ಬೆಸ್ಟ್​ ನಡುವೆ ದಿ ಬೆಸ್ಟ್​ ಆಯ್ಕೆಯ ತಲೆನೋವು -3ನೇ ಕ್ರಮಾಂಕದಲ್ಲಿ ಕಣಕ್ಕಿಳಿತಾರಾ ರಾಹುಲ್​?

ಬೆಸ್ಟ್​ ನಡುವೆ ದಿ ಬೆಸ್ಟ್​ ಆಯ್ಕೆಯ ತಲೆನೋವು -3ನೇ ಕ್ರಮಾಂಕದಲ್ಲಿ ಕಣಕ್ಕಿಳಿತಾರಾ ರಾಹುಲ್​?

ಟಿ20 ವಿಶ್ವಕಪ್​ ಟೂರ್ನಿಗೆ ತಂಡದ ಪ್ರತಿಯೊಂದು ಸ್ಲಾಟ್​ಗೂ​ ಪೈಪೋಟಿ ನಡೀತಿರೋದು ಗೊತ್ತೆ ಇದೆ. ಆದರಲ್ಲೂ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯೋ ಸೂಚನೆ ನೀಡಿರೋದ್ರಿಂದ 3ನೇ ಕ್ರಮಾಂಕಕ್ಕೆ ಯಾರು ಅನ್ನೋ ಚರ್ಚೆ ಆರಂಭವಾಗಿದೆ.

ಟಿ20 ವಿಶ್ವಕಪ್​ಗೇನೋ ದಿನಾಂಕ ಫಿಕ್ಸ್ ಆಗಿದ್ದು, ಕ್ರಿಕೆಟ್​ನ ಎಲ್ಲಾ ತಂಡಗಳು ಚುಟುಕು ಸಮರಕ್ಕಾಗಿ ಭರ್ಜರಿ ತಯಾರಿ ನಡೆಸ್ತಿವೆ. ಆದರೆ ಟೀಮ್​​ ಇಂಡಿಯಾಗೆ ಮಾತ್ರ ಟೆನ್ಶನ್​ ಶುರುವಾಗಿದೆ. ತಂಡದ ಬೆಂಚ್​ ಸ್ಟ್ರೆಂತ್​​ ಹೆಚ್ಚಾಗಿರೋದು ಒಂದೆಡೆಯಾದ್ರೆ, ಡೆಬ್ಯೂ ಆಟಗಾರರ ಭರ್ಜರಿ ಪ್ರದರ್ಶನ ಮತ್ತೊಂದೆಡೆ. ಹಾಗಾಗಿ ಯಾರನ್ನ ಯಾವ ಜಾಗದಲ್ಲಿ ಆಡಿಸಬೇಕು ಅನ್ನೋ ಗೊಂದಲ ಟೀಮ್​​​ ಮ್ಯಾನೇಜ್​ಮೆಂಟ್​ ಅನ್ನ ಸಿಕ್ಕಾಪಟ್ಟೆ ಕಾಡ್ತಿದೆ.

blank

ಕೊಹ್ಲಿ ಆರಂಭಿಕನಾದ್ರೆ 3ನೇ ಕ್ರಮಾಂಕಕ್ಕೆ ಯಾರು?
ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯೋ ಸೂಚನೆ ನೀಡಿರೋದ್ರಿಂದ ಇಷ್ಟು ದಿನ ಧವನ್​ ಪರಿಸ್ಥಿತಿ ಏನು ಅನ್ನೋ ಪ್ರಶ್ನೆ ಉದ್ಭವವಾಗಿತ್ತು. ಇದೀಗ ಒಂದು ವೇಳೆ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿದ್ರೆ, 3ನೇ ಕ್ರಮಾಂಕಕ್ಕೆ ಯಾರು ಉತ್ತರ ಅನ್ನೋ ಮತ್ತೊಂದು ಪ್ರಶ್ನೆ ಹುಟ್ಟಿಕೊಂಡಿದೆ. ಸದ್ಯ ತಂಡದಲ್ಲಿ ಮೂರನೇ ಸ್ಲಾಟ್​ನಲ್ಲಿ ಕಣಕ್ಕಿಳಿಯೋಕೆ ಇಬ್ಬರ ನಡುವೆ ಪೈಪೋಟಿಯಿದೆ.

blank

3ನೇ ಸ್ಲಾಟ್​​ನಲ್ಲಿ ಸೂರ್ಯಕುಮಾರ್ ಕಣಕ್ಕಿಳಿತಾರಾ?
ಕನ್ನಡಿಗ ಕೆ.ಎಲ್​.ರಾಹುಲ್​ ಮತ್ತು ಸೂರ್ಯಕುಮಾರ್ ಯಾದವ್​. ಈ ಇಬ್ಬರೇ ಕೊಹ್ಲಿ ಸ್ಥಾನಕ್ಕೆ ಸೂಕ್ತ ಅನ್ನೋ ಮಾತುಗಳು ಕೇಳಿ ಬರ್ತಿವೆ. ಹಲವು ವಿಶ್ಲೇಷಕರು ಕೂಡ ಇದೇ ಮಾತುಗಳನ್ನಾಡಿದ್ದಾರೆ. ಈಗಾಗಲೇ ಟಿ20 ಮಾದರಿಯಲ್ಲಿ ಇಬ್ಬರೂ ಬ್ಯಾಟ್ಸ್​ಮನ್​ಗಳು ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಆದ್ರೆ, ರಾಹುಲ್​ಗೆ ರಾಷ್ಟ್ರೀಯ ತಂಡದ ಪರ ಆಡಿದ ಅನುಭವ ಪ್ಲಸ್​ ಪಾಯಿಂಟ್​ ಆಗಿದೆ.

ಹಾಗೆಂದ ಮಾತ್ರಕ್ಕೆ ಐಪಿಎಲ್​ನಲ್ಲಿ ಪ್ರಾಮಿಸಿಂಗ್​ ಪ್ರದರ್ಶನವನ್ನ ನೀಡಿದ ಸೂರ್ಯ ಕುಮಾರ್​ರನ್ನೂ ಕಡೆಗಣಿಸುವಂತಿಲ್ಲ. ಈಗಾಗಲೇ ಈ ಬಗ್ಗೆ ಮಾತನಾಡಿರುವ ಸಂಜಯ್​ ಮಂಜ್ರೇಕರ್​ ಸೂರ್ಯ ಕುಮಾರ್​ ಯಾದವ್​ ಸೂಕ್ತ ಬ್ಯಾಟ್ಸ್​ಮನ್​ ಎಂಬ ಮಾತನ್ನಾಡಿದ್ದಾರೆ. ಇಬ್ಬರು ಸ್ಮಾರ್ಟ್​ ಆಟಗಾರರ ನಡುವೆ ಹೀಗೆ ಪೈಪೋಟಿ ಏರ್ಪಟ್ಟಿರುವಾಗ, ಮ್ಯಾನೇಜ್​ಮೆಂಟ್​​ ಯಾವ ನಿರ್ಧಾರ ಕೈಗೊಳ್ಳುತ್ತೇ ಅನ್ನೋದನ್ನ ಕಾದುನೋಡಬೇಕಿದೆ.

The post ಬೆಸ್ಟ್​ ನಡುವೆ ದಿ ಬೆಸ್ಟ್​ ಆಯ್ಕೆಯ ತಲೆನೋವು -3ನೇ ಕ್ರಮಾಂಕದಲ್ಲಿ ಕಣಕ್ಕಿಳಿತಾರಾ ರಾಹುಲ್​? appeared first on News First Kannada.

Source: newsfirstlive.com

Source link