಸರಣಿ ಸ್ಫೋಟಕ್ಕೆ ಸ್ಕೆಚ್ appeared first on News First Kannada.

Source: newsfirstlive.com

Source link